ಪಡುಬಿದ್ರಿ: ಯುವವಾಹಿನಿ ಯುವ ಮನಸ್ಸುಗಳ ಶಕ್ತಿಯಾಗಿದ್ದು ಇಲ್ಲಿ ಅಧಿಕಾರ, ಅವಧಿಗಳು ಮುಖ್ಯವಲ್ಲ. ನಮ್ಮವರು ಎಂಬ ಭಾವನೆಯ ಜೊತೆಗೆ ನಮ್ಮ ಸಂಸ್ಥೆ ಎನ್ನುವ ಅಭಿಮಾನವಿದೆ. ಸಮಾಜಕ್ಕಾಗಿ ದುಡಿಯುವ ಸಂಕಲ್ಪಿತ ಆಶಯವಿದೆ. ಕುಟುಂಬ ಕಲರವದಂತಹ ಕಾರ್ಯಕ್ರಮಗಳು ಪ್ರತಿ ಘಟಕಗಳಲ್ಲೂ ನಡೆಯಬೇಕಿದೆ ಎಂದು ಲಯನ್ಸ್ ಜಿಲ್ಲೆ 317ಡಿ, ಲಿಯೋ ಮಾಜಿ ಜಿಲ್ಲಾಧ್ಯಕ್ಷರಾದ ಕವನ್ ರಾಜ್ ಕುಬೆವೂರು
ಹೇಳಿದರು.
ಅವರು ಪಡುಬಿದ್ರಿ ಸುಜ್ಞಾನ್ ಕಾಲೋನಿಯ ಸಭಾಗೃಹದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ 02-06-2024 ರವಿವಾರದಂದು ಘಟಕದ ಸದಸ್ಯರಿಗಾಗಿ ಜರಗಿದ ಕುಟುಂಬ ಕಲರವ-2024 ಆಟ-ಊಟ-ಕೂಟ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಎಂಬಿಎಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಪ್ರಧಾನ ಅರ್ಚಕರಾದ ಚಂದ್ರಶೇಖರ ಶಾಂತಿ, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ(ರಿ.) ಇದರ ಅದ್ಯಕ್ಷರಾದ
ವೈ ಸುಧೀರ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಸಂಘಟನಾ ಕಾರ್ಯದರ್ಶಿ ಭಾರತಿ ಭಾಸ್ಕರ್, ಕಾರ್ಯದರ್ಶಿ ನಿಖಿಲ್ ಪೂಜಾರಿ ಉಪಸ್ಥಿತರಿದ್ದರು.
ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷರಾದ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು. ಸುಗಂಧಿ ಶ್ಯಾಮ್, ಸುಜಾತ ಹರೀಶ್ ಪ್ರಾರ್ಥಿಸಿದರು. ಘಟಕದ ಅಧ್ಯಕ್ಷರಾದ ಅಶ್ವಥ್ ಸ್ವಾಗತಿಸಿದರು.
ಮಾಜಿ ಅಧ್ಯಕ್ಷ ಸುಜಿತ್ ಕುಮಾರ್ ಪ್ರಸ್ತಾವನೆಗೈದರು. ರವಿರಾಜ್ ಕೋಟ್ಯಾನ್ ಸ್ಫರ್ದೆಗಳನ್ನು ನಡೆಸಿ ಕೊಟ್ಟರು. ಚೈತ್ರ ಮನೋಹರ್ ಹಾಗೂ ತೇಜಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಹಸನ ಸ್ಪರ್ಧೆಯಲ್ಲಿ ಚೈತ್ರಾ ಮನೋಹರ್ ತಂಡ, ಪೂಜಾ ವಿಧಿತ್ ತಂಡ , ಐಶ್ವರ್ಯಾ ಕವನ್ ರಾಜ್ ತಂಡ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪಡೆಯಿತು ಹಾಗೂ ಉತ್ತಮ ನಟ, ನಟಿ ಪ್ರಶಸ್ತಿಯನ್ನು ಪ್ರಸಾದ್ ವೈ ಕೋಟ್ಯಾನ್, ಲಾವಣ್ಯ ಪಲಿಮಾರು, ಹಾಗೂ ಕೃತಿಕಾ ಪಲಿಮಾರು ಪಡೆದುಕೊಂಡರು. ಕಾರ್ಯದರ್ಶಿ ನಿಖಿಲ್ ಪೂಜಾರಿ ವಂದಿಸಿದರು.