ಪಡುಬಿದ್ರಿ: ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ವತಿಯಿಂದ, ಕೆಮುಂಡೇಲು ಪಾಂಡುರಂಗ ಭಜನಾ ಮಂದಿರದಲ್ಲಿ ನಡೆಯುತ್ತಿದ್ದ ಹನ್ನೆರಡು ದಿನಗಳವರೆಗಿನ ಅಹೋರಾತ್ರಿ ಭಜನಾ ನಾಮ ಸಂಕೀರ್ತನೆಯಲ್ಲಿ ಒಂದು ದಿನದ ಶ್ರಮದಾನ ಸೇವೆಯನ್ನು ದಿನಾಂಕ 26-05-2024 ಆದಿತ್ಯವಾರದಂದು ನೆರವೇರಿಸಲಾಯಿತು. ಘಟಕದ ಸದಸ್ಯರು ಬೆಳಗ್ಗಿನಿಂದ ಸಂಜೆಯವರೆಗೆ ಭಕ್ತಾದಿಗಳಿಗೆ ಊಟೋಪಚಾರ ವಿತರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು ಹಾಗೂ ಘಟಕದ ವತಿಯಿಂದ ರೂ. 5000/- ಧನ ಸಹಾಯವನ್ನು ನೀಡಲಾಯಿತು. ಕ್ಷೇತ್ರದ ಅರ್ಚಕರು ಹಾಗೂ ಪದಾಧಿಕಾರಿಗಳು ಘಟಕದ ಸೇವೆಯನ್ನು ಮೆಚ್ಚಿ ದೇವರಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಅಶ್ವತ್ ಎಸ್, ಕಾರ್ಯದರ್ಶಿ ನಿಖಿಲ್ ಪೂಜಾರಿ ಹಾಗೂ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.