ಮಂಗಳೂರು: ಯುವವಾಹಿನಿ(ರಿ.) ಕುಪ್ಪೆಪದವು ಘಟಕದ ವತಿಯಿಂದ 19-05-2024ನೇ ಆದಿತ್ಯವಾರ ಶ್ರೀ ದುರ್ಗಾ ಕ್ರಿಕೆಟರ್ಸ್ ಸಹಯೋಗದೊಂದಿಗೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಉದ್ಘಾಟನೆಯನ್ನು ಘಟಕದ ಅಧ್ಯಕ್ಷರಾದ ಅಕ್ಷಿತ್ ಕುಮಾರ್ ನಡೆಸಿಕೊಟ್ಟರು.
ವೇದಿಕೆಯಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ಅರುಣ್ ಕುಮಾರ್, ಕ್ರೀಡಾ ನಿರ್ದೇಶಕರಾದ ನವೀನ್ ಚಂದ್ರ, ಮಾಜಿ ಅಧ್ಯಕ್ಷರಾದ ಅಜಯ್ ಅಮೀನ್, ಮುತ್ತೂರ್ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ದುರ್ಗಾಕೋಡಿ, ಶ್ರೀ ದುರ್ಗಾ ಕ್ರಿಕೆಟರ್ಸ್ ನ ಅಧ್ಯಕ್ಷರಾದ ಹನೀಫ್ ನೆಲಚ್ಚೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 20 ತಂಡಗಳು ಭಾಗವಹಿಸಿದ್ದವು. 30 ಗಜಗಳ ಅಂಡರ್ ಆರ್ಮ್ ಶೈಲಿಯ, ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಕೂಟ ನಡೆಯಿತು. ಒಟ್ಟಾರೆಯಾಗಿ 47 ಪಂದ್ಯಾಟ ಸಾಗಿ ಬಂತು.
ಪಂದ್ಯಾಟ ನೋಡಲು ಹಾಗೂ ಪ್ರೋತ್ಸಾಹ ಮಾಡಲು ಪಂದ್ಯದುದ್ದಕ್ಕೂ ಗಣ್ಯಾತಿ ಗಣ್ಯರು ಆಗಮಿಸುತ್ತಿದ್ದರು. ಸಂಜೆಯ ಸಮಾರೋಪ ಸಮಾರಂಭದಲ್ಲಿ ಸ್ವಯಂಭೂಲಿಂಗೇಶ್ವರ ಕ್ಷೇತ್ರ ದೊಡ್ಡಿಕಟ್ಟ ಬಜಪೆಯ ಲೋಕೇಶ್ ಅಮೀನ್, ಮುತ್ತೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ ಬಳ್ಳಜೆ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಾಲತಿ ಗಿರೀಶ್, ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲ್ಯಾನ್, ಕಾಂಗ್ರೆಸ್ ಮುಖಂಡ ದಯಾನಂದ ಶೆಟ್ಟಿ, ಉಪಸ್ಥಿತರಿದ್ದರು.
ಪ್ರಥಮ ಪ್ರಶಸ್ತಿಯನ್ನು ಕಟ್ಟೆ ಫ್ರೆಂಡ್ಸ್ ಕುಪ್ಪೆಪದವು ಪಡೆದುಕೊಂಡರೆ ದ್ವಿತೀಯ ಪ್ರಶಸ್ತಿಯನ್ನು ಫ್ರೆಂಡ್ಸ್ ಮುತ್ತೂರು ಪಡೆದುಕೊಂಡಿತು. ಉತ್ತಮ ಬ್ಯಾಟ್ಸ್ ಮನ್ ಆಗಿ – ಆಸೀಫ್, ಉತ್ತಮ ಬೌಲರ್ ಆಗಿ ಆರಿಸ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜಾಬಿರ್ ಪಡೆದುಕೊಂಡರು.
ಪಂದ್ಯಾಟದುದ್ದಕ್ಕೂ ಕಮೆಂಟೇಟರ್ ಆಗಿ ನಿತಿನ್ ಸಹಕರಿಸಿದರೆ, ಅಜಯ ಅಮೀನ್ ಜತೆಯಾಗಿ ಸಹಕರಿಸಿದರು. ಅರುಣ್ ಕುಮಾರ್ ಸ್ವಾಗತಿಸಿದರು, ನವೀನ್ ಚಂದ್ರ ವಂದಿಸಿದರು.