ಮೂಡಬಿದರೆ: ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಹಾಗೂ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮಿಜಾರು ಮೂಡಬಿದ್ರೆ ಸಹಯೋಗದಲ್ಲಿ ಯುವವಾಹಿನಿ ಸ್ವಚ್ಛ ಪರಿಕಲ್ಪನೆ – 2024 ಎರಡನೇ ಹಂತದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಆರಂಭವು 07/04/2024 ನೇ ಆದಿತ್ಯವಾರ ಲಕ್ಷ್ಮಿ ಛಾಯಾ ನಿವಾಸ, ಬೆಟ್ಕೇರಿ ಮೂಡಬಿದ್ರೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಲಕ್ಷ್ಮಿಛಾಯಾ ನಿವಾಸದ ಮುಂಭಾಗದಲ್ಲಿ ಸಾಂಕೇತಿಕವಾಗಿ ಶ್ರೀಧರ್ ಆಚಾರ್ಯ ಹಿರಿಯ ಸ್ವರ್ಣ ಉದ್ಯಮಿ ಮೂಡುಬಿದ್ರೆ ಇವರು ಗಿಡ ನೆಡುವ ಮೂಲಕ ಉದ್ಘಾಟನೆಗೈದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮೂಡಬಿದರೆ ಘಟಕದ ಅಧ್ಯಕ್ಷರು ಶಂಕರ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಮುಖ್ಯ ಅತಿಥಿಗಳನ್ನು ಗುಲಾಬಿ ಪುಷ್ಪ ನೀಡುವ ಮೂಲಕ ಸ್ವಾಗತಿಸಿದರು ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿ ಸೇರಿರುವ ಘಟಕದ ಸದಸ್ಯರು, ವಿದ್ಯಾರ್ಥಿಗಳಿಗೆ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಕೇಂದ್ರ ಸಮಿತಿಯ ಜಾಲತಾಣ ನಿರ್ದೇಶಕರು ನವಾನಂದ ಮೂಡುಬಿದ್ರಿ ಯುವವಾಹಿನಿ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸ್ವಚ್ಛತೆ ಕಾರ್ಯಕ್ರಮದ ಬಗ್ಗೆ ಪ್ರಶಂಸೆಯ ನುಡಿಗೈದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾ ವೇದಿಕೆಯಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಅಶಾದ್ ಎಂ ವಿ, ಘಟಕದ ಎರಡನೇ ಉಪಾಧ್ಯಕ್ಷರು ಪ್ರಭಾಕರ್ ಚಾಮುಂಡಿ ಬೆಟ್ಟ, ಕೋಶಾಧಿಕಾರಿ ಪ್ರತಿಭಾ ಸುರೇಶ್ ಉಪಸ್ಥಿತರಿದ್ದರು. ಶಂಕರ್ ಎ. ಕೋಟ್ಯಾನ್ ಅತಿಥಿಗಳಿಗೆ ಪುಷ್ಪ ಗಿಡ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 60 ಮಂದಿ ಭಾಗವಹಿಸಿದ್ದರು. ಸಭಾ ನಿರೂಪಣೆ ಹಾಗೂ ಧನ್ಯವಾದವನ್ನು ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ನೆರವೇರಿಸಿದರು. ಸ್ವಚ್ಛತಾ ಕಾರ್ಯಕ್ರಮವನ್ನು ಬೆಟ್ಕೇರಿ ಮೈದಾನ ಮುಂಭಾಗದಿಂದ ಆರಂಭಿಸಿ, ಮಹಮ್ಮಾಯಿ ದೇವಸ್ಥಾನ ಕೋಟೆಬಾಗಿಲು ಇಲ್ಲಿ ಮುಕ್ತಾಯಗೊಂಡಿತು.
ಸಮಾರೋಪ ಕಾರ್ಯಕ್ರಮವು ಮಹಮ್ಮಾಯಿ ದೇವಸ್ಥಾನದ ಮುಂಭಾಗದಲ್ಲಿ ಶಂಕರ್ ಎ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಶ್ರೀ ಮಹಮ್ಮಾಯಿ ದೇವಸ್ಥಾನ ಕೋಟೆಬಾಗಿಲು ಅಧ್ಯಕ್ಷರು ರಾಜೇಶ್ ಕೋಟೆಗಾರ್, ಅಶಾದ್ ಐ ಎಂ, ದೇವಸ್ಥಾನದ ಪದಾಧಿಕಾರಿ ರಾಜು ಹೆಗ್ಗಡೆ, ಕೋಶಾಧಿಕಾರಿ ಪ್ರತಿಭಾ ಸುರೇಶ್ ಹಾಗೂ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣಕರ್ತರಾದ ಸರ್ವರಿಗೂ ಅಧ್ಯಕ್ಷರು ಅಭಿನಂದನೆಗೈದರು. ಸಮಾರೋಪ ಸಮಾರಂಭವನ್ನು ಪ್ರಭಾಕರ್ ಚಾಮುಂಡಿಬೆಟ್ಟ ನಿರೂಪಿಸಿದರು ಹಾಗೂ ಧನ್ಯವಾದಗೈದರು.