ಮಂಗಳೂರು: ಊರಿನ 10 ಜನ ಸೇರಿ, ಸಮಾನ ಸ್ವಇಚ್ಛೆ ಇದ್ದರೆ ಗುರು ಮಂದಿರ ಅತೀ ಶೀಘ್ರದಲ್ಲಿ ಪ್ರತಿಷ್ಠಾಪನೆ ಸಾಧ್ಯ ಎಂದು ದಿನಾಂಕ 23-03-2024 ರಂದು ಯುವವಾಹಿನಿ(ರಿ.) ಶಕ್ತಿನಗರ ಘಟಕದ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆ ಮಾಡಿರುವ ಕುಮಾರ್ ಪೂಜಾರಿ ಇರುವೈಲ್ ನುಡಿದರು. ಕಾರ್ಯಕ್ರಮವು ಕುಂಟಲ್ಪಾಡಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ನಡೆಯಿತು.
2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಗಣೇಶ್ ಕೆ. ಮಹಾಕಾಳಿ ಒಂದನೇ ಉಪಾಧ್ಯಕ್ಷರಾಗಿ ತುಕಾರಾಂ, ಎರಡನೆಯ ಉಪಾಧ್ಯಕ್ಷರಾಗಿ ಸುಜಾತ, ಕಾರ್ಯದರ್ಶಿಯಾಗಿ ಅಕ್ಷತ ಚರಣ್, ಹಾಗೂ ಕೋಶಾಧಿಕಾರಿಯಾಗಿ ನವೀನ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್.ಕೆ. ಪೂಜಾರಿ ಪದ ಪ್ರಧಾನ ಮಾಡಿ, ಘಟಕದ ಸಾಧನೆ ಬಗ್ಗೆ ಪ್ರಶಂಸೆಯ ಮಾತನಾಡಿದರು.
ಅತಿಥಿಗಳಾಗಿ ಪ್ರಕಾಶ್ ಪೂಜಾರಿ ಅಧ್ಯಕ್ಷರು ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಬಿಕರ್ಣಕಟ್ಟೆ, ನಾಗೇಶ್ ಪೂಜಾರಿ. ಆಡಳಿತ ಮೊಕ್ತೇಸರರು, ಚಾಮುಂಡಿ ರಾಹುಗಳಿಗ ದೈವಸ್ಥಾನ, ಉಮೇಶ್ ದಂಡಕೇರಿ ಸಮಾಜ ಸೇವಕರು, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ದೀಕ್ಷಿತ್, ಹಾಗೂ ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕರಾದ ಜಯರಾಮ್ ಪೂಜಾರಿ ಬಾಳಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈಜು ಸ್ಪರ್ಧೆಯಲ್ಲಿ ಸಾಧನೆಗೈದ ಕುಮಾರಿ ಶ್ರಾವರವರಿಗೆ ಸನ್ಮಾನ ಮಾಡಲಾಯಿತು. ತುಳುವೆರೆ ಕೂಟದ ಮಕ್ಕಳಿಂದ ಕುಣಿತ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಘಟಕದ ಅಧ್ಯಕ್ಷರಾದ ವಿಶ್ವನಾಥ್ ಕುಂದರ್ ಸ್ವಾಗತವನ್ನು ಕೋರಿದರು. ನಿಯೋಜಿತ ಕಾರ್ಯದರ್ಶಿ ಅಕ್ಷತ್ ಚರಣ್ ಧನ್ಯವಾದಗೈದರು. ಸತೀಶ್ ರವರು ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು.