ಸಸಿಹಿತ್ಲು: ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ನಾಮನಿರ್ದೇಶಿತ ಸದಸ್ಯರಾದ ಚಂದ್ರಶೇಖರ್ ಸಸಿಹಿತ್ಲು ಇವರ ಮನೆ ಆಕಸ್ಮಿಕ ಅಗ್ನಿ ಅವಘಡಕ್ಕಿಡಾಗಿ, ಚಂದ್ರಶೇಖರ್ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಗಿತ್ತು.
ಸಂಕಷ್ಟಕ್ಕೆ ಒಳಗಾದ ಚಂದ್ರಶೇಖರ ಕುಟುಂಬಕ್ಕೆ ಯುವವಾಹಿನಿ ಕೇಂದ್ರ ಸಮಿತಿಯ ಸದಸ್ಯರಿಂದ ಸಂಗ್ರಹವಾದ ರೂ 50,000/- ಆರ್ಥಿಕ ಸಹಾಯ ಮಾಡಲಾಗಿದೆ.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಇವರು ₹50,000/ ಮೊತ್ತದ ಚೆಕ್‌ನ್ನು ಚಂದ್ರಶೇಖರ್ ಅವರ ಸಹೋದರಿ ಶ್ಯಾಮಲ ಅವರಿಗೆ ಹಸ್ತಾಂತರ ಮಾಡಿ, ಆರ್ಥಿಕ ಕ್ರೋಡೀಕರಣಕ್ಕಾಗಿ ಸಹಯಹಸ್ತ ಚಾಚಿದ ಯುವವಾಹಿನಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ ಕೆ, ಕೋಶಾಧಿಕಾರಿ ಹರೀಶ್ ಪಚ್ಚನಾಡಿ, ಸಮಾಜ ಸೇವಾ ನಿರ್ದೇಶಕರಾದ ಜಯರಾಮ ಪೂಜಾರಿ ಬಾಳಿಲ, ಸಂಘಟನಾ ಕಾರ್ಯದರ್ಶಿ ಸರಸ್ವತಿ, ಮಹಿಳಾ ಸಂಘಟನಾ ನಿರ್ದೇಶಕಿ ನಯನಾ ಸುರೇಶ, ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮೋಹನ್ ಮಾಡೂರು, ಪ್ರಚಾರ ನಿರ್ದೇಶಕ ಪ್ರಥ್ವಿರಾಜ್ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಪಾಲನ್, ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷೆ ಮೋಹಿನಿ ಪೂಜಾರಿ ಉಪಸ್ಥಿತರಿದ್ದರು.