ಯುವವಾಹಿನಿ (ರಿ.) ಕಂಕನಾಡಿ ಘಟಕ ವತಿಯಿಂದ

ಮಹಿಳಾ ಸ್ವ-ಉದ್ಯೋಗ ಉಚಿತ ತರಬೇತಿ

ಕಂಕನಾಡಿ: ಯುವವಾಹಿನಿ (ರಿ.) ಕಂಕನಾಡಿ ಘಟಕ ಹಾಗೂ ಭಾರತ ಸರ್ಕಾರ ದತ್ತೋಪಂಥ, ಠೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ದಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪ್ರಾದೇಶಿಕ ನಿರ್ದೇಶನಾಲಯ, ಮಂಗಳೂರು ವತಿಯಿಂದ ಮಹಿಳೆಯರಿಗೆ ಸ್ವಉದ್ಯೋಗ ಉಚಿತ ತರಬೇತಿ ಕಾರ್ಯಗಾರವು ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನ ಸಭಾಂಗಣದಲ್ಲಿ ದಿನಾಂಕ 24-02-2024 ಶನಿವಾರದಂದು ನಡೆಯಿತು.

ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷರಾದ ಉಮಾನಾಥ್ ಕೋಟ್ಯಾನ್ ರವರು ದೀಪ ಪ್ರಜ್ವಲಿಸುವ ಮುಖೇನ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ರೇಖಾ ಗೋಪಾಲ್ ಹಾಗೂ ಹರಿಣಿ ಜೆ ರಾವ್ ಇವರು ಸ್ವಉದ್ಯೋಗಕ್ಕೆ ಬೇಕಾದ ಉತ್ಪನ್ನಗಳ ತಯಾರಿಕೆಯ ಜೊತೆಗೆ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಮಾರಾಟದ ಮಾಹಿತಿಯನ್ನು ನೀಡಿದರು. ಸುಮಾರು 65ಕ್ಕೂ ಹೆಚ್ಚು ಶಿಬಿರಾರ್ಥಿಗಳು ಈ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮಾಜಿ ಅಧ್ಯಕ್ಷರುಗಳು ಪಾಲ್ಗೊಂಡರು.
ಸಾಕ್ಷಿ ಎಲ್ ಪ್ರಾರ್ಥನೆ ನೆರವೇರಿಸಿದರು. ಮಹಿಳಾ ನಿರ್ದೇಶಕರಾದ ಶೋಭಾ ಶೇಖರ್ ಧನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!