ಕೊಲ್ಯ: ಶಿಸ್ತಿಗೆ ಹೆಸರಾದ ಕೊಲ್ಯ ಘಟಕವು ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಇನ್ನಷ್ಟು ಬಲಿಷ್ಠವಾಗುತ್ತಿದೆ. ಕೊಲ್ಯ ಘಟಕವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ವಿದ್ಯೆ, ಉದ್ಯೋಗ, ಸಂಪರ್ಕ ನಿಟ್ಟಿನಲ್ಲಿ ಹಮ್ಮಿಕೊಂಡ ವಿವಿಧ ಯೋಜನೆಗಳು ಜನರಿಗೆ ತಲುಪುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ತಿಳಿಸಿದರು. ಫೆಬ್ರವರಿ 25 ರಂದು ನಡೆಯುವ ಉಳ್ಳಾಲ ವಲಯದ ಬಿಲ್ಲವ ಸಮಾವೇಶದ ಸಿದ್ಧತೆಯಲ್ಲಿ ಕೊಲ್ಯ ಯುವವಾಹಿನಿ ಸದಸ್ಯರು ತಮ್ಮನ್ನು ತೊಡಗಿಸಿದುರ ಬಗ್ಗೆ ಮಾಹಿತಿ ಪಡೆದು ಸಮ್ಮೇಳನದ ಯಶಸ್ವಿಗೆ ಶುಭ ಹಾರೈಸಿದರು.
ಅವರು ಯುವವಾಹಿನಿ (ರಿ.) ಕೊಲ್ಯ ಘಟಕದ ಪೆಬ್ರವರಿ 14 ರಂದು ನಡೆದ ಸಾಪ್ತಾಹಿಕ ಸಭೆಗೆ ಕೇಂದ್ರ ಸಮಿತಿಯ ಅಧ್ಯಕ್ಷರು ಹರೀಶ್ ಪೂಜಾರಿ ಭೇಟಿ ನೀಡಿ ಈ ಕುರಿತು ಮಾತನಾಡಿದರು.
ಕೊಲ್ಯ ಘಟಕದ ಅಧ್ಯಕ್ಷರಾದ ಲತೀಶ್ ಸಂಕೋಳಿಗೆಯವರು ಕೊಲ್ಯ ಘಟಕ ಸ್ಥಾಪನೆಯಾದಂತಹ ಸಂದರ್ಭದಲ್ಲಿ ಅಧ್ಯಕ್ಷರಾದ ಹರೀಶ್ ಪೂಜಾರಿಯವರ ಶ್ರಮ ಶ್ಲಾಘನೀಯ ಎಂದು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ಘಟಕದ ಅಧ್ಯಕ್ಷರು ನೆನಪಿನ ಕಾಣಿಕೆಯಾಗಿ ಭಗವದ್ಗೀತೆ ಪ್ರತಿಯನ್ನು ನೀಡಿದರು. ಕೊಲ್ಯ ಘಟಕದಲ್ಲಿ ಪ್ರತಿ ವಾರ ನಡೆಸುವ ತುಳುವೆರೆ ಚಿಯನ ಸ್ಪರ್ಧೆ ವಾರದ ವಿಜೇತರಾದ ಕೇಂದ್ರ ಸಮಿತಿ ನಾರಾಯಣ ಗುರುತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು ಮೋಹನ್ ಮಾಡೂರ್ ಇವರಿಗೆ ಕೇಂದ್ರ ಸಮಿತಿ ಅಧ್ಯಕ್ಷರು ಬಹುಮಾನ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕರು ಹಾಗೂ ಕೊಲ್ಯ ಘಟಕದ ನಿಕಟಪೂರ್ವ ಅಧ್ಯಕ್ಷರು ಸುಂದರ್ ಸುವರ್ಣ, ಘಟಕದ ಪ್ರಥಮ ಉಪಾಧ್ಯಕ್ಷರು ಸುಧಾ ಸುವರ್ಣ, ದ್ವಿತೀಯ ಉಪಾಧ್ಯಕ್ಷರು ನಿತಿನ್ ಕರ್ಕೇರ, ಕಾರ್ಯದರ್ಶಿ ಜೀವನ್ ಕೊಲ್ಯ ಹಾಗೂ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಅಧ್ಯಕ್ಷರು ಲತೀಶ್ ಎಂ. ಸಂಕೋಳಿಗೆ ಸ್ವಾಗತಗೈದರು. ಕಾರ್ಯದರ್ಶಿ ಜೀವನ್ ಕೊಲ್ಯ ಧನ್ಯವಾದಗೈದರು.