ಯುವವಾಹಿನಿ (ರಿ.) ಕೂಳೂರು ಘಟಕದ ಮೂರು ಧ್ಯೇಯಗಳಲ್ಲಿ ಒಂದಾದ ಸಂಪರ್ಕ ಇದರ ನೆಲೆಯಲ್ಲಿ ಯುವವಾಹಿನಿ ಸದಸ್ಯರ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಿನಾಂಕ 11-02-2024 ಆದಿತ್ಯವಾರದಂದು ಸ್ನೇಹ ಸಮ್ಮಿಲನ 2024 ಕಾರ್ಯಕ್ರಮವನ್ನು Relax leisure park ಬ್ರಹ್ಮಾವರದಲ್ಲಿ ಆಯೋಜಿಸಲಾಗಿತ್ತು.
ಬೆಳಿಗ್ಗೆ 7.45 ಗಂಟೆಗೆ ಸರಿಯಾಗಿ ನಮ್ಮ ಬಸ್ಸಿನ ಸಾರಥಿ ನಮ್ಮನ್ನೆಲ್ಲ ಕೂರಿಸಿಕೊಂಡು ಕೂಳೂರಿನಿಂದ ಹೊರಟು 9.30 ಗೆ ರೆಸಾರ್ಟ್ ತಲುಪಿದೆವು. ಅಲ್ಲಿ ಬೆಳಗ್ಗಿನ ಉಪಹಾರ ಮುಗಿಸಿ ಅಲ್ಲಿಂದ ಬೋಟ್ ಮೂಲಕ island ತಲುಪಿದೆವು. ಬೋಟ್ ನಲ್ಲಿ ಸದಸ್ಯರೆಲ್ಲ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಲ್ಲಿ ತಲುಪಿದ ಬಳಿಕ ಅಧ್ಯಕ್ಷರು ನಾರಾಯಣ ಗುರುಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಘಟಕದ ಎರಡನೇ ಉಪಾಧ್ಯಕ್ಷರಾದ ಗೀತಾ ವಸಂತ್, ಮಾಜಿ ಅಧ್ಯಕ್ಷರಾದ ನಯನ ರಮೇಶ್ , ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕಾರ್ಯದರ್ಶಿ ನೈನಾ ಕೋಟ್ಯಾನ್ , ಸಂಚಾಲಕರಾದ ಸುಮಾ ಶಿವು ಕೋಡಿಕಲ್, relax leisure park na ಮೇಡಂ ಜ್ಯೋತ್ಸ್ನಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸದಸ್ಯರ ಕುಟುಂಬದವರು ಉಪಸ್ಥಿತರಿದ್ದರು. ನಂತರ ಸದಸ್ಯರ 2 ತಂಡಗಳನ್ನು ರಚಿಸಿ, ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ತಂಡದ ನಾಯಕರಾಗಿ ಒಂದು ತಂಡಕ್ಕೆ ಅಧ್ಯಕ್ಷರಾದ ಇಂದಿರಾ ಸುರೇಶ್ ಹಾಗೂ ಇನ್ನೊಂದು ತಂಡಕ್ಕೆ ಮಾಜಿ ಅಧ್ಯಕ್ಷರಾದ ನಯನ ರಮೇಶ್ ಇವರನ್ನು ಆಯ್ಕೆ ಮಾಡಲಾಯಿತು. ಬೆಳಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ನಡೆದ ಆಟೋಟ ಸ್ಪರ್ಧೆ ಕಾರ್ಯಕ್ರಮವನ್ನು ಘಟಕದ ಕ್ರೀಡಾ ನಿರ್ದೇಶಕರಾದ ಹೇಮಂತ್, ವಾರ್ತಾ ಮತ್ತು ಪ್ರಚಾರ ನಿರ್ದೇಶಕರಾದ ರಕ್ಷಾ ಹಾಗೂ ಸದಸ್ಯರಾದ ಪ್ರದೀಪ್ ವಿಭಿನ್ನವಾದ ಹೊಸ ಹೊಸ ಆಟಗಳನ್ನು ಆಡಿಸಿದರು. ವಿಶೇಷವಾಗಿ relax leisure park na ಮೇಡಂ ಜೋತ್ಸ್ನ ರವರು ನಮ್ಮ ಜೊತೆ ಸೇರಿ ಮನರಂಜನೆ ನೀಡಿದರು.
ಸ್ಪರ್ದೆಯಲ್ಲಿ ಭಾಗವಹಿಸಿದ ಎರಡು ತಂಡಕ್ಕೂ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಮಧ್ಯದಲ್ಲಿ ಅಲ್ಲಿ ಬಂದ ಪ್ರವಾಸಿಗರ ತಂಡದವರು ನಮ್ಮ ಜೊತೆ ಸೇರಿ ಹಾಡು ಹಾಡಿಕೊಂಡು ಎಲ್ಲರ ಜೊತೆ ಹೆಜ್ಜೆ ಹಾಕಿ ಕುಣಿದರು. ಕಾರ್ಯಕ್ರಮದಲ್ಲಿ ಸದಸ್ಯರಿಗಾಗಿ ನಿಧಿ ಶೋಧ ನಡೆಸುವ ಟಾಸ್ಕ್ ನೀಡಲಾಯಿತು. ಇದರಲ್ಲಿ ಘಟಕದ ಸದಸ್ಯರಾದ ಪುಷ್ಪ ಹಾಗೂ ಕ್ರೀಡಾ ನಿರ್ದೇಶಕರಾದ ಹೇಮಂತ್ ಗೆಲುವು ಸಾಧಿಸಿದರು. ಇವರಿಗೆ ಅಧ್ಯಕ್ಷರು ಬಹುಮಾನ ವಿತರಿಸಿದರು. ಮಧ್ಯಾಹ್ನ 3.00 ಗಂಟೆಯ ನಂತರ ಸದಸ್ಯರು ಎಲ್ಲರೂ ನೀರಿನಲ್ಲಿ ಆಟ ಆಡಿ ಮನರಂಜಿಸಿದರು. ಅಂತಿಮದಲ್ಲಿ ವಿಶೇಷವಾಗಿ ರೈನ್ ಡ್ಯಾನ್ಸ್ ಗೆ ಎಲ್ಲರೂ ಹೆಜ್ಜೆ ಹಾಕಿದರು. ಈ ಕಾರ್ಯಕ್ರಮದಲ್ಲಿ 80 ಮಂದಿ ಸದಸ್ಯರು ಮತ್ತು ಕುಟುಂಬದವರು ಪಾಲ್ಗೊಂಡಿದ್ದರು. ಅಂತಿಮದಲ್ಲಿ ಬಂದ ಸದಸ್ಯರು ಮತ್ತು ಕುಟುಂಬದವರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಸದಸ್ಯರಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 5.30 ಗಂಟೆಗೆ ಅಲ್ಲಿಂದ ಹೊರಟು 7.30 ಗಂಟೆಗೆ ಮಂಗಳೂರು ಬಂದು ತಲುಪಿದೆವು.