ಕೂಳೂರು : ವಿದ್ಯಾನಿಧಿ ಸ್ವೀಕರಿಸಿದ ವಿದ್ಯಾರ್ಥಿಗಳು ಉದ್ಯೋಗ ಪಡೆದ ನಂತರ ವಿದ್ಯಾನಿಧಿ ನೀಡುವ ಮನೋಭಾವ ಬೆಳೆಸಿಕೊಂಡು, ಮುಂಬರುವ ದಿನಗಳಲ್ಲಿ ವಿದ್ಯಾ ನಿಧಿ ವಿತರಿಸುವಂತಾಗಲಿ ಎಂದು ಡಾ.ಉಜ್ವಲ್ ಯು.ಸುವರ್ಣ ಎಂದು ಹಾರೈಸಿದರು.
ಅವರು ದಿನಾಂಕ 21-01-2024 ರಂದು ಕೂಳೂರು ಫಲ್ಗುಣಿ ಸಭಾಂಗಣ ನಡೆದ ಯುವವಾಹಿನಿ (ರಿ.) ಕೂಳೂರು ಘಟಕದ ಪದಗ್ರಹಣ ಹಾಗೂ ವಿದ್ಯಾನಿಧಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಯಶವಂತ್ ಪೂಜಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿ ರವಿಶಂಕರ್ ಮಿಜಾರ್ ರವರು ಘಟಕದ ವಾರ್ಷಿಕ ಪತ್ರಿಕೆ ಮಾತೃಸ್ಪರ್ಶ ಕಿರುಹೊತ್ತಿಗೆ ಬಿಡುಗಡೆಗೊಳಿಸಿ,
ಯುವಕರು ವಿದ್ಯೆ, ಉದ್ಯೋಗದ ಜೊತೆಗೆ ಸ್ವ ಉದ್ಯೋಗದ ಕಡೆಗೂ ಗಮನ ಹರಿಸಿ ಉದ್ಯೋಗ ಸೃಷ್ಟಿಗೆ ಗಮನ ಹರಿಸಬೇಕು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಮಾತೃ ಸ್ವರೂಪರಾದ ಜಾನಕಿ ಹಾಗೂ ಮೀನಾಕ್ಷಿ ಹಾಗೂ ಮಾತೃ ಸ್ಪರ್ಶ ಸಂಪಾದಕರಾದ ಸಂಗೀತಾ ರವರು ಉಪಸ್ಥಿತರಿದ್ದರು.
2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಸಮಿತಿಯ ಸಂಚಾಲಕರಾದ ದೀಕ್ಷಿತ್ ಸಿ ಎಸ್ ಸಭೆಗೆ ಪರಿಚಯಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಯುವವಾಹಿನಿ (ರಿ) ಕೂಳೂರು ಘಟಕದ ಸಾಧನೆಯನ್ನು ಶ್ಲಾಘಿಸಿದರು.
2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಇಂದಿರಾ ಸುರೇಶ್, ಪ್ರಥಮ ಉಪಾಧ್ಯಕ್ಷರಾಗಿ ಲತೀಶ್ ಪೂಜಾರಿ, ದ್ವಿತೀಯ ಉಪಾಧ್ಯಕ್ಷರಾಗಿ ಗೀತಾ ವಸಂತ್, ಕಾರ್ಯದರ್ಶಿಯಾಗಿ ನೈನಾ ಕೋಟ್ಯಾನ್, ಜೊತೆ ಕಾರ್ಯದರ್ಶಿಯಾಗಿ ಕೀರ್ತನ ಸುಜಿತ್, ಕೋಶಾಧಿಕಾರಿಯಾಗಿ ವಿಘ್ನೇಶ್ ಬೋಳೂರು, ಸಂಘಟನಾ ಕಾರ್ಯದರ್ಶಿಯಾಗಿ ಮುಕೇಶ್ ಹಾಗೂ ವಿವಿಧ ನಿರ್ದೇಶಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
2024-25 ನೇ ಸಾಲಿನ ನೂತನ ಅಧ್ಯಕ್ಷರಾದ ಇಂದಿರಾ ಸುರೇಶ್ ಮಾತನಾಡಿ ಘಟಕದ ಮಾಜಿ ಅಧ್ಯಕ್ಷರುಗಳು ಹಾಕಿದ ದಾರಿಯಲ್ಲಿ ಮುನ್ನಡೆದು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಪ್ರಯತ್ನ ಪಡುತ್ತೇನೆ ಎಂದರು.
₹1.35 ಲಕ್ಷ ರೂ ವಿದ್ಯಾನಿಧಿ ಹಸ್ತಾಂತರ ವಿದ್ಯಾನಿಧಿ ವಿತರಣೆ ಕಾರ್ಯಕ್ರಮವನ್ನು ಘಟಕದ ವಿದ್ಯಾನಿಧಿ ನಿರ್ದೇಶಕರಾದ ಸುಮಾಶಿವು ಕೋಡಿಕಲ್ ನೆರವೇರಿಸಿಕೊಟ್ಟರು. 34 ವಿದ್ಯಾರ್ಥಿಗಳಿಗೆ 1.35 ಲಕ್ಷ ಮೊತ್ತದ ವಿದ್ಯಾನಿಧಿ ವಿತರಿಸಲಾಯಿತು.
ಲಕ್ಕಿಡಿಪ್ ಡ್ರಾ ನೆರವೇರಿಸಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಚಾಲಕರಾದ ಲೋಕೇಶ್ ಪೂಜಾರಿ, ನೂತನ ಕಾರ್ಯದರ್ಶಿ ನೈನಾ ಕೋಟ್ಯಾನ್ ಘಟಕದ ಮಾರ್ಗದರ್ಶಕರಾದ ಜಯಾನಂದ ಅಮೀನ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ನಯನ ರಮೇಶ್ ಹಾಗೂ ಚಂದಪ್ಪ ಸನಿಲ್ ಉಪಸ್ಥಿತರಿದ್ದರು.
ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ ಪೂಜಾರಿ, ಕಾರ್ಯಕ್ರಮ ಉದ್ಘಾಟನೆ ಮಾಡಿದ ಡಾ. ಉಜ್ವಲ್ ಯು ಸುವರ್ಣ, 2023-24ನೇ ಅಧ್ಯಕ್ಷ ಯಶವಂತ್ ಪೂಜಾರಿರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಸ್ವಾಗತಿಸಿದರು. ಸ್ವಾತಿ, ಅದ್ಮಿತಾ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷರು ಲೋಕೇಶ್ ಕೋಟ್ಯಾನ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸುಮಂಗಲಾ.ಸಿ.ಕೋಟ್ಯಾನ್ ವಾರ್ಷಿಕ ವರದಿ ಮಂಡಿಸಿದರು, ಮಧುಶ್ರೀ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಲೋಕೇಶ್ ಪೂಜಾರಿ ವಂದಿಸಿದರು.