ಮೂಡುಬಿದಿರೆ : ಯಾವ ವ್ಯಕ್ತಿಯಲ್ಲಿ ಸ್ವಾಭಿಮಾನದ ಜೊತೆಗೆ ಎಲ್ಲರನ್ನೂ ಗೌರವಿಸಿ ಮಾತನಾಡುವ ಗುಣವಿದೆಯೋ ಅಂಥವರು ಒಬ್ಬ ಉತ್ತಮ ನಾಯಕ ಎನಿಸಿಕೊಳ್ಳಲು ಅರ್ಹನಾಗಿರುತ್ತಾನೆ, ನಿನ್ನೊಳಗಿನ ನಾಯಕನ ಅನ್ವೇಷಣೆ ಕಾರ್ಯ ನಿರಂತರ ನಡೆಯಬೇಕಾಗಿದೆ, ಇದು ನಾಯಕತ್ವದ ಹೆಬ್ಬಾಗಿಲು ಎಂದು ಸಂಪನ್ಮೂಲ ವ್ಯಕ್ತಿ ನಿತೇಶ್ ಬಲ್ಲಾಳ್ ರವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಅವರು ಯುವವಾಹಿನಿ (ರಿ.) ಮೂಡಬಿದರೆ ಘಟಕದ ವತಿಯಿಂದ 2024 ನೇ ಜನವರಿ 21 ರಂದು ನಡೆದ ವ್ಯಕ್ತಿತ್ವ ವಿಕಸನ ಶಿಬಿರ ನಿನ್ನೊಳಗಿನ ನಾಯಕ ಇದರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಶಿಬಿರ ನಡೆಸಿಕೊಟ್ಟರು.
ಗುರುಪುರ ಕೈಕಂಬ ಉಪತಹಸೀಲ್ದಾರರಾದ ಶಿವಪ್ರಸಾದ್ ಕಾರ್ಕಳ ಇವರು ಕಾರ್ಯಾಗಾರ ಉದ್ಘಾಟಿಸಿದರು.
ಶ್ರೇಷ್ಠ ನಾಯಕತ್ವ ರೂಪಿಸುವುದೇ ಈ ಕಾರ್ಯಾಗಾರದ ಮುಖ್ಯ ಉದ್ದೇಶ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ (ರಿ.) ಮೂಡಬಿದರೆ ಘಟಕದ ಅಧ್ಯಕ್ಷರಾದ ಶಂಕರ್ ಎ ಕೊಟ್ಯಾನ್ ಮಾರೂರು ತಿಳಿಸಿದರು
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ.ಡಿ ಕೆ, ಯುವವಾಹಿನಿ ಮೂಡುಬಿದಿರೆ ಘಟಕದ ಕೋಶಾಧಿಕಾರಿ ಪ್ರತಿಭಾ ಸುರೇಶ್ , ಉಪಾಧ್ಯಕ್ಷರಾದ ಮುರಳೀಧರ ಕೋಟ್ಯಾನ್, ಪ್ರಭಾಕರ್ ಚಾಮುಂಡಿಬೆಟ್ಟ, ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು.
ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶುಭಕರ್ ಅಂಚನ್ ಸ್ವಾಗತಿಸಿದರು. ಶಿಬಾನಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದನಾರ್ಪಣೆಗೈದರು.