ಮೂಡುಬಿದಿರೆ : ಎಸ್.ಎಸ್.ಎಲ್.ಸಿ ಪರೀಕ್ಷೆ ಬಹಳ ಮುಖ್ಯವಾದ ಘಟ್ಟ. ಪರೀಕ್ಷೆಯನ್ನು ಕಷ್ಟದಿಂದ ಎದುರಿಸಿದರೂ ಬಹಳ ಇಷ್ಟಪಟ್ಟು ಎದುರಿಸಿ. ಆತ್ಮ ವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಎಂತಹ ಕಷ್ಟ ಬಂದರೂ ಮೆಟ್ಟಿ ನಿಂತು ಗುರಿ ಮುಟ್ಟಬಲ್ಲೆ ಎಂಬ ಅಚಲ ನಿರ್ಧಾರ, ದೃಢವಿಶ್ವಾಸ ನಮ್ಮದಾಗಲಿ.
ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಿ ಉನ್ನತ ಮಟ್ಟದ ಅಂಕಗಳನ್ನು ಗಳಿಸುವಂತಾಗಲಿ. ಈ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಬಗ್ಗೆ ಸಂಪನ್ಮೂಲ ವ್ಯಕ್ತಿ ಮುನಿರಾಜ ರೆಂಜಾಳ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಯುವವಾಹಿನಿ(ರಿ.) ಮೂಡಬಿದರೆ ಘಟಕ, ರೋಟರಿ ಕ್ಲಬ್ ಆಫ್ ಮೂಡಬಿದರೆ ಟೆಂಪಲ್ ಟೌನ್ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಪ್ರಾಂತ್ಯ ಮೂಡಬಿದರೆಯಲ್ಲಿ 2024ನೇ ಜನವರಿ 16 ರಂದು ಜರುಗಿದ ಜ್ಞಾನದೀಪ 2024 ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಗಾರ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಯುವವಾಹಿನಿ(ರಿ.) ಮೂಡಬಿದರೆ ಘಟಕದ ಅಧ್ಯಕ್ಷರಾದ ಶಂಕರ್ ಎ. ಕೋಟ್ಯಾನ್ ಮಾರೂರು ಅವರು ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ರೋಟರಿ ಕ್ಲಬ್ ಆಫ್ ಮೂಡಬಿದರೆ ಟೆಂಪಲ್ ಟೌನ್ ಇದರ ಅಧ್ಯಕ್ಷರಾದ ರೋನಿ ಫೆರ್ನಾಂಡೀಸ್, ಶಾಲಾ ಮುಖ್ಯೋಪಾಧ್ಯಾಯರು ,ಯುವವಾಹಿನಿ ಕೇಂದ್ರ ಸಮಿತಿಯ ಸಾಮಾಜಿಕ ಜಾಲತಾಣ ಸಂಪಾದಕ ನವಾನಂದ್, ಯುವವಾಹಿನಿ ಮೂಡುಬಿದಿರೆ ಘಟಕದ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ಮಾರೂರು, ಕೋಶಾಧಿಕಾರಿ ಪ್ರತಿಭಾ ಸುರೇಶ್ ಹಾಗೂ ರೋಟರಿ ಕ್ಲಬ್ ಮೂಡಬಿದ್ರೆ ಟೆಂಪಲ್ ಟೌನ್ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಒಟ್ಟು 75 ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಾಹಿತಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.
ಶಾಲಾ ಅಧ್ಯಾಪಕರು ಅತಿಥಿಗಳನ್ನು ಸ್ವಾಗತಿಸಿ ವಂದನಾರ್ಪಣೆಗೈದರು.