ಸುರತ್ಕಲ್: ಯುವಜನತೆಗೆ ದಿನನಿತ್ಯದ ಬದುಕಿನ ಬಾಳ ಬುಟ್ಟಿಯಲ್ಲಿ ನಾರಾಯಣ ಗುರುವರ್ಯರ ಜೀವನಚರಿತ್ರೆಯ ಆದರ್ಶ ಸಂದೇಶಗಳು ದಾರಿದೀಪವಾಗಿರಬೇಕು ಹಾಗೂ ಪರರಿಗೆ ಸದಾ ಒಳಿತನ್ನು ಬಯಸುವಂತಿರಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಪದವಿಪೂರ್ವ ಕಾಲೇಜು ಕಾಟಿಪಳ್ಳದ ಪ್ರಾಂಶುಪಾಲರಾದ ಉಮೇಶ್ ಎಂ. ಕರ್ಕೇರರರು ಹೇಳಿದರು.
ಅವರು ಯುವವಾಹಿನಿ(ರಿ.) ಸುರತ್ಕಲ್ ಘಟಕದ 2023-2024ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವನ್ನು ದಿನಾಂಕ 07-01-2024 ರಂದು ದೇವಾಡಿಗ ಸಭಾಭವನ ಹೊಸಬೆಟ್ಟುವಿನಲ್ಲಿ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷರಾದ ತಾರ ಅಶೋಕ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ಸತೀಶ್ ಮುಂಚೂರ್ ಹಾಗೂ ಸಮಾಜ ಸೇವಕ ದಿಲೀಪ್ ಮುಂಚೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ ಸುರತ್ಕಲ್ ಘಟಕದ 2023-24 ನೇ ಸಾಲಿನ ಸಮಾಜಮುಖಿ ಕಾರ್ಯಗಳು, ಕಥೆ, ಕವನ, ಲೇಖನಗಳನ್ನೊಳಗೊಂಡ ಚಿಲುಮೆ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು. ಚಿಲುಮೆ ಸಂಪಾದಕರಾದ ವಿವೇಕ್ ಬಿ.ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಾರ್ಷಿಕ ಕ್ರೀಡಾಕೂಟದ ಬಹುಮಾನವನ್ನು ಕ್ರೀಡಾ ನಿರ್ದೇಶಕರು ಪ್ರಕಾಶ್ ಸಾಲಿಯಾನ್ ವಿತರಿಸಿದರು.
ಯುವವಾಹಿನಿ(ರಿ.) ಕೇಂದ್ರ ಸಮಿತಿ ಅಧ್ಯಕ್ಷರು ಹರೀಶ್ ಕೆ. ಪೂಜಾರಿ ಇವರು 2023-2024ನೇ ಸಾಲಿನ ಅಧ್ಯಕ್ಷರಾದ ಅಶೋಕ್ ಕುಮಾರ್ ಹಾಗೂ ಕಾರ್ಯದರ್ಶಿ ಸುಲತಾ ನೇತ್ರತ್ವದ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾ ವಿಧಿ ಭೋಧಿಸಿ ಶುಭ ಹಾರೈಸಿದರು.
ಪದಗ್ರಹಣದ ದಿನ ಅಟೋಟ ಸ್ಪರ್ಧೆಯನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಭಾಸ್ಕರ್ ಸಾಲಿಯಾನ್ ಆಟೋಟ ಸ್ಪರ್ಧೆಯನ್ನು ನಿರ್ವಹಿಸಿದ್ದರು. ಕಾರ್ಯದರ್ಶಿ ರೇವತಿ ನವೀನ್ ಘಟಕದ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ದೀವಿತ್ ಪ್ರಾರ್ಥಿಸಿದರು, ಕಾರ್ಯಕ್ರಮದ ಸಂಚಾಲಕರಾದ ಶೈಲೇಶ್ ಕೋಟ್ಯಾನ್ ಧನ್ಯವಾದ ಕೋರಿದರು. ಸ್ವಾಗತ ಘಟಕ ಅಧ್ಯಕ್ಷರು ತಾರ ಅಶೋಕ್ ಮಾಡಿದರು
ನಿರೂಪಣೆ ಸದಸ್ಯರಾದ ಗಾಯತ್ರಿ ಸತೀಶ್ ಮತ್ತು ಮಾಜಿ ಅಧ್ಯಕ್ಷರಾದ ಭಾಸ್ಕರ್ ಸಾಲ್ಯಾನ್ ಮಾಡಿದರು.