ಬಿಲ್ಲವ ಸಮಾಜದ ಶೈಕ್ಷಣಿಕ ಪ್ರಗತಿಗೆ ಯುವವಾಹಿನಿಯು ಶ್ರಮಿಸುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿದ್ದ ಪ್ರತಿಭೆಯೊಂದು ಕಿರಿ ವಯಸ್ಸಿನಲ್ಲಿ ಹಿರಿಯರು ಮಾಡಲಾಗದ ಸಾಧನೆಗೈದಿದ್ದಾರೆ. ಸಮಾಜ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರು ಬೇರಾರೂ ಅಲ್ಲ. ಪಿ.ಬಾಲಕೃಷ್ಣ ಪೂಜಾರಿ-ಮಲ್ಲಿಕಾ ಬಿ. ಪೂಜಾರಿ ದಂಪತಿಗಳ ಸುಪುತ್ರಿ ಮನಿಷಾ ಬಿ. ಪೂಜಾರಿ.
ಕಾಲೇಜು ವಿದ್ಯಾಭ್ಯಾಸ ಹಂತದಿಂದ ಕಲಿಕೆಯ ಮುಂಚೂಣಿಯಲ್ಲಿದ್ದು ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜಿಗೆ ದ್ವಿತೀಯ ಶ್ರೇಷ್ಠರಾಗಿ ಸಾಧನೆಗೈದ ಇವರು ತನ್ನ ಕಲಿಕೆಯಾದ್ಯಂತ ಅತ್ಯುನ್ನತ ಶ್ರೇಣಿಯ ಗಳಿಕೆ ಸಾಧಿಸಿರುವುದು ಉಲ್ಲೇಖನೀಯ. ಬಿ.ಕಾಂ ಪದವಿಯಲ್ಲಿ MGM College ಉಡುಪಿಯ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದು ನಂತರ ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಶಿಪ್ ಬ್ರೋಕರ್‍ಸ್, ಲಂಡನ್ ಇದರ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸಾದ ಉಡುಪಿಯ ಪ್ರಥಮ ಮಹಿಳೆಯಾಗಿದ್ದಾರೆ.
ತನ್ನ 20 ನೇ ವಯಸ್ಸಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಉದ್ಯೋಗ ಗಳಿಸಿ ಅತ್ಯಲ್ಪ ಸಮಯ (4ವರ್ಷ)ದಲ್ಲಿ JAIIB/CAIIB ಪೂರ್ತಿಗೊಳಿಸಿ ಇದೀಗ ಬ್ಯಾಂಕ್ ಮೆನೇಜರ್ ಹುದ್ದೇ ಗಳಿಸುವತ್ತ ದಾಪುಗಾಲು ಹಾಕುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಹಲವು ಅಂತರ್‌ಕಾಲೇಜು ಸ್ಪರ್ಧೆ, ಉತ್ಸವಗಳಲ್ಲಿ ಭಾಗವಹಿಸಿ ಯುನಿವರ್ಸಿಟಿ ಹಾಗೂ ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉಡುಪಿ ಚಾನಲ್‌ನಲ್ಲಿ ಕಾರ್ಯನಿರ್ವಾಹಕಿಯಾಗಿ ಪ್ರತಿಭಾನ್ವಿತೆಯಾಗಿರುವ ಈಕೆ ಸರಕಾರೇತರ ಸಂಸ್ಥೆಯಲ್ಲಿ ಗ್ರಾಮೀಣ ಶೈಕ್ಷಣಿಕ ಮಟ್ಟದ ಅಧ್ಯಯನ ಮಾಡಿರುತ್ತಾರೆ. ನಿಸ್ಸಂಶಯವಾಗಿ ಬಿಲ್ಲವ ಸಮುದಾಯದ ಶ್ರೇಷ್ಠ ಯುವಸಾಧಕಿಯಾಗಿ ಕು| ಮನಿಷಾ ಬಿ. ಪೂಜಾರಿಯವರನ್ನು ಯುವವಾಹಿನಿಯು ಹೆಮ್ಮೆಯಿಂದ ಗೌರವಿಸುತ್ತದೆ.