ಕೊಲ್ಯ :- ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಸೋಮೇಶ್ವರ ಮತ್ತು ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಹಾಗೂ ಚುಟುಕು ಸಾಹಿತ್ಯ ಪರಿಷತ್ ಉಳ್ಳಾಲ ಘಟಕ ಇದರ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯುವಸಂಜೆ- ಭಾವಲಹರಿ, ಕವಿ ಕಾವ್ಯ ಗಾಯನವು ದಿನಾಂಕ 01 ನವೆಂಬರ್ 2022 ರಂದು ಸಂಜೆ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನ ಕೊಲ್ಯದಲ್ಲಿ ಜರುಗಿತು. ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಇದರ ವಿದ್ಯಾರ್ಥಿಗಳು ನಾಡಗೀತೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಚ್ಚೇವು ಕನ್ನಡದ ದೀಪ…ಈ ಹಾಡಿನ ಮೂಲಕ ದೀಪ ಬೆಳಗಿಸುವುದರ ಮೂಲಕ ಉಪನ್ಯಾಸಕರೂ, ಧರ್ಮಶಿಕ್ಷಣದ ಗುರುಗಳೂ ಆಗಿರುವ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಡಾ.ಅರುಣ್ ಉಳ್ಳಾಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ದ.ಕ.ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ಹ.ಸು.ಒಡ್ಡಂಬೆಟ್ಟು ಮತ್ತು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಕಾ.ವೀ.ಕೃಷ್ಣದಾಸ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಸೋಮೇಶ್ವರದ ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯರವರು ಅತಿಥಿಗಳಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷರಾದ ಸುಂದರ್ ಸುವರ್ಣ ರವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಕು.ಅನ್ವಿತಾರವರು ಧನ್ಯವಾದ ಸಮರ್ಪಿಸಿದರು. ಯುವವಾಹಿನಿ ಕೊಲ್ಯ ಘಟಕದ ಪ್ರಚಾರ ನಿರ್ದೇಶಕರಾದ ಜೀವನ್ ಕೊಲ್ಯ ಮತ್ತು ಪ್ರಥಮ ಉಪಾಧ್ಯಕ್ಷರಾದ ಲತೀಶ್ ಎಂ ಸಂಕೋಳಿಗೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಆರಂಭದಲ್ಲಿ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಇದರ ವಿದ್ಯಾರ್ಥಿಗಳು ನಿತ್ಯಾನುಷ್ಠಾನ ಶ್ಲೋಕವನ್ನು ಪಠಿಸಿದರು.ಯುವವಾಹಿನಿ ಕೊಲ್ಯ ಘಟಕದ ಸದಸ್ಯರಾಗಿರುವ ಉದಯೋನ್ಮುಖ ಗಾಯಕರಿಂದ ಗಾಯನ, ಭಾವಲಹರಿ ಕಾರ್ಯಕ್ರಮ ಜರುಗಿತು. ಚುಟುಕು ಸಾಹಿತ್ಯ ಪರಿಷತ್ ಉಳ್ಳಾಲ ಘಟಕ ಇದರ ಆಯ್ದ ಹತ್ತು ಜನ ಕವಿ ಕವಯತ್ರಿಗಳು ಕವನ ವಾಚಿಸಿದರು. ಯುವವಾಹಿನಿ ಕೊಲ್ಯ ಘಟಕದ ಸದಸ್ಯರಾದ ಕು.ಅನ್ವಿತ ಮಲಯಾಳಕೋಡಿ ಮತ್ತು ಸಚೇತಾ ಕೊಲ್ಯ ನೃತ್ಯ ಪ್ರದರ್ಶನ ನೀಡಿದರು.