ಮೂಲ್ಕಿ :- ಯುವವಾಹಿನಿ (ರಿ.) ಮುಲ್ಕಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮವಾಗಿರುವ “ತುಳುವೆರೆ ತುಡರಪರ್ಬ” ಕಾರ್ಯಕ್ರಮವು ದಿನಾಂಕ 23 ಅಕ್ಟೋಬರ್ 2022ನೇ ಆದಿತ್ಯವಾರದಂದು ಘಟಕದ ಅಧ್ಯಕ್ಷರಾದ ಭಾರತಿ ಭಾಸ್ಕರ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಮುಲ್ಕಿ ಬಿಲ್ಲವ ಸಂಘದ ಸಭಾ ಗ್ರಹದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಉದ್ಘಾಟಿಸಿ ಮಾತನಾಡಿ ದೀಪಾವಳಿಯ ಪರ್ವಕಾಲದ ಬೆಳಕು ದೇಶದ ಉನ್ನತಿಯ ಬೆಳಕಾಗಿ ಮೂಡಿ ಸಮಾಜದ ಅಭಿವೃದ್ಧಿಗೊಳಿಸುವಂತಾಗಬೇಕೆಂದರು. ಸಮಾಜ ಸೇವಕ ಬಿಲ್ಲವ ಸಂಘ ಕೆ ಎಸ್ ರಾವ್ ನಗರ ರಾಘವ ಸುವರ್ಣರನ್ನು ಪರ್ಭ ದ ತಮ್ಮನ ನೀಡಿ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಾರಾಯಣ ಗುರು ಆಂಗ್ಲ ಮಾದ್ಯಮ ಶಾಲೆಯ ನಮ್ಮ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಾರ್ವಜನಿಕರಿಗೆ ಆಯೋಜಿಸಿದ್ದ ಗೂಡು ದೀಪ , ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಉಮಾಶ್ರೀ ಅಡ್ವೆ ಘಟಕ ದ್ವಿತೀಯ ಬಹುಮಾನ ಶರತ್ ಅಡ್ವೆ ಘಟಕ ತೃತೀಯ ಬಹುಮಾನ ಶಾಮಲಾ ಕಿಲ್ಪಾಡಿ ಗೂಡು ದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಯೋಗೀಶ್ ಬಜ್ಪೆ ಘಟಕ ದ್ವಿತೀಯ ಬಹುಮಾನ ಶಾಶ್ವತ್ ಪಡುಬಿದ್ರಿ ಘಟಕ ತೃತೀಯ ಬಹುಮಾನ ಪೂಜಾ ಅರೆಂಜರ್ಸ್ ಹಳೆಯಂಗಡಿ ಗುರುಪೂಜೆ ನಡೆದ ಬಳಿಕ ಗೋವಿಗೆ ಮಹಿಳೆಯರು ಆರತಿ ಬೆಳಗಿಸಿ ಅಕ್ಕಿಗಟ್ಟಿ ಮತ್ತು ಅವಲಕ್ಕಿ ತಿನ್ನಿಸಿ ಗೋ ಪೂಜೆ ನಡೆಸಿದರು. ತುಳಸಿ ಬೃಂದಾವನದ ಹಿನ್ನೆಲೆಯಲ್ಲಿ ನಿರ್ಮಿಸಿದ ಬಲೆಕಿ ಮರಕ್ಕೆ ದೀಪ ಬೆಳಗಿಸಿದ ಬಳಿಕ ಹಿರಿಯ ಸದಸ್ಯ ಮಾಜಿ ಅಧ್ಯಕ್ಷ ಜಯಕುಮಾರ್ ಕುಬೆವೂರುವರು ಬಲಿಯೇಂದ್ರ ಕೂಗುವ ಮೂಲಕ ತುಳುವ ಸಾಂಪ್ರದಾಯಿಕ ದೀಪಾವಳಿ ಆಚರಿಸಲಾಯಿತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುರೋಹಿತರಾದ ಅನಂತ ರಾಜ್ ಭಟ್ ಹೆಜಮಾಡಿ ಮಾತನಾಡಿ, ದೀಪಾವಳಿಯ ಶುಭ ದಿನದಂದು ವಿಶ್ವದಲ್ಲಿ ದೀಪದ ಬೆಳಕಿನ ಜೊತೆ ಶಾಂತಿ ಸಮೃದ್ಧಿ ನೆಲೆಸಲಿ ಎಂದು ಶುಭ ಹಾರೈಸಿದರು. ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೇ ಹೀಲ್ಡಾ ಡಿಸೋಜಾ, ಸಮಾಜ ಸೇವಕ ಅಬ್ದುಲ್ ಅಜೀಜ್ ಹೆಜಮಾಡಿ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಮಾತನಾಡಿ ತುಡರ ಪರ್ಭಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಯುವವಾಹಿನಿ ಕೆಂದ್ರ ಸಮಿತಿ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ಹಾಗೂ ಕಾರ್ಯಕ್ರಮ ನಿರ್ದೇಶಕರಾದ ಲತಿಶ್ ಕಾರ್ನಾಡ್ ಹಾಗೂ ಪ್ರಮೀಳಾ ಮಾಧವ್ ಉಪಸ್ಥಿತರಿದ್ದರು. ವೇದ ಜಯಕುಮಾರ್ ಕುಬೇವೂರು ಸನ್ಮಾನ ಪತ್ರ ವಾಚಿಸಿದರು. ಸೇರಿದ ಎಲ್ಲಾ ಸಭಿಕರಿಗೆ ಗಟ್ಟಿ ಅವಲಕ್ಕಿ ಕಷಾಯ ವಿತರಿಸಲಾಯಿತು. ಪ್ರೇರಣರವರು ಪ್ರಾರ್ಥಿಸಿ, ಅಧ್ಯಕ್ಷರಾದ ಭಾರತಿ ಭಾಸ್ಕರ್ ಸ್ವಾಗತಿಸಿದರು. ಅತಿಥಿಗಳನ್ನು ಶಾಲು ಹಾಗೂ ತಾಂಬೂಲ ಅಡಿಕೆ ಹಿಂಗಾರ ನೀಡಿ ಘಟಕದ ಸದಸ್ಯರು ಗೌರವಿಸಿ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕರಾದ ಲತೀಶ್ ಕಾರ್ನಾಡ್ ರವರು ಧನ್ಯವಾದ ಅರ್ಪಿಸಿದರು. ಘಟಕದ ಮಾಜಿ ಅಧ್ಯಕ್ಷರುಗಳಾದ ಮೋಹನ್ ಸುವರ್ಣ ಹಾಗೂ ರಕ್ಷಿತ ಯೋಗೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.