ಉಪ್ಪಿನಂಗಡಿ :- ಯುವವಾಹಿನಿ ಉಪ್ಪಿನಂಗಡಿ ಘಟಕವು 25 ಸಂವತ್ಸರಗಳನ್ನು ಪೊರೈಸಿದ ಸವಿನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರ ಮನೆ ಭೇಟಿಯ ಭಾಗವಾಗಿ ಭಜನೆ ಮತ್ತು ಗುರುಸ್ಮರಣೆ ಕಾರ್ಯಕ್ರಮದ 15 ನೇ ಕಾರ್ಯಕ್ರಮವನ್ನು ದಿನಾಂಕ 29 ಅಕ್ಟೋಬರ್ 2022ರ ಶನಿವಾರದಂದು ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕವನ್ನು 2017-2018ರ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅಶೋಕ್ ಕುಮಾರ್ ಪಡ್ಪು ಇವರ “ಸಾನಿಧ್ಯ” ಮನೆಯಲ್ಲಿ ನಡೆಯಿತು.ಭಜನಾ ಕಾರ್ಯಕ್ರಮ ಮುಗಿದ ನಂತರ ಗುರು ಸ್ಮರಣೆ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಡಾ. ರಾಜರಾಮ್ ಕೆ.ಬಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಘಟಕವನ್ನು ತಮ್ಮ ಅಧ್ಯಕ್ಷಾವಧಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಅಶೋಕ್ ಕುಮಾರ್ ಪಡ್ಪು, ಸೌಮ್ಯ ಅಶೋಕ್ ಕುಮಾರ್ ದಂಪತಿಗಳನ್ನು ಶ್ರೀಯುತರ ತಾಯಿ ಗಿರಿಜಾ ಮತ್ತು ಮಗಳಾದ ಸಾನಿಧ್ಯ ಇವರೊಂದಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು.ಗೌರವ ಸ್ವೀಕರಿಸಿ ಮಾತನಾಡಿದ ಅಶೋಕ್ ಕುಮಾರ್ ಪಡ್ಪುರವರು ಯುವವಾಹಿನಿಯ ಜೊತೆಗಿನ ಒಡನಾಟ ತಮ್ಮ ಜೀವನದಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದರ ಜೊತೆಗೆ ಕೇಂದ್ರ ಸಮಿತಿಯಲ್ಲಿ ಕೆಲಸ ಮಾಡುವ ಅವಕಾಶ ಒದಗಿಸಿತು ಎಂದು ಹೇಳಿದರು ಹಾಗೆಯೇ ತಮ್ಮ ಅಧ್ಯಕ್ಷಾವಧಿಯಲ್ಲಿ ಘಟಕವನ್ನು ಅತ್ಯುತ್ತಮ ಮಟ್ಟದಲ್ಲಿ ನಡೆಸಲು ಸಹಕರಿಸಿದ ಸರ್ವರ ಸಹಕಾರವನ್ನು ಮತ್ತೊಮ್ಮೆ ನೆನೆಪಿಸಿದರು.
ಘಟಕದ ಗೌರವ ಸಲಹೆಗಾರರಾದ ವರದರಾಜ್. ಎಂ, ಘಟಕದ ಅಧ್ಯಕ್ಷರಾದ ಕುಶಾಲಪ್ಪ ಹತ್ತು ಕಳಸೆ, ಸಮಾಜದ ಮುಖಂಡರಾದ ದೇವಪ್ಪಪೂಜಾರಿ ಪಡ್ಪು, ಮಾಜಿ ಅಧ್ಯಕ್ಷರಾದ ಗುಣಕರ ಅಗ್ನಾಡಿ , ಅಜಿತ್ ಕುಮಾರ್ ಪಾಲೇರಿ, ಕೃಷ್ಣಪ್ಪ ಪೂಜಾರಿ , ಚಂದ್ರಶೇಖರ್ ಕೆ ಸನೀಲ್ , ಡಾ. ಆಶಿತ್ ಎಂ.ವಿ, ನವೀನ್ ಪಡ್ಪು , ಡೀಕಯ್ಯ ಗೌಂಡತ್ತಿಗೆ, ಲೋಕೇಶ್ ಬೆತ್ತೋಡಿ , ಸುಂದರ ಪೂಜಾರಿ ಎಲಿಯ, ಹರೀಶ್ ಕುಮಾರ್ ಪಾಲೆತ್ತಡಿ ಹಿರಿಯರಾದ ಬೊಮ್ಮಯ್ಯ ಬಂಗೇರ, ಘಟಕದ ಕಾರ್ಯದರ್ಶಿ ಉದಯ್ ಪೂಜಾರಿ,ಜೊತೆ ಕಾರ್ಯದರ್ಶಿ ಅನಿತಾ ಸತೀಶ್ , ಘಟಕದ ಉಪಾಧ್ಯಕ್ಷರಾದ ಮನೋಹರ್ ಆಟಲ್ , ಮನೋಜ್ ಸಾಲಿಯಾನ್, ಬಿಲ್ಲವ ಗ್ರಾಮ ಸಮಿತಿ ಬೆಳ್ಳಿಪಾಡಿಯ ಅಧ್ಯಕ್ಷರಾದ ವಸಂತ್ ಪೂಜಾರಿ, ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಕಜೆ, ಬಜತ್ತೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಸೋಮಸುಂದರ್, ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಕುಶಾಲಪ್ಪ ಹತ್ತುಕಳಸೆ ಸ್ವಾಗತಿಸಿ, ಘಟಕದ ಜೊತೆ ಕಾರ್ಯದರ್ಶಿ ಅನಿತಾ ಸತೀಶ್ ಧನ್ಯವಾದ ಸಮರ್ಪಿಸಿದರು . ಘಟಕದ ಮಾಜಿ ಅಧ್ಯಕ್ಷರಾದ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.