ಕಡಬ :- ಭಜನೆ ಎಂಬ ಮೂರು ಅಕ್ಷರಕ್ಕೆ ಬಹಳ ಮಹತ್ವವಿದೆ.*
ಭ,ಎಂದರೇ ಭಜಿಸು
ಜ, ಎಂದರೇ ಜಪಿಸು
ನೆ, ಎಂದರೇ ನೆನಪಿಸು
ಈ ಸುಂದರ ಅರ್ಥ ಉಲ್ಲ ಭಜನೆಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ತಾಯಿ ದೇಯಿಬೈದೆತಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ದಿನಾಂಕ 02 ಅಕ್ಟೋಬರ್ 2022ರ ಆದಿತ್ಯವಾರದಂದು ಘಟಕದ ನಡೆಸಲಾಯಿತು. ಮಧ್ಯಾಹ್ನ ಗಂಟೆ 12:30ರಿಂದ 2:00 ಗಂಟೆಯವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಪ್ರವೀಣ್ ಓಂಕಾಲ್, ಕಾರ್ಯದರ್ಶಿ ಕೃಷ್ಣಪ್ಪ ಅಮೈ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲ, ನಯನ ನೆಕ್ಕಿತ್ತಡ್ಕ ಭಜನಾ ನಿರ್ದೇಶಕರು, ನಯನ ಕುಮಾರಿ ಅಮೈ ಸಮಾಜ ಸೇವಾ ನಿರ್ದೇಶಕರು, ಪ್ರಶಾಂತ್ ಎನ್,ಎಸ್ ಕಡಬ, ನಿಶ್ಮಿತ ಅಮೈ, ಜಯಪ್ರಕಾಶ್ ದೋಳ, ಕೋಶಾಧಿಕಾರಿ ಧನಂಜಯ ಮರ್ಧಾಳ, ವೇದಾಂತ್ ಅಂಗಣ, ಮಾನ್ವಿತಾ ಅಂಗಣ ಧನ್ಯ ಆಲಂಕಾರು ಉಪಸ್ಥಿತರಿದ್ದರು. ಭಜನೆ ನಡೆಸಿ ಕೊಟ್ಟು ನಮ್ಮ ತಂಡದ ಅಧ್ಯಕ್ಷರಿಗೆ, ಭಜನಾ ನಿರ್ದೇಶಕರಿಗೆ, ಸಂಘಟನಾ ಕಾರ್ಯದರ್ಶಿಯವರಿಗೆ ಆಡಳಿತ ಮಂಡಳಿಯವರು ಶಾಲು ಹಾಕಿ ಗೌರವಿಸಿದರು. ಭಜನಾ ಸದಸ್ಯರಿಗೆ ಪ್ರಸಾದ ವಿತರಿಸಿ ಮುಕ್ತಾಯದ ಹಂತದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.