ಪಣಂಬೂರು ಕುಳಾಯಿ :-ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕದ 2022-23ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ದಿನಾಂಕ 02 ಅಕ್ಟೋಬರ್ 2022 ರ ಆದಿತ್ಯವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬ್ರಹ್ಮ ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಅಧ್ಯಕ್ಷರಾದ ಗೋಪಾಲ ಬಂಗೇರ ನೇರವೇರಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಜಯಾನಂದ ಅಂಜನ್, ಮಹಾಪೌರರು, ಮಂಗಳೂರು ಮಹಾನಗರ ಪಾಲಿಕೆ, ಸತ್ಯಜಿತ್ ಸುರತ್ಕಲ್, ರಾಜ್ಯಾಧ್ಯಕ್ಷರು, ನಾರಾಯಣಗುರು ವಿಚಾರ ವೇದಿಕೆ ಇವರುಗಳು ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ರವಿ ಅಮೀನ್, ಅಧ್ಯಕ್ಷರು, ಪಣಂಬೂರು-ಕುಳಾಯಿ ಘಟಕ, ಉದಯ ಅಮೀನ್ ಮಟ್ಟು, ಅಧ್ಯಕ್ಷರು ಯುವವಾಹಿನಿ (ರಿ.) ಕೇಂದ್ರ ಸಮಿತಿ, ಹರಿಣಿ ಜಗದೀಶ್, ಕಾರ್ಯದರ್ಶಿ ಪಣಂಬೂರು-ಕುಳಾಯಿ ಘಟಕ, ಹರೀಶ್ ಪೂಜಾರಿ ವಿದ್ಯಾನಿಧಿ ಸಂಚಾಲಕರು ಹಾಗೂ ಲೋಕೇಶ್ ಆರ್ ಅಮೀನ್ ,ಕಾರ್ಯಕ್ರಮದ ಸಂಚಾಲಕರು ಉಪಸ್ಥಿತಿಯಲ್ಲಿದ್ದರು. ಘಟಕದ ಅಧ್ಯಕ್ಷರಾದ ರವಿ ಅಮೀನ್ ರವರು ವೇದಿಕೆಯಲ್ಲಿದ್ದ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಪ್ರಸ್ತಾವನೆಯನ್ನು ಘಟಕದ ದ್ವೀತಿಯ ಉಪಾಧ್ಯಕ್ಷರಾದ ಮನೀಷಾ ರೂಪೇಶ್ ರವರು ಮಂಡಿಸಿದರು. ಗೋಪಾಲ ಬಂಗೇರರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಘಟಕದ ಕಾರ್ಯದರ್ಶಿ ಹರಿಣಿ ಜಗದೀಶ್ ರವರು 2021-22 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ನಂತರ ಜಯಾನಂದ ಅಂಚನ್ ರವರನ್ನು ಎಲ್ಲರ ಸಮ್ಮುಖದಲ್ಲಿ ಗೌರವಿಸಲಾಯಿತು. 2021-22 ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಸತ್ಯಜಿತ್ ಸುರತ್ಕಲ್ ರವರಿಗೆ ಹಾಗೂ ಉದ್ಘಾಟಕರಾಗಿ ಆಗಮಿಸಿದ ಗೋಪಾಲಕೃಷ್ಣ ಬಂಗೇರ ರವರಿಗೆ ಅಧ್ಯಕ್ಷರು ಸ್ಮರಿಣಿಕೆ ನೀಡಿ ಗೌರವಿಸಿದರು. ಪ್ರಸಕ್ತ ಸಾಲಿನ ಚುನಾವಣಾ ಅಧಿಕಾರಿಯವರಾದ ಹರೀಶ್ ಪೂಜಾರಿಯವರು 2022-23ನೇ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಿ ವೇದಿಕೆಗೆ ಬರಮಾಡಿಕೊಂಡರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟುರವರು ಪ್ರತಿಜ್ಞಾವಿಧಿ ಬೋಧಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ಬಡ ಮಕ್ಕಳಿಗೆ ವಿದ್ಯಾನಿಧಿ ವಿತರಣೆ ಮಾಡಲಾಯಿತು. “ವಿಶುಕುಮಾರ್ ಸಾಹಿತ್ಯ ಪ್ರಶಸ್ತಿ ಪ್ರಧಾನ” ಸಮಾರಂಭದ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ಕವನ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಘಟಕದ ಸದಸ್ಯೆಯಾದ ಯಶಸ್ವಿನಿಯವರನ್ನು ಗೌರವಿಸಲಾಯಿತು.
2022-23ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ರಂಜನ್ ಕೋಟ್ಯಾನ್ ರವರು ಮಾತನಾಡಿ ತನ್ನನ್ನು ಆಯ್ಕೆ ಮಾಡಿದ ಎಲ್ಲಾ ಪದಾಧಿಕಾರಿಗಳಿಗೆ ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ ಧನ್ಯವಾದ ಅರ್ಪಿಸಿದರು. ಮುಂದಿನ ದಿನಗಳಲ್ಲಿ ನಡೆಯಲಿರುವ ಘಟಕದ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಹಕರಿಸುವಂತೆ ಸದಸ್ಯರುಗಳಲ್ಲಿ ಮನವಿ ಮಾಡಿಕೊಂಡರು. ನಿರ್ಗಮನ ಅಧ್ಯಕ್ಷರಾದ ರವಿ ಅಮೀನ್ ರೇಣುಕಾ ದಂಪತಿಗಳನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು. ನಂತರ ರವಿ ಅಮೀನ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಅಧ್ಯಕ್ಷತೆಯ ಅನುಭವವನ್ನು ಹಂಚಿಕೊಂಡು ಘಟಕದ ಎಲ್ಲಾ ಮಾಜಿ ಅಧ್ಯಕ್ಷರುಗಳನ್ನು ವೇದಿಕೆಗೆ ಆಹ್ವಾನಿಸಿ ಗೌರವಿಸಿದರು. ಕೇಂದ್ರ ಸಮಿತಿಯ ಹಾಗೂ ವಿವಿಧ ಘಟಕಗಳಿಂದ ಆಗಮಿಸಿದ ಅತಿಥಿಗಳು ನೂತನ ತಂಡಕ್ಕೆ ಶುಭ ಹಾರೈಸಿದರು. ಘಟಕದ ಮಹಿಳಾ ಸದಸ್ಯರುಗಳು ಹಾಗೂ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಸಂಜೀವ ಸುವರ್ಣ ಹಾಗೂ ಕುಮಾರಿ ಅಕ್ಷಿತಾ ರವರು ನಿರೂಪಿಸಿದರು. ನೂತನ ಕಾರ್ಯದರ್ಶಿಯವರಾದ ಯಶವಂತ ಕುಮಾರ್ ರವರ ವಂದನಾರ್ಪಣೆಯೊಂದಿಗೆ ಸಮಾರಂಭವು ಸಂಪನ್ನಗೊಂಡಿತು.