ಕಳೆದ 35 ವರುಷಗಳಿಂದ ಯುವವಾಹಿನಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯರು, ರಾಜ್ಯಾದ್ಯಂತ ಕಾರ್ಯಾಚರಿಸುತ್ತಿರುವ 33 ಘಟಕಗಳ ಸುಮಾರು ಮೂರು ಸಾವಿರಕ್ಕೂ ಅಧಿಕ ಸದಸ್ಯರ ಶ್ರಮ…..ಇವೇ ಯುವವಾಹಿನಿಯ ಸಾಧನೆಯ ಹಿಂದಿರುವ ಶಕ್ತಿ, ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಅಮೀನ್ ಮಟ್ಟು ತಿಳಿಸಿದರು. ನಮ್ಮ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ ಕರ್ನಾಟಕ ಸರಕಾರಕ್ಕೆ ಕೃತಜ್ಞತೆಗಳು ಹಾಗೂ ಪ್ರತಿಯೊಂದು ಯುವವಾಹಿನಿ ಸದಸ್ಯರಿಗೆ ಈ ಪ್ರಶಸ್ತಿಯನ್ನು ಅರ್ಪಿಸಲಾಗುವುದು ಹಾಗೂ ಈ ಸಾಧನೆಯ ಹಿಂದಿರುವ ಪ್ರತಿ ಯುವವಾಹಿನಿ ಸದಸ್ಯರಿಗೆ ಹೃದಯಾಂತರಾಳದ ಅಭಿನಂದನೆಗಳನ್ನು ಸಲ್ಲಿಸಿದರು. ಹಾಗೂ ಸಂತಸ ವ್ಯಕ್ತಪಡಿಸಿದರು
ಇದೊಂದು ಅಪೂರ್ವ ಕ್ಷಣ. ನಾವು ಕಟ್ಟಿ ಬೆಳೆಸಿದ, ಇದರ ಅಭಿವೃದ್ಧಿಗೆ ಬೆವರು ಸುರಿಸಿದ ನಾವೆಲ್ಲರೂ ಧನ್ಯರು.
ಸಂಚಾರಿ ದೂರವಾಣಿ ಕನಸಾಗಿದ್ದ ಕಾಲದಲ್ಲಿ, ದೂರವಾಣಿ ಸಂಪರ್ಕ ದುರ್ಲಭ ವಾಗಿದ್ದ ಕಾಲದಲ್ಲಿ, ಸಂಚಾರ ವ್ಯವಸ್ಥೆ ವಿರಳವಾಗಿದ್ದ ಸಂಧರ್ಭದಲ್ಲಿ, ಕೇವಲ ಅಂಚೆ ಕಾರ್ಡ್ ಸೌಲಭ್ಯ ದೊಂದಿಗೆ ಅವಿಭಜಿತ ದ ಕ ಜಿಲ್ಲೆಯದ್ಯಂತ ಸಂಚರಿಸಿ ಸಂಘಟನೆಯನ್ನು ಬಲ ಪಡಿಸಲು ಶ್ರಮಿಸಿದ ನಮ್ಮ ಬೆವರ ಹನಿಗೆ ಇಂದು ಬೆಲೆ ಬಂತು.ಇದಕ್ಕಾಗಿ ದುಡಿದ ಎಲ್ಲರೂ ಅಭಿನಂದನಾರ್ಹರು.