ಕೊಲ್ಯ :- ಯುವವಾಹಿನಿ(ರಿ.) ಕೊಲ್ಯ ಘಟಕ ಮತ್ತು ರೋಟರಿ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ,ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಆಶ್ರಯದಲ್ಲಿ ಮತ್ತು ಎನಿಮಲ್ ಕೇರ್ ಟ್ರಸ್ಟ್ ಮಂಗಳೂರು ಇದರ ಸಹಕಾರದಲ್ಲಿ ಉಚಿತ ಹುಚ್ಚು ನಾಯಿ ನಿಯಂತ್ರಣಾ ಲಸಿಕಾ ಶಿಬಿರ ಮತ್ತು ದೇಸೀ ಬೆಕ್ಕು ಮತ್ತು ನಾಯಿ ಮರಿಗಳ ದತ್ತು ಕೊಡುವ ಕಾರ್ಯಕ್ರಮವು ದಿನಾಂಕ 25 ಸೆಪ್ಟೆಂಬರ್ 2022ರಂದು ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇದರ ವಠಾರದಲ್ಲಿ ಜರಗಿತು. ಪರಿಸರದ 150 ಕಿಂತ ಜಾಸ್ತಿ ಸಾಕುನಾಯಿ, ಬೆಕ್ಕು ಗಳಿಗೆ ಹುಚ್ಚು ನಾಯಿ ನಿಯಂತ್ರಣಾ ಲಸಿಕೆಯನ್ನು ಉಚಿತವಾಗಿ ನೀಡುವುದರ ಮೂಲಕ ರೇಬಿಸ್ ರೋಗದ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.ಈ ಯಶಸ್ವೀ ಶಿಬಿರದಲ್ಲಿ ಹಲವು ಜನರು ದೇಸೀ ನಾಯಿ ಮರಿಗಳನ್ನು ದತ್ತು ಪಡೆಯುವ ಮೂಲಕ ಮೂಕಪ್ರಾಣಿಗಳಿಗೆ ಆಶ್ರಯದಾತರಾದರು.
ಯುವವಾಹಿನಿ (ರಿ.)ಕೊಲ್ಯ ಘಟಕದ ಅಧ್ಯಕ್ಷರಾದ ಸುಂದರ್ ಸುವರ್ಣ, ಸಮಾಜ ಸೇವೆ ನಿರ್ದೇಶಕರಾದ ಜೀವನ್ ಬೆರಿಕೆ, ರೋಟರಿ ಸಮುದಾಯದಳ ಕೊಲ್ಯ ಇದರ ಅಧ್ಯಕ್ಷರಾದ ಆನಂದ್ ಮಲಯಾಳ ಕೋಡಿ, ಘಟಕದ ಸ್ಥಾಪಕ ಅಧ್ಯಕ್ಷರು,ಮಾಜಿ ಅಧ್ಯಕ್ಷರು,ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ಇನ್ನಿತರ ಜಂಟಿ ಸಂಸ್ಥೆಗಳ ಅಧ್ಯಕ್ಷರು,ಪದಾಧಿಕಾರಿಗಳು ಭಾಗವಹಿಸಿದ್ದರು. ಎನಿಮಲ್ ಕೇರ್ ಟ್ರಸ್ಟ್ ಮಂಗಳೂರು ಇದರ ವೈದ್ಯರ ತಂಡ ಹಾಗೂ ಸ್ವಯಂ ಸೇವಕರ ತಂಡವು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.