ಉಪ್ಪಿನಂಗಡಿ :- ಯುವವಾಹಿನಿ ಉಪ್ಪಿನಂಗಡಿ ಘಟಕವು 25 ಸಂವತ್ಸರಗಳನ್ನು ಪೊರೈಸಿದ ಸವಿನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರ ಮನೆ ಭೇಟಿಯ ಭಾಗವಾಗಿ ಭಜನೆ ಮತ್ತು ಗುರುಸ್ಮರಣೆ ಕಾರ್ಯಕ್ರಮ ದಿ.24 ಸೆಪ್ಟೆಂಬರ್ 2022ರ ಶನಿವಾರದಂದು ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕವನ್ನು 2005-2006ರ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕೃಷ್ಣಪ್ಪ ಪೂಜಾರಿ ಇವರ ಮನೆಯಲ್ಲಿ ನಡೆಯಿತು. ಭಜನಾ ಕಾರ್ಯಕ್ರಮ ಮುಗಿದ ತರುವಾಯ ಗುರು ಸ್ಮರಣೆ ಕಾರ್ಯಕ್ರಮವನ್ನು ಘಟಕದ ಉಪಾಧ್ಯಕ್ಷರಾದ ಮನೋಹರ್ ಆಟಲ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಘಟಕವನ್ನು ತಮ್ಮ ಅಧ್ಯಕ್ಷಾವಧಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಕೃಷ್ಣಪ್ಪ ಪೂಜಾರಿ ವನಿತಾ ದಂಪತಿಗಳನ್ನು ಮಗ ಕುಮಾರ್ ವೈಶಾಕ್ ಸಮ್ಮುಖದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಕೃಷ್ಣಪ್ಪ ಪೂಜಾರಿ ರವರು ಸಾಮಾಜಿಕ ಜಾಲತಾಣ ಅಷ್ಟೇನು ಪ್ರಚಲಿತವಿಲ್ಲದ ಸಮಯದಲ್ಲಿ ಘಟಕ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಸಂತ್ರಪ್ತಿಯ ಅನುಭವ ಬಿಚ್ಚಿಟ್ಟರು… ಘಟಕದ ಅಧ್ಯಕ್ಷರಾದ ಕುಶಾಲಪ್ಪ ಹತ್ತು ಕಳಸೆ, ಕೇಂದ್ರ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರೂ ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಡಾ. ರಾಜರಾಮ್ ಕೆ.ಬಿ, ಮಾಜಿ ಅಧ್ಯಕ್ಷರಾದ ಗುಣಕರ್ ಮುಗ್ಗಗುತ್ತು, ಗುಣಕರ್ ಅಗ್ನಾಡಿ, ಅಜಿತ್ ಕುಮಾರ್ ಪಾಲೇರಿ, ಜಯಾನಂದ ಕಲ್ಲಾಪು, ಡಾ.ಆಶಿತ್ ಎಂ.ವಿ, ರವೀಂದ್ರ ದಲ್ಕಾಜೆ, ಲೋಕೇಶ್ ಬೆತ್ತೋಡಿ, ಹಿರಿಯರಾದ ಬೊಮ್ಮಯ್ಯ ಬಂಗೇರ, ಘಟಕದ ಕಾರ್ಯದರ್ಶಿ ಉದಯ್ ಪೂಜಾರಿ, ಪದಾಧಿಕಾರಿಗಳಾದ ಮಾಧವ್ ಬಿ.ಕೆ, ಅಂಕಿತ್ ಪೂಜಾರಿ, ನಯನಮನೋಹರ್, ಮನೋಹರ್ ಕರುವೇಲ್, ರಕ್ಷಾ ಎಚ್ ಎಸ್, ಬಿಲ್ಲವ ಗ್ರಾಮ ಸಮಿತಿ ಬೆಳ್ಳಿಪಾಡಿಯ ಅಧ್ಯಕ್ಷರಾದ ವಸಂತ್ ಪೂಜಾರಿ, ಘಟಕದ ಸದಸ್ಯರಾದ ರಮೇಶ್ ಕರ್ವೆಲು, ಗಂಗಾಧರ್ ಪುರಿಯ, ಕು. ವರ್ಷ, ಕು. ಹರ್ಷಿತಾ , ಕು.ಸುಶ್ಮಿತಾ, ಕು. ರಕ್ಷಿತಾ, ಕು.ಅನುಜ್ಞಾ ಆಟಲ್, ಬೇಬಿ ಅಭಿಜ್ಞಾ, ಬೇಬಿ ಸಾನಿಧ್ಯ, ಬೇಬಿ ದ್ರುವಿ,ಮಾಸ್ಟರ್ ಕೃತಿಕ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಶಾಲಪ್ಪ ಹತ್ತುಕಳಸೆ ಸ್ವಾಗತಿಸಿ,ಮಾಜಿ ಅಧ್ಯಕ್ಷರಾದ ಲೋಕೇಶ್ ಬೆತ್ತೋಡಿ ಧನ್ಯವಾದ ಸಮರ್ಪಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಕಾರ್ಯಕ್ರಮ ನಿರೂಪಿಸಿದರು.