ಮಂಗಳೂರು:- ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿರಿ, ದುಶ್ಚಟಗಳಿಂದ ವಿಮುಖರಾಗಿ ಸತ್ಪ್ರಜೆಗಳಾಗಿ ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ತಿಳಿಯ ಪಡಿಸಿದ ಅಸೋಸಿಯೇಟ್ ಪ್ರೊಫೆಸರ್ ವಿನೀತ ರೈ ಅವರು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ನಾರಾಯಣ ಗುರುಗಳ ತತ್ವದೇಶಗಳನ್ನು ಘೋಷಿಸುವುದರ ಮೂಲಕ ನಾವೆಲ್ಲರೂ ಒಂದೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ನಡೆದ ಗುರು ಜಯಂತಿ, ಶಿಕ್ಷಕರ ದಿನಾಚರಣೆ ಮತ್ತು ಸಾಹಿತ್ಯ ಸೌರಭ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದಿನಾಂಕ 13 ಸೆಪ್ಟೆಂಬರ್ 2022ರ ಮಂಗಳವಾರದಂದು ಯುವವಾಹಿನಿ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಂಗ ಕಲಾವಿದ ಅರವಿಂದ ಬೋಳಾರ್ ರವರು ಮಾತನಾಡುತ್ತಾ ತಂದೆ ತಾಯಿಗಳಿಗೆ ಸಮಾನ ಸ್ಥಾನಮಾನವನ್ನು ನೀಡಬೇಕು ಹಾಗೂ ಮಕ್ಕಳಿಗೆ ತಂದೆ ತಾಯಿಗಳು ವಿದ್ಯೆಯ ಜೊತೆಗೆ ಜೀವನದ ಕಷ್ಟಗಳ ಪರಿಚಯಗಳನ್ನು ಮಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಬೆಳೆಸಬೇಕೆಂದರು. ಯುವವಾಹಿನಿಯು ಅತ್ಯುತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಇನ್ನು ಮುಂದೆಯೂ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಶುಭ ಹಾರೈಸಿದರು.ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಉದಯ ಮಟ್ಟು ರವರು ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಅಂಗವಾಗಿ ಗುರುಗಳ ವಿಚಾರದಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿವಿಧ ಶಾಲೆಗಳ 40 ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ, ಗುರುಗಳ ತತ್ವಾದರ್ಶದಂತೆ, ಗುರು ಜಯಂತಿ ಮತ್ತು ಶಿಕ್ಷಕರ ದಿನಾಚರಣೆ ಎಂಬ ಮೂರು ಅರ್ಥಪೂರ್ಣ ಕಾರ್ಯಕ್ರಮದೊಟ್ಟಿಗೆ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಸಂಘಟಿಸಿದ ಮಂಗಳೂರು ಘಟಕವನ್ನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ಗಣೇಶ್ ವಿ. ಕೋಡಿಕಲ್ ರವರು ಮಾತನಾಡುತ್ತಾ ಈ ಮೂರು ಕಾರ್ಯಕ್ರಮವು ಒಂದೇ ವೇದಿಕೆಯಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿ ಬರಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಶಾಲಾ ಕಾಲೇಜಿನ ಅಧ್ಯಾಪಕ ವೃಂದದವರಿಗೆ, ಭಾಗವಹಿಸಿದ ಮಕ್ಕಳಿಗೆ ಹಾಗೂ ಪದಾಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದರು. ಗುರು ಜಯಂತಿ ಪ್ರಯುಕ್ತ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಹೂ ಅಲಂಕಾರ ಮಾಡಿ ಭಜನಾ ಸಂಕೀರ್ತನೆ ಸಲ್ಲಿಸಿ, ಗುರು ಪೂಜೆಯನ್ನು ಮಾಡಿ, ಎಲ್ಲರಿಗೂ ಪ್ರಸಾದ ನೀಡಲಾಯಿತು. ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶಿಕ್ಷಕರ ದಿನಾಚರಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ವಿನೀತಾ ರೈ ರಿಜಿಸ್ಟರರ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಹಾಗೂ ನಾಟಕ ರಂಗಕರ್ಮಿ, ಖ್ಯಾತ ತುಳು ಚಲನಚಿತ್ರ ನಟ ಅರವಿಂದ ಬೋಳಾರ್ ಹಾಗೂ ಸುಮಾರು 14 ವರ್ಷಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದು, ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ವಿಜೇತರು ಹಾಗೂ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಹೊಂದಿರುವ ಗೋಪಾಲಕೃಷ್ಣ ಕುಂದರ್ ಬಜ್ಪೆ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜಿನ ಸುಮಾರು 33 ಶಿಕ್ಷಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದ ಸಂಚಾಲಕರಾದ ರೋಹಿತ್ ಎಂ. ರವರು ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಪ್ರಕಟಿಸಿದರು. ಕಾರ್ಯಕ್ರಮದ ಸಲಹೆಗಾರರು ಹಾಗೂ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಸಾಧು ಪೂಜಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಯೋಗೀಶ್ ಕುಮಾರ್ ಹಾಗೂ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಭೋಜ ಪೂಜಾರಿ ಮತ್ತು ಶ್ರೀಕಾಂತ್ ಆಕಾಶ್ ಭವನರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕದ ಸದಸ್ಯರಾದ ಮಹೇಶ್ ಅಮೀನ್ ಬೊಳೂರುರವರು ಘಟಕದ ಶೈಕ್ಷಣಿಕ ದತ್ತು ಸ್ವೀಕಾರ ನಿಧಿಗೆ ರೂ. 10000.00 ದೇಣಿಗೆ ನೀಡಿದರು. ಘಟಕದ ಭಜನಾ ಸಂಚಾಲಕರಾದ ನಾಗೇಶ್ ಅಮೀನ್ ಪ್ರಾರ್ಥಿಸಿದರು. ಘಟಕದ ಉಪಾಧ್ಯಕ್ಷರಾದ ಗಣೇಶ್ ಸುವರ್ಣ ಸ್ವಾಗತಿಸಿ, ಘಟಕದ ಕಾರ್ಯದರ್ಶಿ ಅಶೋಕ್ ಅಂಚನ್ ವಂದಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ರಾಕೇಶ್ ಕುಮಾರ್ ಹಾಗೂ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ವಿದ್ಯಾರಾಕೇಶ್ ಕಾರ್ಯಕ್ರಮ ನಿರೂಪಿಸಿದರು.