ಮಂಗಳೂರು :- ನಾರಾಯಣ ಗುರುಗಳ ತತ್ವಾದರ್ಶಗಳ ಬೆಳಕಿನಡಿಯಲ್ಲಿ ಸಾಗುತ್ತಿರುವ ಯುವವಾಹಿನಿ ಸಂಸ್ಥೆಯ ಯುವಕರು ಸಮಾಜದ ಆಶಕ್ತರಿಗೆ, ಅಸಾಯಕರಿಗೆ ನೆರವಾಗುವುದರೊಂದಿಗೆ ಸಮಾಜಮುಖಿ ಕಾರ್ಯಗಳಿಂದಾಗಿ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಎಚ್ ಎಸ್ ಸಾಯಿರಾಂ ತಿಳಿಸಿದರು. ಅವರು ಶ್ರೀ ಗೋಕರ್ಣನಾಥ ಸಭಾಂಗಣದ ದಿ|| ಪ್ರವೀಣ್ ನೆಟ್ಟಾರು ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಮಹಿಳಾ ಘಟಕದ ವತಿಯಿಂದ ನಡೆದ ಕುಣಿದು ಭಜಿಸಿರೋ ಯುವವಾಹಿನಿ ಅಂತರ್ ಘಟಕ ಕುಣಿತ ಭಜನಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕ್ಷೇತ್ರದ ನಾರಾಯಣ ಗುರು ಸ್ವಾಮಿಗೆ ಗುರು ಪೂಜೆ ಸಲ್ಲಿಸಿ ಸಭಾಭವನದ ವೇದಿಕೆಯಲ್ಲಿ ಗುರುಗಳ ಭಾವಚಿತ್ರದ ಎದುರು ದೀಪವನ್ನು ಹಚ್ಚಲಾಯಿತು. ನಂತರ ಮಹಿಳಾ ಘಟಕದ ಸದಸ್ಯರಿಂದ ಕುಣಿತ ಭಜನಾ ಕಾರ್ಯಕ್ರಮವನ್ನು ನಡೆಸಿ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 17 ಘಟಕಗಳು ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಎಲ್ಲಾ ತಂಡಗಳು ಬಹಳ ಶಿಸ್ತಿನಿಂದ ಭಕ್ತಿಯಿಂದ ಕುಣಿದು ಭಜಿಸಿದರು. ಸಂಜೆ ನಡೆದ ಸಮರೋಪ ಸಮಾರಂಭದಲ್ಲಿ ಶಿವಗಿರಿ ಕ್ಷೇತ್ರದ ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿ ಆಗಮಿಸಿ ಆಶೀ೯ವಚನ ನೀಡಿದರು.
ಸಭಾ ಅಧ್ಯಕತೆಯನ್ನು ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ, ಉವ೯ ಅಶೋಕನಗರದ ಬಿಲ್ಲವ ಸಂಘದ ಅಧ್ಯಕ್ಷರಾದ ಬಿ .ಜಿ. ಸುವರ್ಣ, ಮಂಗಳೂರು ಕೋ ಆಪರೇಟಿವ್ ಬಿಲ್ಡಿಂಗ್ ಸೊಸೈಟಿಯ ಅಧ್ಯಕ್ಷರಾದ ರಂಜನ್ ಮಿಜಾರ್, ನವನಿಧಿ ವಿವಿದ್ದೋದೇಶ ಸಂಘದ ನಿರ್ದೇಶಕರು ಹಾಗೂ ರೋಟರಿ ಕ್ಲಬ್ ಮಂಗಳೂರು ಸೌತ್ ನ ಮಾಜಿ ಕಾರ್ಯದಶಿ೯ ಪ್ರಮೋದ ಬೋಳಾರ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಮತ್ತು ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನದ ನಿರ್ದೇಶಕರಾದ ಬಾಬು ಪೂಜಾರಿ, ಕೇಂದ್ರ ಸಮಿತಿ ಸಂಘಟನಾ ಕಾರ್ಯದಶಿ೯ ಭವಾನಿ ಗಣೇಶ್ , ಮಹಿಳಾ ಘಟಕದ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ಹಾಗೂ ಸಂಚಾಲಕರಾದ ಲೋಲಾಕ್ಷಿ. ವಿ. ಕೋಟ್ಯಾನ್,ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಮಹಿಳಾ ಘಟಕದ ಅಧ್ಯಕ್ಷರಾದ ಸುನೀತಾ ಗೋಪಾಲಕೃಷ್ಣ,ಮಹಿಳಾ ಘಟಕದ ಕಾರ್ಯದಶಿ೯ ಚಿತ್ರಾಶ್ರೀ ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ಸತೀಶ್ ಕುಮಾರ್ ಕಡೆಂಜಿ ಮತ್ತು ಪ್ರಮೋದ ಬೋಳಾರ್ ಯುವವಾಹಿನಿಯ ಕೆಲಸ ಕಾರ್ಯಗಳನ್ನು ಮೆಚ್ಚಿ ಶುಭ ಹಾರೈಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರು ಮಾತನಾಡಿ ಶುಭ ಹಾರೈಸಿದರು.ಭಜನಾ ಸ್ಪಧೆ೯ಯ ತೀಪು೯ಗಾರರಲ್ಲಿ ಒಬ್ಬರಾದ ರಮೇಶ್ ಕಲ್ಮಾಡಿಯವರು ತಮ್ಮ ಅನಿಸಿಕೆ, ಭಜಕರಿಗೆ ಕಿವಿ ಮಾತನ್ನು ತಿಳಿಸಿದರು. ಅದೃಷ್ಟ ಚೀಟಿಯ ಡ್ರಾ ಎಲ್ಲಾ ಗಣ್ಯರ ಸಮಕ್ಷಮದಲ್ಲಿ ನಡೆಸಲಾಯಿತು .ಅದೃಷ್ಟವಂತರಿಗೆ ಬಹುಮಾನ ನೀಡಲಾಯಿತು. ಕೇಂದ್ರ ಸಮಿತಿಯ ಒಂದನೇ ಉಪಾಧ್ಯಕ್ಷರಾದ ರಾಜೇಶ್ ಇವರು ಭಜನಾ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿದರು. ಪ್ರಥಮ ಬಹುಮಾನ ಬೆಳ್ತಂಗಡಿ ಘಟಕ, ದ್ವಿತೀಯ ಬಹುಮಾನ ಅಡ್ವೆಘಟಕ, ತೃತೀಯ ಬಹುಮಾನ ಮೂಡಬಿದ್ರೆ ಘಟಕಕ್ಕೆ ದೊರಕಿತು.ವಿಜೇತ ತಂಡಗಳು ಹಷ೯ವ್ಯಕ್ತ ಪಡಿಸಿದರು. ಕೇಂದ್ರ ಸಮಿತಿಯ ನಿರ್ದೇಶಕರಾದ ಬಾಬು ಪೂಜಾರಿಯವರು ಸ್ವಾಗತಿಸಿ, ಘಟಕದ ಅಧ್ಯಕ್ಷೆ ಸುನೀತಾ ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಘಟಕದ ಕಾರ್ಯದರ್ಶಿ ಚಿತ್ರಾಶ್ರೀ ಮನೋಜ್ ಧನ್ಯವಾದವಿತ್ತರು. ಮಹಿಳಾ ಘಟಕದ ಸದಸ್ಯರಾದ ರವಿಕಲ ಮತ್ತು ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ವಿದ್ಯಾರಾಕೇಶ್ ಕಾರ್ಯಕ್ರಮ ನಿರೂಪಿಸಿದರು.