ಕಂಕನಾಡಿ :- ಯುವಕರು ವಿದ್ಯಾವಂತರಾಗಿ, ಪ್ರತಿಭಾವಂತರಾಗಿ, ಸ್ವಾವಲಂಬಿಗಳಾಗಿ ಧನಾತ್ಮಕವಾಗಿ ಚಿಂತನೆಗಳನ್ನು ಮಾಡುತ್ತಾ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದೆ ಬಂದು ಸಾಧನೆ ಮಾಡುವಂತಾಗಬೇಕೆಂದು ಎಂದು ಉದ್ಯಮಿ ಹಾಗೂ ಸಮಾಜ ಸೇವಕರೂ ಆಗಿರುವ ಸಂತೋಷ್ ಕಾಮತ್ ರವರು ಯುವಕರಿಗೆ ಕರೆ ನೀಡಿದರು. ಅವರು ದಿನಾಂಕ 4 ಸೆಪ್ಟಂಬರ್ 2022ದಂದು ಕಂಕನಾಡಿ ಗರೋಡಿ ಬಳಿಯ ಸಮೃದ್ಧಿ ಭವನದಲ್ಲಿ ಜರಗಿದ ಯುವವಾಹಿನಿ ಕಂಕನಾಡಿ ಘಟಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಆತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ನಯನ ಸುರೇಶ್ ವಹಿಸಿ ,ತನ್ನ ಅವಧಿಯಲ್ಲಿ ಸಹಕಾರ ನೀಡಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಉಜ್ಜೋಡಿ ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ಸೇವಾ ಸಮಿತಿಯ ಅಧ್ಯಕ್ಷರಾದ ಉಮಾನಾಥ ಕೋಟ್ಯಾನ್ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು ಹಾಗೂ ಯುವವಾಹಿನಿ ಸಂಸ್ಥೆಗೆ ಸರ್ಕಾರದಿಂದ ಸ್ವಂತ ನಿವೇಶನ ದೊರೆತಿರುವುದಕ್ಕೆ ಅಭಿನಂದಿಸಿದರು. ಘಟಕದ ಚುನಾವಣಾಧಿಕಾರಿ, ನಿಕಟ ಪೂರ್ವ ಅಧ್ಯಕ್ಷರಾದ ಸುಮಾ ವಸಂತ್ ರವರು 2022 – 23ನೇ ಸಾಲಿನ ನೂತನ ಪದಾಧಿಕಾರಿಗಳ ತಂಡವನ್ನು ವೇದಿಕೆಗೆ ಆಹ್ವಾನಿಸಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರು ಉದಯ ಅಮೀನ್ ಮಟ್ಟು ನೂತನ ಸಾಲಿನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ ಅಭಿನಂದಿಸಿದರು ಹಾಗೂ ಯುವವಾಹಿನಿ ಕಂಕನಾಡಿ ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿ ಯುವವಾಹಿನಿಯಿಂದ ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ನೂತನ ಅಧ್ಯಕ್ಷರಾದ ಪೃಥ್ವಿರಾಜ್ ರವರು ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರಲು ಎಲ್ಲರ ಸಹಕಾರ ಕೋರಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರವಿ ಕೊಂಡಾಣರವರು ಶುಭ ಹಾರೈಸುತ್ತಾ ಯುವವಾಹಿನಿ ನಮಗೇನು ಕೊಟ್ಟಿದೆ ಎಂದು ಆಲೋಚಿಸದೆ ನಾವು ಯುವವಾಹಿನಿಗೆ ಏನು ಕೊಟ್ಟಿದ್ದೇವೆ ಎಂದು ಆಲೋಚಿಸಿ ಉತ್ತಮ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರಬೇಕು ಎಂದು ನುಡಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳ ತಂಡಕ್ಕೆ ಶುಭ ಹಾರೈಸಿದರು. ಘಟಕದ ಸದಸ್ಯೆ ಪ್ರೇಮಾ ಪ್ರಾರ್ಥಿಸಿ, ಅಧ್ಯಕ್ಷರಾದ ನಯನ ಸುರೇಶ್ ಸ್ವಾಗತಿಸಿ, ಘಟಕದ ಮಾಜಿ ಅಧ್ಯಕ್ಷರಾದ ಗೋಪಾಲ್.ಎಂ.ಪೂಜಾರಿಯವರು ಪ್ರಸ್ತಾವಿಸಿದರು. ಕಾರ್ಯದರ್ಶಿ ಲೋಕೇಶ್ ಅಮೀನ್ ವಾರ್ಷಿಕ ವರದಿ ನೀಡಿದರು. ನೂತನ ಕಾರ್ಯದರ್ಶಿ ಸುರೇಖಾ ಮೋಹನ್ ವಂದಿಸಿದರು. ಘಟಕದ ಸದಸ್ಯರಾದ ದೀಕ್ಷಿತ್ ಹಾಗೂ ತೃಪ್ತಿ ಕಾರ್ಯಕ್ರಮ .