ಮಂಗಳೂರು :- ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಸೋಣ ಸಂಭ್ರಮ ಕಾರ್ಯಕ್ರಮವು ದಿನಾಂಕ 03 ಸೆಪ್ಟೆಂಬರ್ 2022 ಶನಿವಾರದಂದು ಯುವವಾಹಿನಿ ಸಭಾಂಗಣ ಉರ್ವಾಸ್ಟೋರ್ ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷರಾದ ಸುನೀತಾ ಗೋಪಾಲ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತ ಲ್ ಸಾರ್ ನಡೆಸಿದರು. ನಂತರ ಮಾತನಾಡಿದ ಕತ್ತಲ್ ಸಾರ್ ಸೋಣ ತಿಂಗಳು ತುಳುವರ ಭಕ್ತಿ ಪ್ರಧಾನವಾದ ತಿಂಗಳು , ಹಬ್ಬ ಹರಿದಿನಗಳ ಸಂಭ್ರಮದ ತಿಂಗಳು, ತುಳುವ ಸಂಸ್ಕೃತಿಯನ್ನು ಅಚರಿಸಿದ ಮಹಿಳಾ ಘಟಕಕ್ಕೆ ಅಭಿನಂದನೆಯನ್ನು ತಿಳಿಸಿದರು. ಘಟಕವು ತುಳು ಲಿಪಿ ಕಾರ್ಯಕ್ರಮನ್ನು ನಡೆಸುತ್ತಿದ್ದು ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಸರಕಾರದ ಮುದ್ರೆ ಇರುವ ಪ್ರಮಾಣ ಪತ್ರವನ್ನು ವಿತರಿಸಿದರು.
ಅತಿಥಿಗಳಾಗಿ S.N.D.P ಬಿಲ್ಲವ ಮಹಿಳಾ ಸಂಘ ಕೋಡಿಕಲ್ ಇದರ ಅಧ್ಯಕ್ಷರಾದ ಆಶಾ ವಿಶ್ವನಾಥ್ ಹಾಗೂ ಯುವವಾಹಿನಿ (ರಿ.) ಕೇಂದ್ರ ಸಮಿತಿ ಇದರ ಮಹಿಳಾ ನಿರ್ದೇಶಕರಾದ ಸುಮಾ ವಸಂತ್ ಇವರುಗಳು ಸೊಣ ಸಂಭ್ರಮದ ಬಗ್ಗೆ ಮಾತನಾಡಿದರು. ನಂತರ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆಯ ಪ್ರಯುಕ್ತ ನಡೆಸಿದ ನಾರಾಯಣ ಗುರುಗಳ ಭಾವಚಿತ್ರಕ್ಕೆ ಬಣ್ಣ ಹಚ್ಚುವುದು, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಘಟಕದ ಸದಸ್ಯರಿಗೆ ಬಂದ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ಅಲ್ಲದೆ ತುಳು ಲಿಪಿ ಕಲಿಸಿದ ಅಕ್ಷಯ ಪೇಜಾವರ ಹಾಗೂ ಗೇನ ಸಿರಿ ಎಂಬ ಲಿಪ್ಯಾಂತರ ತಂತ್ರಾಂಶ ವನ್ನು ಉಂಟು ಮಾಡಿದ ಜ್ಞಾನೇಶ್ ಇವರನ್ನು ಸನ್ಮಾನಿಸಲಾಯಿತು. ನಂತರ ಘಟಕದ ಸದಸ್ಯರಿಂದ ಸಂಗೀತ ಕಾರ್ಯಕ್ರಮವನ್ನು ನಡೆಸಲಾಯಿತು. ಅಧ್ಯಕ್ಷರು ಅತಿಥಿಗಳಿಗೆ ಹೂ ಹಾಗೂ ಶಾಲ್ ಹಾಕಿ ಗೌರವಿಸಿದರು. ನಂತರ ಉಪಾಧ್ಯಕ್ಷ ರಾದ ಸರಸ್ವತಿ ಎಸ್ ಕೆ ಇವರು ಧನ್ಯವಾದ ಮಾಡಿದರು. ಘಟಕದ ಹೆಚ್ಚಿನ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.