ಉಪ್ಪಿನಂಗಡಿ:- ಘಟಕವು 25 ಸಂವತ್ಸರಗಳನ್ನು ಪೂರೈಸಿದ ಸವಿನೆನಪಿಗಾಗಿ ಘಟಕವನ್ನು ಮುನ್ನಡೆಸಿದ ಮಾಜಿ ಅಧ್ಯಕ್ಷರ ಮನೆ ಭೇಟಿಯ ಭಾಗವಾಗಿ ಭಜನೆ ಮತ್ತು ಗುರುಸ್ಮರಣೆ ಕಾರ್ಯಕ್ರಮ ದಿನಾಂಕ 27 ಆಗಸ್ಟ್ 2022ರ ಶನಿವಾರದಂದು ಘಟಕದಲ್ಲಿ 1999- 2000ರ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಜಯಾನಂದ ಎಂ ಮಂಗಳೂರು ಇವರ ಮನೆಯಲ್ಲಿ ನಡೆಯಿತು. ಭಜನಾ ಕಾರ್ಯಕ್ರಮ ಮುಗಿದ ನಂತರ ಗುರು ಸ್ಮರಣೆ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಘಟಕವನ್ನು ತಮ್ಮ ಅಧ್ಯಕ್ಷಾವಧಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಜಯಾನಂದ್ ಎಂ ಹಾಗೂ ಸುಹಾನ್ ಸುಂದರ್ ದಂಪತಿಗಳನ್ನು ಹಾಗೂ ಸುಹಾನ್ ಇವರ ಮಾತಾಪಿತಾರಾದ ಸುಂದರ್ ದಂಪತಿಗಳ ಜೊತೆಗೆ ಶಾಲು ಹೊದಿಸಿ ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು. ಘಟಕದ ಅಧ್ಯಕ್ಷರಾದ ಕುಶಾಲಪ್ಪ ಹತ್ತು ಕಲಸೆ, ಉಪಾಧ್ಯಕ್ಷರಾದ ಮನೋಹರ್ ಗುಣಕರ ಆಗ್ನಾಡಿ ,ಮನೋಜ್ ಸಾಲಿಯಾನ್, ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಕುಂದರ್ , ಅಶೋಕ್ ಕುಮಾರ್ ಪಡ್ಪು, ಜಯವಿಕ್ರಂ ಕಲ್ಲಾಪು, ಆಶಿತ್ ಎಂ ವಿ, ಕಾರ್ಯದರ್ಶಿ ಉದಯ್ ಪೂಜಾರಿ, ಹಿರಿಯರಾದ ಬೊಮ್ಮಯ್ಯ ಬಂಗೇರ, ಪದಾಧಿಕಾರಿಗಳಾದ ಮಾಧವ್ ಬಿ.ಕೆ, ಮನೋಹರ್ ಕರುವೇಲ್,ರಕ್ಷಾ ಎಚ್ ಎಸ್ ಸದಸ್ಯರಾದ ಕು. ವರ್ಷ, ಕುಮಾರಿ ಮೇಷ, ಕು. ಶ್ರೀಲಕ್ಷ್ಮಿ, ಮಾಸ್ಟರ್ ದ್ರುವ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಕುಶಾಲಪ್ಪ ಹತ್ತುಕಳಸೆ ಸ್ವಾಗತಿಸಿ, ಉಪಾಧ್ಯಕ್ಷರಾದ ಮನೋಜ್ ಸಾಲ್ಯಾನ್ ಧನ್ಯವಾದ ಸಮರ್ಪಿಸಿದರು.
ಅಶೋಕ್ ಕುಮಾರ್ ಪಡ್ಪು ಕಾರ್ಯಕ್ರಮ ನಿರೂಪಿಸಿದರು.
ಇದೊಂದು ವಿಶಿಷ್ಠ ಕಾರ್ಯಕ್ರಮ. ಸಂಪರ್ಕದ ಕೊಂಡಿ ಬೆಸೆಯುವ, ಪರಿಶ್ರಮ, ತ್ಯಾಗಕ್ಕೆ ಸೂಕ್ತ ಮನ್ನಣೆ ನೀಡುವ ಹೃದಯ ಸ್ಪರ್ಶಿ ಕಾರ್ಯಕ್ರಮ. ಈ ಮಾದರಿ ಮುಂದುವರಿಯಲಿ.