ಕಡಬ :- ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕಡಬ ಘಟಕ ಇದರ ಆತಿಥ್ಯದಲ್ಲಿ ಕಡಬ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಹಾಗೂ ಕೋಟಿ-ಚೆನ್ನಯ್ಯ ಮಿತ್ರವೃಂದ ಆಲಂಕಾರು ಇದರ ಸಹಕಾರದೊಂದಿಗೆ ದಿನಾಂಕ 28 ಆಗಸ್ಟ್ 2022ನೇ ಆದಿತ್ಯವಾರ ಆಲಂಕಾರಿನ ಮಾಯಿಲ್ಗ ಶ್ರೀ ರಕ್ತೇಶ್ವರಿ ದೈವಸ್ಥಾನದ ಬಳಿ “ಬಿರುವೆರ್ನ ಕೆಸರ್ದ ಕಲ” ಕೆಸರು ಗದ್ದೆ ಕ್ರೀಡಾ ಕೂಟ ನಡೆಯಿತು. ಕಾರ್ಯಕ್ರಮವನ್ನು ತಾಯಿ ರಕ್ತೇಶ್ವರಿ ಯ ದೈವಸ್ಥಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ , ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕೆಸರ್ದ ಕಲ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು. ಕ್ರೀಡಾ ಕೂಟದ ಉದ್ಘಾಟನೆಯನ್ನು ಅಕ್ಷಯ ಕಾಲೇಜ್ ಪುತ್ತೂರು ಇದರ ಅಧ್ಯಕ್ಷರಾದ ಜಯಂತ ನಡುಬೈಲ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಅವನತಿಯತ್ತ ಸಾಗುತ್ತಿರುವ ತುಳುನಾಡಿನ ಕ್ರೀಡೆಯನ್ನು ಯುವ ಜನತೆಗೆ ಪರಿಚಯಿಸುವ ಮಹತ್ತರ ಕಾರ್ಯ ಶ್ಲಾಘನೀಯವಾದುದು , ಈ ನಿಟ್ಟಿನಲ್ಲಿ ಯುವ ಸಮುದಾಯ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕಾಪಿನಡ್ಕ ಕಾರ್ಯಕ್ರಮಕ್ಕೆ ಶುಭ ನುಡಿದರು, ಹಾಗೂ ಸೇರಿರುವ ಎಲ್ಲ ಜನಸ್ತೋಮವನ್ನು ಕಾಮಿಡಿಯ ಮೂಲಕ ನಗೆಯ ಕಡಲಲ್ಲಿ ತೇಲಾಡಿಸಿದರು. ಉದ್ಯಮಿ ಡಾ.ರವಿ ಕಕ್ಕೆಪದವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಬಿರುವೆರ್ನ ಕೆಸರ್ದ ಕಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಪ್ರವೀಣ್ ಓಂಕಾಲ್ ವಹಿಸಿದ್ದರು. ಸಭೆಯಲ್ಲಿ ಕೋಟಿ-ಚೆನ್ನಯ ಮಿತ್ರವೃಂದ ಆಲಂಕಾರು ಇದರ ಅಧ್ಯಕ್ಷರಾದ ಜಯಂತ ನೆಕ್ಕಿಲಾಡಿ , ಯುವವಾಹಿನಿ (ರಿ.) ಕಡಬ ಘಟಕದ ಗೌರವ ಸಲಹೆಗಾರರಾದ ಲಿಂಗಪ್ಪ ಪೂಜಾರಿ ಕೇಪುಳು ಹೊಸಮನೆ, ಬಿಲ್ಲವ ಗ್ರಾಮ ಸಮಿತಿ ಇದರ ಕಡಬ ವಲಯ ಸಂಚಾಲಕ ಜಯಪ್ರಕಾಶ್ ದೋಳ ಬಿಲ್ಲವ ಗ್ರಾಮ ಸಮಿತಿ ಕಡಬ ಇದರ ಉಪಾಧ್ಯಕ್ಷರಾದ ಸುಂದರ ಪೂಜಾರಿ ಅಂಗಣ, ಘಟಕದ ಮಹಿಳಾ ನಿರ್ದೇಶಕಿ ಅನಿತಾ ಕುತ್ಯಾಡಿ, ಜೊತೆ ಕಾರ್ಯದರ್ಶಿ ಸರಿತಾ ಉಂಡಿಲ ಉಪಸ್ಥಿತರಿದ್ದರು. ತೃಶ್ವಿ ಪಾಲಪ್ಪೆ ಪ್ರಾರ್ಥಿಸಿದರು, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸರಿತಾ ಉಂಡಿಲ ವಂದಿಸಿ, ಸುಪ್ರೀತ ಚರಣ್ ಪಾಲಪ್ಪೆ ನಿರೂಪಿಸಿದರು. ಆಟೋಟ ಸ್ಪರ್ಧೆಗಳ ತೀರ್ಪುಗಾರರಾಗಿ ರಾಜೇಶ್ ದೋಳ, ಅಶೋಕ್ ಕೊಯಿಲ ಉಪಸ್ಥಿತರಿದ್ದು ಯಶಸ್ವಿಯಾಗಿ ನಿರ್ವಹಿಸಿದರು. ಒಟ್ಟು 12 ಪುರುಷರ ಹಗ್ಗ ಜಗ್ಗಾಟದ ತಂಡಗಳು,9 ಮಹಿಳೆಯರ ಹಗ್ಗಜಗ್ಗಾಟದ ತಂಡಗಳು,7 ತಂಡ ಮಹಿಳೆಯರ 4×100 ರಿಲೇ, 9 ತಂಡ ಪುರುಷರ4×100 ರಿಲೇಯ ಆಟೋಟಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಬಾಲ್ದಿಗೆ ಚೆಂಡು ಹಾಕುವುದು, 50 ಮೀಟರ್ ಓಟ , 100 ಮೀಟರ್ ಓಟ, ಹಾಳೆ ಎಳೆಯುವುದು, ಮೂರು ಕಾಲಿನ ಓಟ ಹಾಗೂ ಪುರುಷ ಮತ್ತು ಮಹಿಳೆಯರಿಗೆ ಮಡಕೆ ಹೊಡೆಯುವುದು, ಮೂರು ಕಾಲಿನ ಓಟ, ಸುರುಳಿ ಆಟ,100ಮೀಟರ್ ಓಟದ ಸ್ಪರ್ಧೆಗಳನ್ನು ನಡೆಸಲಾಗಿದೆ.
ಸಂಜೆ ನಡೆದ ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಪ್ರವೀಣ್ ಓಂಕಾಲ್ ವಹಿಸಿದ್ದರು. ಸಭೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲ, ವಸಂತ ಬದಿಬಾಗಿಲು, ಮೂರ್ತೆದಾರ ಸೇವಾ ಸಹಕಾರಿ ಸಂಘ (ನಿ.) ಆಲಂಕಾರು ಇದರ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯಲ್ಗ, ಸ್ಥಳ ದಾನಿ ಜನಾರ್ಧನ ಬಿ ಎಲ್ , ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಕಡಬ ಇದರ ಶಾಖಾಧಿಕಾರಿ ಪ್ರದೀಶ್ ನಡುವಲ್ ಉಪಸ್ಥಿತರಿದ್ದರು. ಬೆಳಿಗ್ಗೆಯಿಂದ ಸಂಜೆ ತನಕ ನಡೆದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು ಹಾಗೂ ಕೆಸರ್ದ ಕಲ ಕಾರ್ಯಕ್ರಮ ಯಶಸ್ವಿಗಾಗಿ ಶ್ರಮಿಸಿದ ಎಲ್ಲಾ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಿಥುನ್ ಸುಂದರ್ ಪಲ್ಲತ್ತಡ್ಕ ಸ್ವಾಗತಿಸಿ, ಕೃಷ್ಣಪ್ಪ ಅಮೈ ವಂದಿಸಿದರು. ಕಾರ್ಯಕ್ರಮದಲ್ಲಿ ಘಟಕದ ಹೆಚ್ಚಿನ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.