ಮಂಗಳೂರು :- ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿಯ ಅಂಗವಾಗಿ ಶಾಲಾ ಮಕ್ಕಳಿಗೆ ಮತ್ತು ಘಟಕದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಯುವವಾಹಿನಿ ಸಭಾಂಗಣದಲ್ಲಿ ಮಂಗಳೂರು ಘಟಕದ ವತಿಯಿಂದ ದಿನಾಂಕ 24 ಜುಲೈ 2022 ರಂದು ಭಾನುವಾರ ಶಾಲಾ ಕಾಲೇಜಿನ ಮಕ್ಕಳಿಗೆ ಮತ್ತು ಘಟಕದ ಸದಸ್ಯರಿಗೆ ನಾರಾಯಣಗುರುಗಳ ವಿಷಯದ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೇಂದ್ರ ಸಮಿತಿಯ ಸಾಹಿತ್ಯ ಸೌರಭದ ಅಂಗವಾಗಿ ಕಲೆ ಮತ್ತು ಸಾಹಿತ್ಯಕ್ಕೆ ಒತ್ತು ನೀಡಿ ಗುರು ತತ್ವ ಸಂದೇಶಗಳನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಘಟಕದ ಅಧ್ಯಕ್ಷರಾದ ಗಣೇಶ್ ವಿ ಕೋಡಿಕಲ್ ರವರು ಗುರುಗಳ ಭಾವಚಿತ್ರಕ್ಕೆ ಹೂಹಾರಹಾಕಿ, ದೀಪಬೆಳಗಿಸಿ, ಮಹಾಗಣಪತಿ ದೇವರ ಸ್ತೋತ್ರ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.
ವಿವಿಧ ಶಾಲೆಗಳಿಂದ ಆಗಮಿಸಿರುವ 5ರಿಂದ 7ನೇ ತರಗತಿಯ ಸುಮಾರು 132 ಮಕ್ಕಳು ಗುರುಗಳ ಚಿತ್ರಕ್ಕೆ ಬಣ್ಣ ಹಚ್ಚಿದರು. 8ರಿಂದ 10ನೇ ತರಗತಿಯ ಮಕ್ಕಳು ನಾರಾಯಣ ಗುರುಗಳ ಜೀವನ ಚರಿತ್ರೆ ಬಗ್ಗೆ ಪ್ರಬಂಧ ಬರೆದರು. ಪಿಯುಸಿ ವಿದ್ಯಾರ್ಥಿಗಳು ಪ್ರಸ್ತುತ ಸಮಾಜಕ್ಕೆ ನಾರಾಯಣ ಗುರುಗಳ ಸಂದೇಶ ಕುರಿತು ಭಾಷಣ ಮಾಡಿದರು ಹಾಗೂ ಘಟಕದ ಸದಸ್ಯರು ಸಮಾಜ ಸುಧಾರಣೆಯಲ್ಲಿ ಗುರು ಸಂದೇಶದ ಮಹತ್ವದ ಬಗ್ಗೆ ಪ್ರಬಂಧ ಬರೆದರು. ಒಟ್ಟಾಗಿ 215ಕ್ಕೂ ಅಧಿಕ ಸ್ಪರ್ಧಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಘಟಕದ ವತಿಯಿಂದ ಎಲ್ಲಾ ಸ್ಪರ್ಧಿಗಳಿಗೆ ಮತ್ತು ಮಕ್ಕಳ ಸಂಬಂಧಿಕರಿಗೆ ಪಲಾಹಾರ ಮತ್ತು ತಂಪು ಪಾನೀಯವನ್ನು ನೀಡಲಾಯಿತು. ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಎಲ್ಲಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧಿಗಳಿಗೆ ಗುರುಗಳ ಚಿತ್ರ, ಕಲರ್ ಬಾಕ್ಸ್, ಪೆನ್ನು, ಪೇಪರನ್ನು ಘಟಕದ ವತಿಯಿಂದ ನೀಡಲಾಗಿತ್ತು. ಪ್ರತಿ ಸ್ಪರ್ಧೆಯಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಾಧಾನಕರ ಬಹುಮಾನಗಳನ್ನು ಘೋಷಿಸಲಾಗಿತ್ತು. ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ಮತ್ತು ಸಿಹಿತಿಂಡಿ ನೀಡಿ ಸತ್ಕರಿಸಲಾಯಿತು. ನಾರಾಯಣಗುರು ಜಯಂತಿಯಂದು ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್, ಕಾರ್ಯದರ್ಶಿ ಅಶೋಕ್ ಅಂಚನ್, ಸಂಚಾಲಕರಾದ ಶ್ರೀಕಾಂತ್ ಆಕಾಶಭವನ, ರೋಹಿತ್ ಎಮ್, ಸಲಹೆಗಾರರಾದ ಸಾಧು ಪೂಜಾರಿಯವರು, ಮಾಜಿ ಅಧ್ಯಕ್ಷರು, ಗೌರವ ಸದಸ್ಯರು ಹಾಗೂ ಸದಸ್ಯರು ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಲು ಸಹಕರಿಸಿದರು.
ಬಹಳ ಮಹತ್ವಪೂರ್ಣವಾದ ಕಾರ್ಯಕ್ರಮ.
ಮಕ್ಕಳಲ್ಲಿ, ಯುವಜನರಲ್ಲಿ ಹಾಗೂ ಸಾರ್ವಜನಿಕರಲ್ಲಿ ಗುರುಗಳ ಬಗ್ಗೆ ಅರಿವು ಮೂಡಿಸಲು ಇದು ಸಹಕಾರಿಯಾಯಿತು.
ಉತ್ತಮ ಪರಿಕಲ್ಪನೆ.
ಅಭಿನಂದನೆಗಳು ಇದನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ