ಸುರತ್ಕಲ್ :- ದಿನಾಂಕ 08 ಜುಲೈ 2022 ರಂದು ಘಟಕದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ನಮ್ಮ ಘಟಕದ ಸದಸ್ಯೆಯಾದ ಗಾಯತ್ರಿ ಸತೀಶ್ ರವರು ಪರಿಸರ ಉಳಿಸಿ ಗಿಡ ಬೆಳೆಸಿ ಎಂಬುದರ ಮೂಲಕ ಪರಿಸರ ದಿನಾಚರಣೆಯ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ಹಾಜರಿದ್ದ ಮಾಜಿ ಅಧ್ಯಕ್ಷರಾದ ಶ್ರೀ ಯೋಗೀಶ್ ಸನಿಲ್ ರವರು ಸದಸ್ಯರೆಲ್ಲರಿಗೂ ಗಿಡಗಳನ್ನು ವಿತರಿಸಿ ಇನ್ನು ಮುಂದೆಯೂ ಇಂತಹ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ನಡೆಸುವಂತೆ ಅಧ್ಯಕ್ಷರನ್ನು ವಿನಂತಿಸಿದರು. ತಾರೀಕು 05.06.2022 ರಂದು ಯುವವಾಹಿನಿ ಪಣಂಬೂರು ಕುಳಾಯಿ ಘಟಕದವರು ಆಯೋಜಿಸಿದ್ದ ಭಜನಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ ತಂಡಕ್ಕೆ ಹಾಗೂ ಉತ್ತಮ ತಬಲಾ ವಾದಕರಾಗಿ ಪ್ರಶಸ್ತಿ ಪಡೆದ ನಮ್ಮ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ವಿಜಯ. ಸ್. ಕುಕ್ಯಾನ್ ರವರಿಗೆ ಎಲ್ಲರೂ ಶುಭ ಹಾರೈಸಿದರು.ಘಟಕದ ಅಧ್ಯಕ್ಷರಾದ ವಿವೇಕ್ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.