ಬಂಟ್ವಾಳ : ದಿನಾಂಕ 10.07.2022 ರಂದು ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ನಡೆದ ಯುವವಾಹಿನಿ ಬಂಟ್ವಾಳ ಘಟಕದ ಪದಗ್ರಹಣ ಸಮಾರಂಭದಲ್ಲಿ ಕೆ.ಸೇಸಪ್ಪ ಕೋಟ್ಯಾನ್ ದಂಪತಿಗಳನ್ನು ಅಭಿನಂದಿಸಲಾಯಿತು. ಸಾರ್ಥಕ ಐವತ್ತು ವರುಷಗಳ ಶುಭಯಾನದ ಸವಿನೆನಪಿನ ಸಲುವಾಗಿ ಕೆ.ಸೇಸಪ್ಪ ಕೋಟ್ಯಾನ್, ಚಂದ್ರಾವತಿ ದಂಪತಿಗಳಿಗೆ ಯುವವಾಹಿನಿ ಬಂಟ್ವಾಳ ಘಟಕದ ಪರವಾಗಿ ಅಭಿಮಾನದ ಸಿಂಚನ ಸಮರ್ಪಿಸಲಾಯಿತು.
ದಿನಾಂಕ 10.07.2022 ರಂದು ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ನಡೆದ ಯುವವಾಹಿನಿ ಬಂಟ್ವಾಳ ಘಟಕದ ಪದಗ್ರಹಣ ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಸೂರ್ಯನಂತೆ ಜಗವ ಬೆಳಗದಿದ್ದರೂ ಹಣತೆಯಾಗಿ ಅಲ್ಪ ಕತ್ತಲೆ ಕಳೆದರೂ ಸಾಕೆನ್ನುತ್ತೇವೆ. ಆದರೆ ನಕ್ಷತ್ರದಂತೆ ಬೆಳಗಿ ಸಮಾಜದ ಕತ್ತಲೆ ನೀಗಿದ ಬಿಳಿ ಪಂಚೆ, ಬಿಳಿ ಅಂಗಿಯೊಳಗಿನ ಶುಭ್ರ ಸ್ವಚ್ಚ ಬಿಳಿ ಮನಸ್ಸಿನ ಸೇಸಪಣ್ಣ, ಉದ್ಯೋಗದಾತರಾಗಿ, ಸಮಾಜಸೇವಕನಾಗಿ, ಸಮುದಾಯದ ಶಕ್ತಿಯಾಗಿ, ಧಾರ್ಮಿಕ ಕ್ಷೇತ್ರದ ಭಯ ಭಕ್ತಿಯ ಸೇವಕನಾಗಿ , ಎಲ್ಲರೊಳೊಗೊಂದಾಗಿ ಬೆರೆವವರು ಬೆಸೆವವರು. ಸಾಧನೆ ಮೆರೆದು ಇತಿಹಾಸದ ಪುಟದಲ್ಲಿ ಅಜರಾಮರರಾದ ಅದೆಷ್ಟೋ ಸಾಧಕರು ನಮಗೆ ಪ್ರೇರಣೆಯಾಗುತ್ತಾರೆ. ಆದರೆ ತನ್ನ ಬದುಕಿನುದ್ದಕ್ಕೂ ತನ್ನದೇ ಆದ ಜೀವನ ಶೈಲಿ ಮೆರೆದು ಆದರ್ಶಪ್ರಾಯರಾದ ಸೇಸಪ್ಪ ಕೋಟ್ಯಾನರು ಮಾಡಿದ ಸಾಧನೆ, ನೀಡಿದ ಸೇವೆ, ನಡೆದ ಹಾದಿ ಹೇಳುತ್ತಾ ಸಾಗಿದರೆ ಅದೇ ಒಂದು ಮಹಾಗ್ರಂಥವಾದೀತು. ಬಗೆದಷ್ಟು ಮೊಗೆವ, ಮೊಗೆದಷ್ಟು ತೆಗೆವ, ಹೇಳಿದಷ್ಟು ಹೆಚ್ಚುವ, ಚಿಂತಿಸಿದಷ್ಟು ಹೊಳೆವ ಪದಗಳಿಗೆ ನಿಲುಕದ, ನಿಲುಕಿದರೂ ವರ್ಣಿಸಲಾಗದ ಅಪ್ಪಟ ಅಪರಂಜಿ ಸೇಸಪ್ಪಣ್ಣ. ಬಿಲ್ಲವ ಸಮಾಜದ ಮುಂದಾಳು, ಯುವವಾಹಿನಿಯ ಅಭಿಮಾನಿ, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿ ಅನನ್ಯ ಸೇವೆ ನೀಡಿದ ಸೇಸಪ್ಪ ಕೋಟ್ಯಾನ್ ಇವರ ಮುಂದಿನ ಬದುಕು ಆರೋಗ್ಯ ನೆಮ್ಮದಿಯಿಂದ ಕೂಡಿರಲಿ ಎಂಬ ಶುಭ ಹಾರೈಕೆಗಳೊಂದಿಗೆ
ಅಧ್ಯಕ್ಷರು ಮತ್ತು ಸದಸ್ಯರು
ಯುವವಾಹಿನಿ(ರಿ)
ಬಂಟ್ವಾಳ ತಾಲೂಕು ಘಟಕ