ಮಾಣಿ : ಕಾರ್ಯಾಗಾರದಲ್ಲಿ ಭಾಗವಹಿಸಿದ ಸದಸ್ಯರ ಉತ್ಸಾಹ, ಶಿಸ್ತು, ಯುವವಾಹಿನಿಯ ಸಂಸ್ಥೆಯ ಮೇಲಿನ ಅತೀವ ಪ್ರೀತಿ ಕಾರ್ಯಾಗಾರದ ಯಶಸ್ಸಿನ ಮೂಲ ಎಂದು ರಾಷ್ಟ್ರೀಯ ತರಬೇತುದಾರರಾದ ಸದಾನಂದ ನಾವಡ ತಿಳಿಸಿದರು.
ಅವರು ದಿನಾಂಕ 10.04.2022 ರಂದು ಯುವವಾಹಿನಿ ರಿ.ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ರಿ.ಮಾಣಿ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕರಿಗೆ ಮಾಣಿ ನಾರಾಯಣಗುರು ಸಭಾಭವನದಲ್ಲಿ ಜರುಗಿದ ಚೈತನ್ಯ-2022 ತರಬೇತಿ ಕಾರ್ಯಾಗಾರದ ಮುಖ್ಯ ತರಬೇತುದಾರರಾದ ಸದಾನಂದ ನಾವಡ ರವರು ನಾಯಕತ್ವ, ಸಂಘಟನೆಯ ಶಕ್ತಿ ವಿಷಯದ ಬಗ್ಗೆ ತರಬೇತಿ ನೀಡಿದರು .
ನಾಯಕತ್ವ ಗುಣಗಳನ್ನು ಮೈಗೂಡಿಸಿದಾಗ ಸಂಘಟನೆಯಲ್ಲಿ ಯಶಸ್ಸು ಸಾಧ್ಯ : ಸುಧಾಕರ್ ಕಾರ್ಕಳ
ಉತ್ತಮ ನಾಯಕರಾಗಲು ಕೆಲವೊಂದು ಗುಣಗಳನ್ನು ಮೈಗೂಡಿಸಿಕೊಂಡಾಗ ಸಂಘಟನೆಯನ್ನು ಯಶಸ್ವಿಯಾಗಿ ಮನ್ನಡೆಸಬಹುದು ಎಂದು ರಾಷ್ಟ್ರೀಯ ತರಬೇತುದಾರ ಹಾಗೂ ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕರಾದ, ಸುಧಾಕರ್ ಕಾರ್ಕಳರವರು ಸಂಘಟನೆಯ ಹೊಂದಾಣಿಕೆ,ಕಾರ್ಯಕ್ರಮ ನಿರ್ವಹಣೆ ಮತ್ತು ಪರಿಣಾಮಕಾರಿ ಭಾಷಣದ ಬಗ್ಗೆ ಸುಧಾಕರ್ ಕಾರ್ಕಳ ತಿಳಿಸಿದರು.
ಯುವವಾಹಿನಿ ನಾಯಕತ್ವ ರೂಪಿಸುವ ಹೆಬ್ಬಾಗಿಲು : ರಾಜೇಶ್ ಸುವರ್ಣ
ಯುವವಾಹಿನಿಯ ವೈಶಿಷ್ಠಪೂರ್ಣ ಉಪನಿಬಂಧನೆ ಹಾಗೂ ನಿಯಮಾವಳಿಗಳು ಸಂಘಟನೆ ಶಿಸ್ತು ಬದ್ದವಾಗಿ ಮುನ್ನಡೆಯಲು ಸಾಧ್ಯವಾಗಿದೆ. ಕ್ರೀಯಾಶಿಲ ಯೋಜನೆ ಹಾಗೂ ಯೋಚನೆಗಳ ಮೂಲಕ ಯುವಜನತೆಗೆ ಯುವವಾಹಿನಿ ನಾಯಕತ್ವ ರೂಪಿಸುವ ಹೆಬ್ಬಾಗಿಲು ಆಗಿದೆ ಎಂದು “ಯುವವಾಹಿನಿ ಮತ್ತು ನಾನು” ವಿಚಾರದ ಬಗ್ಗೆ ತರಬೇತುದಾರ ಹಾಗೂ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾದ ರಾಜೇಶ್ ಸುವರ್ಣ ರವರು ತಿಳಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ರಮೇಶ್ ಮುಜಲ, ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಜಯಂತ ಬರಿಮಾರು, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸಚಿನ್ ಎಂ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತರಬೇತಿ ಕಾರ್ಯಗಾರದ ತರಬೇತುದಾರರನ್ನು ಸನ್ಮಾನಿಸಲಾಯಿತು.ಯುವವಾಹಿನಿ ಕೇಂದ್ರ ಸಮಿತಿಯ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕರಾದ ಪ್ರಶಾಂತ್ ಮಾಣಿ ಸ್ವಾಗತಿಸಿದರು, ಮಾಣಿ ಘಟಕದ ಕಾರ್ಯದರ್ಶಿ ರೇಣುಕಾ ಕಣಿಯೂರು ವಂದಿಸಿದರು, ಕೋಶಾಧಿಕಾರಿ ರಾಜೇಶ್ ಬಲ್ಯ ಕಾರ್ಯಕ್ರಮ ನಿರೂಪಿಸಿದರು.