” ಕ್ರೀಡೆ ನಮ್ಮ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ಸಂಘಟನೆಯನ್ನು ಬಲಗೊಳಿಸುತ್ತವೆ. ಒಂದು ತಂಡವಾಗಿ ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಳ್ಳುವ ಸದಸ್ಯರ ನಡುವೆ ಪರಸ್ಪರ ಅರಿತುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಯುವವಾಹಿನಿ (ರಿ.) ಮಾಣಿ ಘಟಕವು ಈ ಪಂದ್ಯಾಟದ ಮೂಲಕ ವಿದ್ಯಾನಿಧಿ ಹಾಗೂ ಸ್ಪಂದನ ಯೋಜನೆಗಳನ್ನು ಸತತವಾಗಿ ಬಲವರ್ಧನೆಗೊಳಿಸುತ್ತಿರುವುದು ಶ್ಲಾಘನೀಯ ” ಎಂದು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ರವರು ನುಡಿದರು.
ಅವರು ದಿನಾಂಕ 20-03-2022 ರ ಆದಿತ್ಯವಾರದಂದು ಅನಂತಾಡಿ ಗ್ರಾಮದ ಬಂಟ್ರಿಂಜ ಕ್ರೀಡಾಂಗಣದಲ್ಲಿ ವಿಧ್ಯಾನಿಧಿ ಮತ್ತು ಸ್ಪಂದನ ಯೋಜನೆಯ ಬಲವರ್ಧನೆಗಾಗಿ ಯುವವಾಹಿನಿ ಮಾಣಿ ಘಟಕವು ಹಮ್ಮಿಕೊಂಡಿದ್ದ ಯುವವಾಹಿನಿ ಪ್ರೀಮಿಯರ್ ಲೀಗ್ -2022 ನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕರಾದ ನವೀನ್ ಪಚ್ಚೇರಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ರಿ. ಮಾಣಿ ಇದರ ಅಧ್ಯಕ್ಷರಾದ ಸುರೇಶ ಸೂರ್ಯ, ಸಲಹಾ ಸಮಿತಿ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್,ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಬಂಟ್ರಿಂಜ, ನೆಟ್ಲಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕೊಪ್ಪರಿಗೆ,ಕೆ.ಎಮ್.ಸಿ ಲಾಯಲ್ಟಿ ನೊಂದಾವಣೆ ಕಾರ್ಯಗಾರ ಅಧಿಕಾರಿಯಾದ ಮನಮೋಹನ್, ದೈವಸೇವಾಕರ್ತರಾದ ವಿಠಲ ಪೊಯ್ಯೆ ,ಘಟಕದ ಕ್ರೀಡಾ ನಿರ್ದೇಶಕರಾದ ಭರತ್ ಕೇವ,ಶ್ರೀ ರಾಮ್ ನೆಲ್ಡೊಟ್ಟುರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜಯಂತ ಪೂಜಾರಿ ಬರಿಮಾರು ವಹಿಸಿದ್ದರು.
ಈ ಸಂದರ್ಭದಲ್ಲಿ ಕ್ರಿಕೆಟ್ ಮತ್ತು ಹಗ್ಗಜಗ್ಗಾಟ ತಂಡಗಳ ಮಾಲಕರಾದ ಹರೀಶ್ ಪೂಜಾರಿ ಬಾಕಿಲ,ಗಣೇಶ ಕೋಡಾಜೆ, ಭರತ್ ಕೊರ್ಯ,ಪವನ್ ಕೇವ,ಸತ್ಯಪ್ರಕಾಶ್ ಪೆರಾಜೆ,ನಾಗೇಶ್ ಮಾಣಿ,ಪವಿತ್ರ ಹರಿಕೃಷ್ಣ,ಪುಷ್ಪ ನಾಗೇಶ್, ತೃಪ್ತಿ ಸಂತೋಷ ಇವರುಗಳನ್ನು ಅಭಿನಂದಿಸಲಾಯಿತು. ದಿನಕರ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು,ಕಾರ್ಯದರ್ಶಿ ರೇಣುಕಾ ಕಣಿಯೂರು ಸ್ವಾಗತಿಸಿದರು,ಜಯಶ್ರೀ ಬರಿಮಾರು ಪ್ರಾರ್ಥಿಸಿದರು.ಕೋಶಾಧಿಕಾರಿ ರಾಜೇಶ್ ಎಸ್ ಬಲ್ಯ ವಂದಿಸಿದರು. ನಂತರ ನಡೆದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಬ್ರಹ್ಮಶ್ರೀ ಕಿಂಗ್ಸ್ ಪ್ರಥಮ ಸ್ಥಾನವನ್ನು, ಬ್ರದರ್ಸ್ ಬಿರುವೆರ್ ಕೇವ ದ್ವಿತೀಯ ಸ್ಥಾನವನ್ನು, ಬೈದ್ಯಶ್ರೀ ಕಿಂಗ್ಸ್ ತೃತೀಯ ಸ್ಥಾನವನ್ನು ಹಾಗೂ ಬಿರುವೆರ್ ಮಾಣಿ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡವು.ಹಗ್ಗಜಗ್ಗಟ ಪಂದ್ಯಾಟದಲ್ಲಿ ಕ್ವೀನ್ಸ್ ಕಿನ್ನಿದಾರು ಪ್ರಥಮ ಸ್ಥಾನವನ್ನು ,ಟೀಮ್ ದೇಯಿ ಬೈದೆದಿ ದ್ವಿತೀಯ ಸ್ಥಾನವನ್ನು ಮತ್ತು ಮಯಾಂದಾಲ್ ಮೇಜರ್ಸ್ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡವು. ಕ್ರೀಡಾಕೂಟದ ನಡುವೆ ಕಿರಣ್ ಗೋಳಿಕಟ್ಟೆ, ಮಹಾಬಲ ಬಾಕಿಲ,ರಾಜೇಶ್ ಬಾಕಿಲ,ಕಿಶೋರ್ ಕಟ್ಟೆಮಾರ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭಹಾರೈಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ರಾಜೇಶ್ ಬಿ.ಸಿ ರೋಡ್, ಸಂಘಟನ ಕಾರ್ಯದರ್ಶಿಯಾದ ಶಿವಾನಂದ್ ಎಮ್,ಮಾಣಿ ಬಿಲ್ಲವ ಸಂಘದ ಉಪಾಧ್ಯಕ್ಷರಾದ ಸೋಮಪ್ಪ ಮಾದೇಲು, ವಾಲಿಬಾಲ್ ಅಸೋಸಿಯೇಷನ್ ಮಾಣಿ ವಲಯದ ಅಧ್ಯಕ್ಷರಾದ ಸಂಪತ್ ಕೋಟ್ಯಾನ್,ಬಂಟ್ವಾಳ ತಾಲೂಕಿನ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೀತಾ ಗೋಳಿಕಟ್ಟೆ, ಬಿಲ್ಲವ ಗ್ರಾಮ ಸಮಿತಿ ವೀರಕಂಭ ಇದರ ಅಧ್ಯಕ್ಷರಾದ ಜಯಪ್ರಕಾಶ್ ತೆಕ್ಕಿಪಾಪು, ಘಟಕದ ಅಧ್ಯಕ್ಷರಾದ ಜಯಂತ ಬರಿಮಾರು,ಘಟಕದ ಕ್ರೀಡಾ ನಿರ್ದೇಶಕರಾದ ಭರತ್ ಕೇವ, ಕ್ರೀಡಾಕೂಟದ ಸಂಚಾಲಕಿಯಾದ ಶಾಲಿನಿ ಜಗದೀಶ್ ರವರು ಭಾಗವಹಿಸಿದರು ಘಟಕದ ಉಪಾಧ್ಯಕ್ಷರಾದ ರವಿಚಂದ್ರ ಬಾಬಣಕಟ್ಟೆ, ಸದಸ್ಯರಾದ ಸುಜೀತ್ ಅಂಚನ್,ಕ್ರೀಡಾಕೂಟ ಸಂಚಾಲಕರಾದ ದೀಪಕ್ ಪೆರಾಜೆ ಸೇರಿದಂತೆ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು,ಸದಸ್ಯರು ವಿವಿಧ ಕಾರ್ಯಕ್ರಮಗಳ ಜವಾಬ್ದಾರಿಗಳನ್ನು ನಿರ್ವಹಿಸಿದರು.