ಸಮಾಜಮುಖಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆಯನ್ನು ಪಡೆದ ಯುವವಾಹಿನಿ ಬೇರೆ ಸಂಸ್ಥೆಗಳಿಗೆ ಕೈಗನ್ನಡಿಯಾಗಿದೆ, ಸಮಾಜದ ವಿವಿಧ ಅಯಾಮಗಳಲ್ಲಿ ನೊಂದವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಮುಂದೆ ಹೊಸ ತಂಡದೊಂದಿಗೆ ಇನ್ನಷ್ಟು ಕಾರ್ಯಗಳು ಮೂಡಿಬರಲಿ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮನಾಥ ಕೋಟ್ಯಾನ್ ತಿಳಿಸಿ ಶುಭ ಹಾರೈಸಿದರು.
ಅವರು ದಿನಾಂಕ 13.03.2022 ರಂದು ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ ಬಜ್ಪೆ ಘಟಕದ ನೂತನ ತಂಡದ ಪದಗ್ರಹಣ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಬಜ್ಪೆ ಇವರು ವಹಿಸಿ ವರದಿ ಸಾಲಿನಲ್ಲಿ ಸಹಕರಿಸಿದ ಸರ್ವರಿಗೂ ಕ್ರತಜ್ಙತೆಯನ್ನು ಸಮರ್ಪಿಸಿದರು.ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ನೂತನ ತಂಡಕ್ಕೆ ಪದಪ್ರದಾನ ಮಾಡಿ ಬಜಪೆ ಘಟಕದ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ನೂತನ ತಂಡಕ್ಕೆ ಶುಭ ಹಾರೈಸಿದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ ಧೀರಜ್ ನೀರು ಮಾರ್ಗ ತಮ್ಮ ಭಾಷಣದಲ್ಲಿ ಸಸಿಹಿತ್ಲು ಘಟಕದ ಸದಸ್ಯರಾಗಿರುವ ಸಮಯದಲ್ಲಿ ಯುವವಾಹಿನಿ ಸಂಸ್ಥೆಯ ಸದಸ್ಯನಾಗಿದ್ದ ಸಂದರ್ಭದ ಅನುಭವ ಹಂಚಿಕೊಂಡು ಯುವವಾಹಿನಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಸಾಗಲಿ ಎಂದು ತಿಳಿಸಿದರು. ವೇದಿಕೆಯಲ್ಲಿ ಜಯಂತ್ ಸಾಲ್ಯಾನ್ , ಶರತ್ ಸುವರ್ಣ , ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಯೋಗೀಶ್ ಪೂಜಾರಿ ಸಂಚಾಲಕರಾದ ಶ್ರೀ ಚಂದ್ರಶೇಖರ ಪೂಜಾರಿ, ಕಾರ್ಯದರ್ಶಿ ಉಷಾ ಸುವರ್ಣ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಉಷಾ ಸುವರ್ಣ ವಾರ್ಷಿಕ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರನ್ನು ಗೌರವಿಸಿ ಅಭಿನಂದಿಸಲಾಯಿತು. ಶ್ರೇಯ ಪ್ರಾರ್ಥಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಮಾಧವ ಸಾಲ್ಯಾನ್ ಯುವವಾಹಿನಿ ಕುರಿತು ಪ್ರಸ್ತಾವನೆಗೈದರು.ವಿನಯ್ ಹಾಗೂ ನಿರಂಜನ್ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ನಿಶಾಲ್ ಧನ್ಯವಾದಗೈದರು.