ಕೆಎಂಸಿ ಸಂಸ್ಥೆಯ ಅತ್ತಾವರ ಇವರ ಸಹಕಾರದೊಂದಿಗೆ ಯುವವಾಹಿನಿ(ರಿ.) ಶಕ್ತಿನಗರ ಘಟಕ, ಲಯನ್ಸ್ ಕ್ಲಬ್ ಮಂಗಳೂರು ಇವರ ಸಹಭಾಗಿತ್ವದೊಂದಿಗೆ ಬೃಹತ್ ರಕ್ತದಾನ ಶಿಬಿರ, ಆರೋಗ್ಯ ಶಿಬಿರವು ದಿನಾಂಕ 06-03- 2022ರಂದು ಕುವೆಂಪು ಮಾದರಿ ಸರಕಾರಿ ಶಾಲೆ ನಾಳ್ಯಪದವು ಶಕ್ತಿನಗರದಲ್ಲಿ ಜರುಗಿತು. ಯುವವಾಹಿನಿ( ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಶಕ್ತಿನಗರ ಯುವವಾಹಿನಿ ಘಟಕದ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಘಟಕದ ಅಧ್ಯಕ್ಷರಾದ ಜಯರಾಮ ಪೂಜಾರಿ ಬಾಳಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಕಿಶೋರ್ ಬಿಜೈ,ರವರು ಮಾತನಾಡಿ ಇನ್ನೊಬ್ಬರ ಜೀವ ಉಳಿಸುವ ಕಾರ್ಯ ಶ್ಲಾಘನೀಯವಾದದ್ದು, ಯುವವಾಹಿನಿ ಎಲ್ಲ ಕೆಲಸ ಕಾರ್ಯಗಳನ್ನು ಕೊಂಡಾಡಿದರು. ಕೆ ಎಂ ಸಿ ಆಸ್ಪತ್ರೆಯ ಡಾ.ಹಾರೂನ್ ಹುಸೈನ್, ಮತ್ತು ಡಾ.ಸಮೀನಾ ಹರೂನ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ವನಿತಾ ಪ್ರಸಾದ್ ಶುಭ ಹಾರೈಸಿದರು, ಆಶಾ ಡಿ. ಇವರು ಮಣಿಪಾಲ ಅರೋಗ್ಯ ಕಾರ್ಡಿನ ಸಂಪೂರ್ಣ ಮಾಹಿತಿ ನೀಡಿ ಅನುವು ಮಾಡಿಕೊಟ್ಟ ಯುವವಾಹಿನಿಗೆ ಕೆಎಂಸಿ ಆಸ್ಪತ್ರೆಯ ಪರವಾಗಿ ಧನ್ಯವಾದ ತಿಳಿಸಿದರು,
ವೇದಿಕೆಯಲ್ಲಿ ಭಾರತೀ ಜಿ ಅಮಿನ್ , ಭವಾನಿಶಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 200ರ ಫಲಾನುಭವಿಗಳು ಭಾಗವಹಿಸಿ , 44 ಶಿಬಿರಾರ್ಥಿಗಳು ಉಚಿತ ಕನ್ನಡಕ ಪಡಕೊಂಡರು. ಜಯರಾಮ ಪೂಜಾರಿ ಸ್ವಾಗತಿಸಿ, ಸುಜಾತಾ ನವೀನ್ ಧನ್ಯವಾದ ಸಮರ್ಪಣೆ ಮಾಡಿದರು., ಪ್ರತೀಕ್ಷಾ ಅಮೀನ್, ಶೀತಲ್ ಕಾರ್ಯಕ್ರಮ ನಿರೂಪಿಸಿದರು.