ಕಾರ್ಕಳ :ಬಿಲ್ಲವ ಸಮಾಜ ಸೇವಾ ಸಂಘ(ರಿ) ಬಜಗೋಳಿ,ಯುವವಾಹಿನಿ(ರಿ) ಕಾರ್ಕಳ ಘಟಕ,ಹಾಗೂ ಯೂತ್ ಬಿಲ್ಲವ(ರಿ) ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ರಕ್ತ ನಿಧಿ ಕೇಂದ್ರ ಉಡುಪಿ ಇದರ ಸಹಯೋಗದೊಂದಿಗೆ ಸಾರ್ವಜನಿಕ ಬ್ರಹತ್ ರಕ್ತದಾನ ಶಿಬಿರವು ಶ್ರೀ ನಾರಾಯಣ ಗುರು ಸಭಾಭವನ ಬಜಗೋಳಿ ಇಲ್ಲಿ ಫೆ.13ರಂದು ನಡೆಯಿತು. ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ನಲ್ಲೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರ ಕಾರ್ಕಳ ಇದರ ಮಾಲಕರಾದ ಸುಶಾಂತ್ ಬಜಗೋಳಿ ಇವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ, ರಕ್ತದಾನವು ಶ್ರೇಷ್ಠದಾನವಾಗಿದ್ದು, ಆಪತ್ಕಾಲದಲ್ಲಿ ಸಾವಿರಾರು ಜನರ ಜೀವ ಉಳಿಸುವ ಮಹತ್ಕಾರ್ಯವಾಗಿರುತ್ತದೆ , ಇಂತಹ ಶ್ರೇಷ್ಠ ಕಾರ್ಯಕ್ರಮವನ್ನು ಬಿಲ್ಲವ ಸಂಘಟನೆಗಳು ಆಯೋಜಿಸಿರುವುದು ಪ್ರಶಂಸನೀಯ ಎಂದರು. ಸಾರ್ವಜನಿಕರು ರಕ್ತದಾನವನ್ನು ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವುದರೊಂದಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷರಾದ ತಾರಾನಾಥ್ ಕೋಟ್ಯಾನ್ ಸೂರಾಲು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕೋವೀಡ್ ಸಂದರ್ಭದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಜನಸೇವೆಗೈದ ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಯಶೋಧರ್ ಹಾಗೂ ಬಜಗೋಳಿ ಮಾತಾ ಕ್ಲಿನಿಕ್ ನ ಡಾ.ಸುಕಿಂತಾ ಅನುಪ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು,
ಉಡುಪಿ ಜಿಲ್ಲಾ ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾರವರು ಮಾತನಾಡಿ ರಕ್ತದಾನದ ಮಹತ್ವವನ್ನು ವಿವರಿಸಿದರು.ಯುವವಾಹಿನಿ ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕರು ಹಾಗೂ ಕಾರ್ಕಳ ಘಟಕದ ಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಕಾರ್ಕಳರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉದ್ಯಮಿ ಹರೀಶ್ ಸಾಲ್ಯಾನ್ ಕಡಾರಿ, ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಬಜಗೋಳಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಪೂಜಾರಿ, ಯೂತ್ ಬಿಲ್ಲವ ಕಾರ್ಕಳದ ಅಧ್ಯಕ್ಷ ಭರತ್ ಅಂಚನ್,ರಕ್ತದಾನ ಕಾರ್ಯಕ್ರಮದ ನಿರ್ದೇಶಕ ಸಂದೇಶ್ ಕೋಟ್ಯಾನ್,ಬಜಗೋಳಿ ಬಿಲ್ಲವ ಸಂಘದ ಉಪಾಧ್ಯಕ್ಷೆ ಪದ್ಮಾವತಿ ಅಮೀನ್, ಮಹಿಳಾ ವಿಭಾಗದ ಅಧ್ಯಕ್ಷೆ ಚಂದ್ರಕಲಾ, ನಲ್ಲೂರು ಸ. ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ನಾಗೇಶ್ ಉಪಸ್ಥಿತರಿದ್ದರು. ಶಿಬಿರದಲ್ಲಿ 80 ಜನ ರಕ್ತದಾನ ಮಾಡಿದರು, ಶಿಬಿರದಲ್ಲಿ ಮದುಮೇಹ ಪರೀಕ್ಷೆ ನಡೆಸಲಾಯಿತು.ಈ ಸಂದರ್ಭದಲ್ಲಿ 37ನೇ ಬಾರಿ ರಕ್ತದಾನ ಮಾಡಿದ ಸದಾನಂದ ಅಮೀನ್ ಅವರನ್ನು ಗೌರವಿಸಲಾಯಿತು,ಯುವವಾಹಿನಿ ಕಾರ್ಕಳ ಘಟಕದ ನಿಕಟಪೂರ್ವ ಅಧ್ಯಕ್ಷ ಗಣೇಶ್ ಸಾಲಿಯಾನ್ ಉಪಸ್ಥಿತರಿದ್ದರು.
ಉಮೇಶ್ ಎಸ್ ಪೂಜಾರಿ ಸೂರಾಲು ಗುತ್ತು ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ,ಯುವವಾಹಿನಿ ಕಾರ್ಕಳ ಘಟಕದ ಕೋಶಾಧಿಕಾರಿ ಗಣೇಶ್ ಸಾಲಿಯಾನ್ ಜೋಡುಕಟ್ಟೆ ನಿರೂಪಿಸಿ, ಕಾರ್ಯದರ್ಶಿ ಮಮತಾ ಅಂಚನ್ ವಂದನಾರ್ಪಣೆಗೈದರು.