ಶಿಕ್ಷಣವು ಇಂದಿನ ಮೊದಲ ಅವಶ್ಯಕತೆಯಾಗಬೇಕು. ಪಠ್ಯ ಕೇಂದ್ರಿತ ಶಿಕ್ಷಣದ ಜೊತೆಗೆ ಕೌಶಲ ಅಭಿವೃದ್ಧಿಗೊಳಿಸುವ ತರಬೇತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಸ್ಪರ್ಧಾತ್ಮಕವಾದ ಯುಗವು ಬದುಕಿನ ಎಲ್ಲಾ ರಂಗಗಳಲ್ಲೂ ಸವಾಲನ್ನು ಎದುರು ಹಾಕುತ್ತದೆ. ಸವಾಲುಗಳನ್ನು ಧಾಟಿ ಬದುಕು ಕಟ್ಟಿಕೊಳ್ಳುವ ತುರ್ತು ವರ್ತಮಾನದ್ದಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರಿಯಾಶೀಲರಾಗಬೇಕು. ಅದಕ್ಕೆ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಅಭಿಪ್ರಾಯಪಟ್ಟರು.
ಅವರು ಬಿ.ಸಿ.ರೋಡು ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ವತಿಯಿಂದ ನಡೆದ “ಅನ್ವೇಷಣಾ-2016 ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಕುರಿತ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸವರ್ಣ ತುಂಬೆ, ರೋಟರಿ ಕ್ಲಬ್ ನಿಕಟಪೂರ್ವ ಕಾರ್ಯದರ್ಶಿ ಸಂಜೀವ ಪೂಜಾರಿ ಗುರುಕೃಪಾ, ಬಿರ್ವ ಸೆಂಟರ್ ಮೆಲ್ಕಾರ್ನ ಚಂದ್ರಹಾಸ ಪೂಜಾರಿ ಬಟ್ಟಹಿತ್ಲು, ವಾಸ್ತಿ ರೆಸಿಡೆನ್ಸಿ ಬಂಟ್ವಾಳದ ಮಾಲಕ ರಾಜೇಶ್ ಸುವರ್ಣ, ಎಸ್.ಕೆ.ಬಿಲ್ಡರ್ಸ್ನ ಸಂತೋಷ್ ಕುಮಾರ್ ಕೊಟ್ಟಿಂಜ ಶುಭ ಹಾರೈಸಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ್ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯದರ್ಶಿ ಸುನಿಲ್ ಸುವರ್ಣ ಮರ್ದೋಳಿ, ಉಪಾಧ್ಯಕ್ಷ ಶಿವಾನಂದ ಎಂ., ಉಪನ್ಯಾಸಕ ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು.
ಅನ್ವೇಷಣಾ-2016 ಕಾರ್ಯಾಗಾರದಲ್ಲಿ ಮಣಿಪಾಲ ವಿಶ್ವ ವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಸತೀಶ್ ಕುಮಾರ್, ವ್ಯಕ್ತಿತ್ವ ವಿಕಸನ ತರಬೇತುದಾರ ಅಭಿಜಿತ್ ಕರ್ಕೇರ, ಉಪನ್ಯಾಸಕ ಕೇಶವ ಬಂಗೇರ ಹಾಗೂ ಹರಿಕೃಷ್ಙ ಬಂಟ್ವಾಳ್ ಸಂಪನ್ಮೂಲ. ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಕಾರ್ಯಾಗಾರದ ಸಂಯೋಜಕ ಚೇತನ್ ಎಂ., ಸ್ವಾಗತಿಸಿದರು. ಸಹ ಸಂಯೋಜಕ ನಿತಿನ್ ಎಚ್.ಯು., ಧನ್ಯವಾದ ಸಲ್ಲಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷ ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು.