ಯುವವಾಹಿನಿ (ರಿ.) ಕೇಂದ್ರ ಸಮಿತಿಯ ವತಿಯಿಂದ ತಾರೀಕು 10-11-2019 ನೇ ಆದಿತ್ಯವಾರ ಮಧ್ಯಾಹ್ನ 3:00 ಗಂಟೆಗೆ ಸರಿಯಾಗಿ ಮಿನಿವಿಧಾನ ಸೌಧ ದ ಬಳಿ ಇರುವ ನೇತ್ರಾವತಿ ಸಭಾಂಗಣ ದಲ್ಲಿ ಘಟಕಗಳ ಅಧ್ಯಕ್ಷರು-ಕಾರ್ಯದರ್ಶಿ ಹಾಗೂ ಕಲೆ ಮತ್ತು ಸಾಹಿತ್ಯದ ನಿರ್ದೇಶಕರಿಗಾಗಿ ವಿಶೇಷವಾದ ಕಾರ್ಯಕ್ರಮ
ಡೆನ್ನಾನ-ಡೆನ್ನನ ದ ಪ್ರಥಮ ಹೆಜ್ಜೆ
*”””””””””ರಂಗ-ತರಬೇತಿ “”””””””””*
ಡೆನ್ನಾನ ಡೆನ್ನನ ದ ಒಳ-ಹೊರ ಆಯಾಮಗಳ ವಿಚಾರಧಾರೆ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕೊಲ್ಯ ಘಟಕದ ಕಲೆ ಮತ್ತು ಸಾಹಿತ್ಯ ದ ನಿರ್ದೇಶಕರಾದ ಜಗಜೀವನ್ ಕೊಲ್ಯ ರವರು ಪ್ರಾರ್ಥನೆಗೈದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ರಂಗ ತರಬೇತುದಾರರಾದ ಸದಾನಂದ ಬೈಂದೂರು ರವರು ದೀಪ ಬೆಳಗಿಸಿ ಉಧ್ಘಾಟಿಸಿದರು. ತರಬೇತುದಾರರಿಂದ ನಮ್ಮ ಯುವವಾಹಿನಿಯ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ ದಲ್ಲಿ ಸ್ಪರ್ಧಾಳುಗಳು ಭಾಗವಹಿಸುವಾಗ ಸ್ಪರ್ಧಾಳುಗಳು ತಮ್ಮ ಗಮನದಲ್ಲಿಟ್ಟುಕೊಳ್ಳಬಹುದಾದ ರಂಗಕ್ಕೆ ಸಂಬಂಧಿಸಿದ ಆಯಾಮಗಳ ಸಮಗ್ರ ಮಾಹಿತಿಯನ್ನು ಸುಮಾರು 2 ಗಂಟೆಗಳ ಕಾಲ ಭಾಗವಹಿಸಿ ದ ಎಲ್ಲಾ ಘಟಕದ ಸದಸ್ಯರಿಗೂ ಮನಮುಟ್ಟುವ ರೀತಿ ಪ್ರಸ್ತುತ ಪಡಿಸಿದುದಲ್ಲದೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಠಿಣ ಪರಿಶ್ರಮ ಹಾಗೂ ಪೂರ್ವತಯಾರಿಗೆ ಒತ್ತು ನೀಡಬೇಕೆಂಬ ಪ್ರೇರೇಪಣೆಯ ಮಾತನ್ನಾಡಿದರು.
ಅತಿಥಿಗಳಾಗಿ ಭಾಗವಹಿಸಿದ ಸದಾನಂದ ಬೈಂದೂರ್ ರವರಿಗೆ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ರವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.ಪ್ರಧಾನ ಕಾರ್ಯದರ್ಶಿ ಎಸ್.ಆರ್ ಪ್ರದೀಪ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಘಟಕದ ಕಾರ್ಯದರ್ಶಿ ಗಣೇಶ್.ವಿ.ಮಂಗಳೂರು ಘಟಕದ ಕಲೆ ಮತ್ತು ಸಾಹಿತ್ಯದ ನಿರ್ದೇಶಕರಾದ ಹರೀಶ್ ಪಚ್ಚನಾಡಿ ಹಾಗೂ ಕೇಂದ್ರ ಸಮಿತಿಯ ಕಲೆ ಮತ್ತು ಸಾಹಿತ್ಯದ ನಿರ್ದೇಶಕರಾದ ಲೋಕೇಶ್ ಕೋಟ್ಯಾನ್ ರವರು ಉಪಸ್ಥಿತಿತರಿದ್ದರು. ಪ್ರಚಾರ ನಿರ್ದೇಶಕರಾದ ಕುಸುಮಾಕರ ಕುಂಪಲರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಘಟಕಗಳ ಅಧ್ಯಕ್ಷರು-ಕಾರ್ಯದರ್ಶಿಗಳು ಹಾಗೂ ಘಟಕಗಳ ಕಲೆ ಮತ್ತು ಸಾಹಿತ್ಯದ ನಿರ್ದೇಶಕರುಗಳ ಸಮಕ್ಷಮದಲ್ಲಿ ಡೆನ್ನಾನ -ಡೆನ್ನನ ಕಾರ್ಯಕ್ರಮಗಳ ಪಾರದರ್ಶಕತೆಯನ್ನು ಪ್ರತಿ ಘಟಕಗಳು ಅರಿತುಕೊಳ್ಳುವ ದೃಷ್ಟಿಯಿಂದ ಕೇಂದ್ರ ಸಮಿತಿಯ ಪದಾಧಿಕಾರಿಗಳು ಹಾಗೂ ಆತಿಥ್ಯ ಘಟಕದ ಪದಾಧಿಕಾರಿಗಳೊಂದಿಗೆ ವಿಚಾರಗಳು ವಿನಿಮಯವಾದವು .