ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ ರಿ. ಮೂಡಬಿದ್ರೆ ಘಟಕ ಹಾಗೂ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ರಿ. ಮೂಡಬಿದ್ರೆ ಇದರ ಸಹಯೋಗದೊಂದಿಗೆ ದಿನಾಂಕ 27 10 2019ನೇ ಆದಿತ್ಯವಾರದಂದು ಬೆಳಿಗ್ಗೆ ಗಂಟೆ ಒಂಬತ್ತು ಮೂವತ್ತಕ್ಕೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮೂಡಬಿದ್ರೆಯಲ್ಲಿ ನಾರಾಯಣಗುರುಗಳ ಜೀವನ ಸಂದೇಶ ಗೋಷ್ಠಿ 2019 ಈ ಕಾರ್ಯಕ್ರಮವನ್ನು ಯುವವಾಹಿನಿ ರಿ. ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಶಿಹಿತ್ಲು ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗದೀಶ್ಚಂದ್ರ ಡಿ.ಕೆ ಅಧ್ಯಕ್ಷರು ಯುವವಾಹಿನಿ ರಿ. ಮೂಡಬಿದ್ರೆ ಘಟಕ ವಹಿಸಿದ್ದು ಸರ್ವರನ್ನು ಸ್ವಾಗತಿಸಿದರು ಮುಖ್ಯ ಅತಿಥಿಯಾಗಿ ಜಯಂತ್ ನಡುಬೈಲ್ ನಿಕಟಪೂರ್ವ ಅಧ್ಯಕ್ಷರು ಯುವ ವಾಹಿನಿ ರಿ. ಕೇಂದ್ರ ಸಮಿತಿ ಮಂಗಳೂರು ಹಾಗೂ ಅಧ್ಯಕ್ಷರು ಕ್ಷೇತ್ರಾಡಳಿತ ಸಮಿತಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಪೂತ್ತುರು, ಶ್ರೀ ಪಿಕೆ ರಾಜು ಪೂಜಾರಿ ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮೂಡಬಿದ್ರೆ
ಗೌರವ ಉಪಸ್ಥಿತಿಯಲ್ಲಿ ಟಿ. ಶಂಕರ್ ಸುವರ್ಣ ಮಾಜಿ ಅಧ್ಯಕ್ಷರು ಕೇಂದ್ರ ಸಮಿತಿ ಹಾಗೂ ಸಲಹೆಗಾರರು ಮೂಡಬಿದಿರೆ ಘಟಕ, ಶ್ರೀ ಜಗದೀಶ್ ಸುವರ್ಣ ನಿರ್ದೇಶಕರು ನಾರಾಯಣ ಗುರು ತತ್ವ ಪ್ರಚಾರ ಯುವವಾಹಿನಿ ರಿ. ಕೇಂದ್ರ ಸಮಿತಿ ಮಂಗಳೂರು, ಪ್ರೊ ಹರೀಶ್ ಕಾಪಿಕಾಡ್ ನಿರ್ದೇಶಕರು ನಾರಾಯಣ ಗುರು ತತ್ವ ಪ್ರಚಾರ ಮೂಡಬಿದ್ರೆ ಘಟಕ, ನಿತೀಶ್ ಎಚ್ ಸಂಘಟನಾ ಕಾರ್ಯದರ್ಶಿ ಯುವವಾಹಿನಿ ರಿ. ಕೇಂದ್ರ ಸಮಿತಿ ಮಂಗಳೂರು, ರಾಜೇಶ್ ಡಿ. ಕೋಟ್ಯಾನ್ ನಿರ್ದೇಶಕರು ವ್ಯಕ್ತಿತ್ವ ವಿಕಸನ ಯುವವಾಹಿನಿ ರಿ. ಕೇಂದ್ರ ಸಮಿತಿ ಮಂಗಳೂರು, ನವಾನಂದ ಕಾರ್ಯದರ್ಶಿ ಯುವವಾಹಿನಿ ರಿ. ಮೂಡಬಿದಿರೆ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಕಳೆದ ವರ್ಷದ ಯಶಸ್ವಿ ನಾಯಕ ಜಯಂತ್ ನಡುಬೈಲ್ ಇವರನ್ನು ಗಣ್ಯರ ಎದುರು ಸನ್ಮಾನಿಸಲಾಯಿತು ಸನ್ಮಾನ ಪತ್ರವನ್ನು ಮೂಡಬಿದ್ರೆ ಘಟಕದ ವ್ಯಕ್ತಿತ್ವ ವಿಕಸ ನಿರ್ದೇಶಕರಾದ ಸುದೀಪ್ ಬುನ್ನನ್ ಓದಿರುತ್ತಾರೆ.
ಯುವವಾಹಿನಿ ರಿ. ಮೂಡಬಿದ್ರೆ ಘಟಕದ ವತಿಯಿಂದ ಆರಂಭಿಸಲಾದ ಮಹತ್ವಕಾಂಕ್ಷೆಯ ಸೇವಾ ಯೋಜನೆ ಯುವ ಸ್ಪಂದನ ಸೇವಾ ಯೋಜನೆಯ ವತಿಯಿಂದ 64,000 ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು ಈ ಸೇವಾ ಯೋಜನೆಯು ಉದ್ಘಾಟನೆಯಾಗಿ ಇಂದಿಗೆ 5 ತಿಂಗಳು ಕಳೆದಿರುತ್ತದೆ ಇದರ ವತಿಯಿಂದ 1,64,000 ಸೇವೆ ನೀಡಲಾಗಿದೆ ಎಂದು ಸಂತೋಷ್ ಪಣಪಿಲ ಸಮಾಜಸೇವಾ ನಿರ್ದೇಶಕರು ಯುವವಾಹಿನಿ ರಿ. ಮೂಡಬಿದ್ರೆ ಘಟಕ ಇವರು ತಿಳಿಸಿದರು.
ಶ್ರೀಮತಿ ಜೀವಿತ ಶಂಕರ್ ಯುವವಾಹಿನಿ ರಿ. ಮೂಡಬಿದಿರೆ ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಇವರು ನಮ್ಮ ಟಿವಿಯವರು ಆಯೋಜಿಸಿರುವ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ಸೀಸನ್ ಫೋರ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ ಇವರನ್ನು ಅಭಿನಂದಿಸಲಾಯಿತು.
ಘಟಕದ ಕಾರ್ಯದರ್ಶಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಇಂದು ಚೇತನ್ ಬೋರುಗುಡ್ಡೆ ಮಾಡಿರುತ್ತಾರೆ
ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಮುದ್ದು ಮೂಡುಬೆಳ್ಳೆ ನಿರ್ದೇಶಕರು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾಲಯ ಅವರು ವಹಿಸಿದ್ದರು ಆಶಯದ ಮಾತುಗಳನ್ನು ಡಾ. ಯೋಗೀಶ್ ಕೆರೋಡಿ ಗೌರವ ಸಲಹೆಗಾರರು ಯುವವಾಹಿನಿ ರಿ. ಮೂಡಬಿದ್ರೆ ಘಟಕ ಮಾಡಿರುತ್ತಾರೆ
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಟಿಎಎನ್ ಖಂಡಿಗೆ ಲೇಖಕರು ಮತ್ತು ವಿಮರ್ಶಕರು ಇವರು ನಾರಾಯಣ ಗುರುಗಳ ಅನುಭಾವದ ನೆಲೆಯ ಬಗ್ಗೆ ಮಾತನಾಡಿದರು ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕು. ರುಚಿಕಾ ಉಪನ್ಯಾಸಕಿ ಜೀವನ ಶಾಸ್ತ್ರ ಪದವಿಪೂರ್ವ ಕಾಲೇಜು ಆಳ್ವಾಸ್ ಮೂಡಬಿದ್ರೆ ಇವರು ಗುರುಗಳ ಶಿಕ್ಷಣದ ಪರಿಕಲ್ಪನೆ ಬಗ್ಗೆ ಮಾತನಾಡಿದರು. ವಿಚಾರಗೋಷ್ಠಿ ಕಾರ್ಯಕ್ರಮದ ವಂದನಾರ್ಪಣೆಯನ್ನು ಯುವವಾಹಿನಿ ಮೂಡಬಿದ್ರೆ ಘಟಕದ ಉಪಾಧ್ಯಕ್ಷರಾದ ರಾಜೇಶ್ ಎಂ. ಸುವರ್ಣ ವಕೀಲರು ಬೆಳುವಾಯಿ ಮಾಡಿರುತ್ತಾರೆ. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಶೋಭಾ ಸುರೇಶ್ ಮಾಡಿದ್ದರು.
ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಸುದರ್ಶನ್ ಎಂ. ಸಂಚಾಲಕರು ಅಯ್ಯಪ್ಪ ದೇವಸ್ಥಾನ ಮೂಡಬಿದ್ರೆ, ಶ್ರೀ ಎಂ ಶಾಂತಾರಾಮ್ ಡಿವಿಜನಲ್ ಮ್ಯಾನೇಜರ್ ಡಿ.ಒ. ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಮಂಗಳೂರು ಹಾಗೂ ಉಪಾಧ್ಯಕ್ಷರು ತುಳುನಾಡ ಮನ್ಸ ಸೇವಾ ಸಂಘ ಮೂಡಬಿದ್ರೆ, ಶ್ರೀ ರಾಜೇಶ್ ಬಂಗೇರ ಮಾಲಕರು ಕಟೀಲೇಶ್ವರಿ ಕನ್ ಸ್ಟ್ರಕ್ಷನ್ ಹಾಗೂ ಅಧ್ಯಕ್ಷರು ಗಣಿಗರ ಯಾನೆ ಸಪಳಿಗರ ಸಂಘ ಮೂಡಬಿದ್ರೆ ವಹಿಸಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು ಮಾಡಿರುತ್ತಾರೆ ವಂದನಾರ್ಪಣೆಯನ್ನು ಉಪಾಧ್ಯಕ್ಷರಾದ ಹರಿಪ್ರಸಾದ್ ಪಿ. ಹೊಸಂಗಡಿ ಮಾಡಿರುತ್ತಾರೆ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಲೋಲಾಕ್ಷಿ ಮಾಡಿರುತ್ತಾರೆ.