ಯುವವಾಹಿನಿ ಕೂಳೂರು ಘಟಕವು ಕ್ರಿಯಾಶೀಲತೆಗೆ ಹೆಸರುವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವವಾಹಿನಿಯ ಇತಿಹಾಸದಲ್ಲೇ ವಿಭಿನ್ನತೆ ತಂದುಕೊಟ್ಟಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಸಸಿಹಿತ್ಲು ಹೇಳಿದರು.
ಅವರು ದಿನಾಂಕ 22.09.19 ರಂದು ಕೂಳೂರು ಚರ್ಚ್ ಹಾಲ್ ನಲ್ಲಿ ನಡೆದ ಯುವಜನತೆಯ ಪ್ರೇರೇಪಣೆಗಾಗಿ ಯೂತ್ ಫೆಸ್ಟ್ 2019 ನಮ್ಮ ಚಿತ್ತ ಪ್ರತಿಭೆಗಳ ಅನಾವರಣದತ್ತ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು. ಮಂಗಳೂರು ನಗರ ಪೂರ್ವ ಪೋಲಿಸ್ ಠಾಣೆಯ ನಿರೀಕ್ಷಕರಾದ ಶಾಂತರಾಮ್ ಕುಂದಾರ್ ಕಾರ್ಯಕ್ರಮದ ಸ್ಪರ್ಧೆಗಳನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಯುವಜನರು ಮಾದಕ ವಸ್ತುಗಳಿಂದ ದೂರವಿರಬೇಕು ಎಂದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ ಪ್ರತೀಕ್ ಪೂಜಾರಿ, ಕೂಳೂರು ಬೀಡಿನ ವಜ್ರಕುಮಾರ್ ಕರ್ಣಾಂತಾಯ ಬಳ್ಳಾಲ್ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ ಕೂಳೂರು ಇಲ್ಲಿನ ಅಧ್ಯಕ್ಷರಾದ ಹರೀಶ್ ಅಮೀನ್ ಆಗಮಿಸಿದ್ದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಯುವವಾಹಿನಿ ಕೂಳೂರು ಘಟಕದ ಗೌರವ ಸಲಹೆಗಾರರಾದ ನೇಮಿರಾಜ್. ಪಿ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಲೋಕೇಶ್ ಕೋಟ್ಯಾನ್, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಶ್ಮಿ, ಯುವವಾಹಿನಿ ಕೂಳೂರು ಘಟಕದ ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ಹಾಗೂ ಯುವವಾಹಿನಿ ಕೂಳೂರು ಘಟಕದ ವಿದ್ಯಾರ್ಥಿ ಸಂಘಟನಾ ಕಾರ್ಯದರ್ಶಿ ಸುಶ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರು ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಅಧ್ಯಕ್ಷರು ಸ್ವಾಗತಿಸಿದರು. ಮನ್ಹಿತಾ ಪ್ರಾರ್ಥಿಸಿದರು. ಪ್ರತೀಶ್ ಗೌರೀಶ್ ನಿರೂಪಿಸಿದರು. ಸುಶ್ಮಾ ವಂದಿಸಿದರು.
ನಂತರ ರಂಗ್ ದ ಮದಿಪು, ಮಾತು ಕರೆದಾಗ, ಬಲ್ಲಿರೇನಯ್ಯ ನಾನೊಬ್ಬನೇ, ಅಮರ್ ಬೊಳ್ಳಿಲು, ಪಲ್ಲವಿ ಅನುಪಲ್ಲವಿ, ಕವಿ ಕಲಮ, ಕಲೆ ನಲಿಕೆ, ನಿಗೂಢ ರಹಸ್ಯ ಹಾಗೂ ನಮ್ಮ ತಾಕತ್ತ್ ನಮ್ಮ ಪ್ರತಿಭೆ ಈ ಎಲ್ಲಾ ಸ್ಪರ್ಧೆಗಳನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಆಯೋಜಿಸಲಾಗಿತ್ತು.
ಜಬರ್ ದಸ್ತ್ ಶಂಕರ ಚಲನಚಿತ್ರದ ತಂಡ ಕಾರ್ಯಕ್ರಮಕ್ಕೆ ಬಂದು ಅವರ ಚಲನಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಸಸಿಹಿತ್ಲು ಇವರು ವಹಿಸಿದ್ದರು.
ಅವರು ಸಂಘಟನೆಯ ನೆಲೆಯಲ್ಲಿ ಈ ಕಾರ್ಯಕ್ರಮವು ಉತ್ತಮ ನಿದರ್ಶನವಾಗಿದ್ದು, ಬಿಲ್ಲವರ ಹೊಂದಾಣಿಕೆಗೆ ಸಾಕ್ಷಿಯಾಗಿದೆ ಎಂದು ಸ್ವಾಗತ ಭಾಷಣ ಮಾಡಿ, ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ (ರಿ) ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಜಯಂತ್ ನಡುಬೈಲ್ ಅವರು ಮಾತನಾಡಿ ವಿಭಿನ್ನ ಹಾಗೂ ವಿನೂತನ ಕಾರ್ಯಕ್ರಮ ಆಯೋಜಿಸಿದ ಕೂಳೂರು ಘಟಕಕ್ಕೆ ತಮ್ಮ ಧನ್ಯವಾದ ತಿಳಿಸಿದರು. ಕೂಳೂರು ಘಟಕವು ಪ್ರತಿಯೊಂದು ಘಟಕಕ್ಕೂ ಮಾದರಿ ಘಟಕವಾಗಿದೆ ಎಂದರು. ಇವರ ಜೊತೆ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ಸಚಿನ್ ಸುವರ್ಣ, ಅಂತರರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ, ಚಲನಚಿತ್ರ ನಟ ಹಾಗೂ ನೃತ್ಯ ನಿರ್ದೇಶಕರಾದ ಸೂರಜ್ ಸನಿಲ್ ಆಗಮಿಸಿದ್ದರು.
ಗುರುವಂದನೆ
ಕಾರ್ಯಕ್ರಮದಲ್ಲಿ ಕಿಟ್ಟೆಲ್ ಪ್ರೌಢಶಾಲೆಯ ಪ್ರಾಧ್ಯಾಪಕರಾದ ಕೃಷ್ಣ ಎನ್ ಹಾಗೂ ಸಚಿತಾ ನಂದಗೋಪಾಲ್ ರವರಿಗೆ ಗುರುವಂದನೆ ಮಾಡಲಾಯಿತು.
ಯುವ ಪ್ರತಿಭೆಗಳಿಗೆ ಅಭಿನಂದನೆ
ಅಂತರರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ, ಹ್ಯಾಂಡ್ ಬಾಲ್ ಕೋಚ್ ಮುಕೇಶ್, ಚಲನಚಿತ್ರ ನಟ ಹಾಗೂ ನೃತ್ಯ ನಿರ್ದೇಶಕರಾದ ಸೂರಜ್ ಸನಿಲ್ ಹಾಗೂ ಚಲನಚಿತ್ರ ನಟಿ ನಮಿತಾ ಕಿರಣ್ ರವರಿಗೆ ಇವರ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು.
ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಲೋಕೇಶ್ ಕೋಟ್ಯಾನ್, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಶ್ಮಿ, ಯುವವಾಹಿನಿ (ರಿ) ಕೂಳೂರು ಘಟಕದ ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ಹಾಗೂ ಯುವವಾಹಿನಿ (ರಿ) ಕೂಳೂರು ಘಟಕದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ನಯನ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಯೂತ್ ಫೆಸ್ಟ್ 2019 ರ ಲಕ್ಕಿಡಿಪ್ ಡ್ರಾ ಮಾಡಲಾಯಿತು. ನಂತರ ಗೆದ್ದ ಘಟಕಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಪ್ರಥಮ ಸಮಗ್ರ ಪ್ರಶಸ್ತಿ ಎಕ್ಕಾರ್ ಪೆರ್ಮುದೆ ಘಟಕ, ದ್ವಿತೀಯ ಪಡುಬಿದ್ರಿ ಘಟಕ ಮತ್ತು ತೃತೀಯ ಮೂಡಬಿದ್ರಿ ಘಟಕ ಪಡೆಯಿತು.
ಅತ್ಯಂತ ಶಿಸ್ತಿನ ಘಟಕ- ಬಜಪೆ ಘಟಕ ಪಡೆಯಿತು.
ಅಧ್ಯಕ್ಷರು ಗಣ್ಯರೆಲ್ಲರಿಗೂ ಸ್ಮರಣಿಕೆ ಕೊಟ್ಟು ಗೌರವಿಸಿದರು.
ಪ್ರತೀಶ್ ಗೌರೀಶ್ ನಿರೂಪಿಸಿದರು.
ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರು ವಂದಿಸಿದರು.