ಪುತ್ತೂರು : ಯುವವಾಹಿನಿ ಕೇಂದ್ರ ಸಮಿತಿಯ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 11.08.2019 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ವಿಶಾಲ ಗದ್ದೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ ಸಂಸ್ಥೆಯ 32ನೇ ವಾರ್ಷಿಕ ಸಮಾವೇಶದಲ್ಲಿ ಜರುಗಿತು.
ಯುವವಾಹಿನಿ ಕೇಂದ್ರ ಸಮಿತಿಯ 33ನೇ ನೂತನ ಅಧ್ಯಕ್ಷರಾಗಿ ನರೇಶ್ ಕುಮಾರ್ ಸಸಿಹಿತ್ಲು, ಪ್ರಥಮ ಉಪಾಧ್ಯಕ್ಷರಾಗಿ ಡಾ.ರಾಜಾರಾಂ ಕೆ.ಬಿ, 2ನೇ ಉಪಾಧ್ಯಕ್ಷರಾಗಿ ಉದಯ ಅಮೀನ್ ಮಟ್ಟು ಮುಲ್ಕಿ , ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಎಸ್.ಆರ್ ಸಸಿಹಿತ್ಲು, ಕೋಶಾಧಿಕಾರಿಯಾಗಿ ನವೀನ್ ಚಂದ್ರ ಮಂಗಳೂರು, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಬಿ ಬಂಟ್ವಾಳ,
ಯುವಸಿಂಚನ ಪತ್ರಿಕಾ ಸಂಪಾದಕರಾಗಿ ಸಂಜೀವ ಸುವರ್ಣ ಪಣಂಬೂರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕರಾಗಿ ರಾಕೇಶ್ ಕುಮಾರ್ ಮಂಗಳೂರು, , ಪ್ರಚಾರ ನಿರ್ದೇಶಕರಾಗಿ ಕುಸುಮಾಧರ್ ಕೊಲ್ಯ, ಮಹಿಳಾ ಸಂಘಟನಾ ನಿರ್ದೇಶಕಿ ರಕ್ಷಿತಾ ಯೋಗೀಶ್ ಕೋಟ್ಯಾನ್ ಮುಲ್ಕಿ , ನಾರಾಯಣ ಗುರುಗಳ ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾಗಿ ಜಗದೀಶ್ ಸುವರ್ಣ ಪಣಂಬೂರು, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಲೋಕೇಶ್ ಕೋಟ್ಯಾನ್ ಕೂಳೂರು, ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರಾಗಿ ಪ್ರಶಾಂತ್ ಮಚ್ಚಿನ ಬೆಳ್ತಂಗಡಿ , ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ರಾಜೇಶ್ ಡಿ. ಕೋಟ್ಯಾನ್ ಮೂಡಬಿದ್ರೆ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ದೇವರಾಜ್ ಅಮೀನ್ ಬಜಪೆ , ಸಮಾಜ ಸೇವಾ ನಿರ್ದೇಶಕರಾಗಿ ಅಶೋಕ್ ಕೋಟ್ಯಾನ್ ಉಡುಪಿ,
ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ್ ಕೋಟ್ಯಾನ್ ಕಟಪಾಡಿ , ಸಂತೋಷ್ ಎಸ್ ಪೂಜಾರಿ ಪಡುಬಿದ್ರೆ, ಹರೀಶ್ ಕೆ.ಸನಿಲ್ ಕಂಕನಾಡಿ , ರಶ್ಮಿ ಸಿ. ಕರ್ಕೆರಾ ಮಂಗಳೂರು , ಗಣೇಶ್ ಅರ್ಬಿ ಕೆಂಜಾರು ಕರಂಬಾರು , ನಿತೀಶ್ ಎಚ್ ವೇಣೂರು, ಹೊನ್ನಪ್ಪ ಪೂಜಾರಿ ಕೈಂದಾಡಿ ಪುತ್ತೂರು , ಉದಯ ಕುಮಾರ್ ಕೋಲಾಡಿ ಪುತ್ತೂರು, ಬಿ.ಟಿ ಮಹೇಶ್ಚಂದ್ರ ಸಾಲಿಯಾನ್ ನರಿಮೊಗರು, ಲೋಕೇಶ್ ಸುವರ್ಣ ಅಲೆತ್ತೂರು ಬಂಟ್ವಾಳ , ಭಾಸ್ಕರ್ ಅಗರಮೇಲು ಸೂರತ್ಕಲ್ , ರಾಜೇಶ್ ಪೂಜಾರಿ ಮಾಣಿ, ರವರಿಗೆ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲುರವರು ಪ್ರಮಾಣ ಪತ್ರ ಹಾಗೂ ಹೂ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು . ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ಯ ಅಧ್ಯಕ್ಷರಾದ ಯಶವಂತ ಪೂಜಾರಿರವರು ಪದಾದಿಕಾರಿಗಳನ್ನು ಸಭೆಗೆ ಪರಿಚಯಿಸಿದರು.
ಈ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ `ಕರ್ನಾಟಕದ ಸಿಂಗಂ’ ಖ್ಯಾತಿಯ ಅಣ್ಣಾಮಲೈ, ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ ಕೃಷ್ಣಮೂರ್ತಿ, ಸಾಗರೋತ್ತರ ಉದ್ಯಮಿ ಮಸ್ಕತ್‍ನಲ್ಲಿನ ಡಾ|ಸಿ.ಕೆ ಅಂಚನ್, ತುಳುರಂಗದ ಚಿತ್ರನಟಿ ನವ್ಯಾ ಪೂಜಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿ ಸಮಾವೇಶದ ನಿರ್ದೇಶಕ ಶಶಿಧರ್ ಕಿನ್ನಿಮಜಲು, ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕೆ.ಅಂಚನ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಹಾಗೂ ಯುವವಾಹಿನಿ ಸಂಸ್ಥೆಯ 35 ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.