ಮಂಗಳೂರು : ದಿನಾಂಕ 13.08.2019 ರಂದು ನಡೆದ ಘಟಕದ ಸಾಪ್ತಾಹಿಕ ಸಭೆಯಲ್ಲಿ ಜೆಸಿಐ ಸ್ಮಿತಾ ಪಿ. ಹೊಳ್ಳರವರು ಲಿಂಗ ಸಮಾನತೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹುಟ್ಟು ಮತ್ತು ಸಾವು ಭಗವಂತನ ನಿರ್ಣಯಗಳು. ಅದರ ನಡುವಿನ ಜೀವನ ನಮ್ಮದು. ಭಗವಂತನು ನಮಗೆ ನೀಡಿರುವ ಅತ್ಯುತ್ತಮವಾದ ಜೀವನವನ್ನು ಯಾವುದೇ ಬೇದ ಭಾವ ತೋರದೆ, ಸಮಚಿತ್ತದಿಂದ, ತಾರತಮ್ಯವಿಲ್ಲದೆ, ಸಹಬಾಳ್ವೆಯನ್ನು ನಡೆಸುವುದೇ ಜೀವನದ ಬಲು ದೊಡ್ಡ ಸಾಧನೆ ಎಂದರು. ಸ್ಮಿತಾರವರನ್ನು ಮಾಜಿ ಅಧ್ಯಕ್ಷರಾದ ಜಯರಾಮ್ ಕಾರಂದೂರುರವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಹಾಗೂ ಅವರಿಗೆ ಸಹಕಾರ ನೀಡಿದ ಜೆಸಿಐ ಶರತ್ ಕುಮಾರ್ ರವರನ್ನು ಯಶವಂತ ಪೂಜಾರಿಯವರು ಅಭಿನಂದಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯ ಅಧ್ಯಕ್ಷತೆಯನ್ನು ಶ್ರೀ ಕೆ. ಆರ್. ಲಕ್ಷ್ಮೀನಾರಾಯಣರವರು ವಹಿಸಿದ್ದರು. ಗತಸಭೆಯ ವರದಿಯನ್ನು ಕಾರ್ಯದರ್ಶಿ ಗಣೇಶ್ ವಿ. ಕೋಡಿಕಲ್ ರವರು ಓದಿದರು. ನಿಕಟಪೂರ್ವ ಅಧ್ಯಕ್ಷರಾದ ನವೀನ್ ಚಂದ್ರ, ಉಪಾಧ್ಯಕ್ಷರಾದ ಚಂದ್ರ ಶೇಖರ್ ಕರ್ಕೇರ ಮತ್ತು ಸಮಾವೇಶದ ಸಂಚಾಲಕರಾದ ಮೋಹನದಾಸ ಮಾಲೆಮಾರ್ ರವರು ಉಪಸ್ಥಿತರಿದ್ದರು. ಸಿಂಚನ ವಿಶೇಷಾಂಕದ ವರದಿಯನ್ನು ಹರೀಶ್ ಪಚ್ಚನಾಡಿ ಯವರು ನೀಡಿದರು.
ದಿನಾಂಕ 11.8 2019 ರಂದು ಪುತ್ತೂರಿನಲ್ಲಿ ನಡೆದ ಯುವವಾಹಿನಿ (ರಿ) ಕೇಂದ್ರ ಸಮಿತಿ ಯ 32ನೇ ವಾರ್ಷಿಕ ಸಮಾವೇಶ ದ ಅಚ್ಚು ಕಟ್ಟುತನ, ಶಿಸ್ತು, ಆತಿಥ್ಯ, ಸಮಯಪಾಲನೆ ಮತ್ತು ಸಮಾವೇಶ ನಿರೂಪಣೆ ಬಗ್ಗೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಅಭೂತಪೂರ್ವ ಜನಪ್ರಿಯತೆ ಗಳಿಸಿದ ಸಮಾವೇಶದ ಯಶಸ್ಸಿಗೆ ಅವಿರತವಾಗಿ ಶ್ರಮಿಸಿದ ಕೇಂದ್ರ ಸಮಿತಿಯ ಹಾಗೂ ಪುತ್ತೂರು ಘಟಕದ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾದ ಶ್ರೀ ನರೇಶ್ ಕುಮಾರ್ ಸಸಿಹಿತ್ಲು ಮತ್ತು ಪದಾಧಿಕಾರಿಗಳಿಗೆ ಸದಸ್ಯರೆಲ್ಲರೂ ಶುಭ ಹಾರೈಸಿದರು. ಪ್ರಕ್ರೃತಿ ವಿಕೋಪದಿಂದ ಉಂಟಾದ ತೀವ್ರ ಹಾನಿ ಹಾಗೂ ಸಾವಿಗೀಡಾದ ಬಂಧುಗಳ ಆತ್ಮಕ್ಕೆ ಚಿರ ಶಾಂತಿಯನ್ನು ದೇವರು ಕರುಣಿಸಲೆಂದು ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂತೋಷ್ ಕುಮಾರ್ ರವರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.