ಮಂಗಳೂರು : ಯುವವಾಹಿನಿ ಸಭಾಂಗಣ ಮಂಗಳೂರು ಘಟಕದಲ್ಲಿ ದಿನಾಂಕ 23.07.2019ರಂದು ಸಂಜೆ ಆಟಿದ ತಮ್ಮನ ಕಾರ್ಯಕ್ರಮ ನಡೆಸಲಾಯಿತು. ಘಟಕದ ಎಲ್ಲಾ ಸದಸ್ಯರು ಮತ್ತು ಮಂಗಳೂರು ಮಹಿಳಾ ಘಟಕದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಮೊದಲು ಏರ್ಪಡಿಸಿರುವ ಭಜನೆಯಲ್ಲಿ ಎಲ್ಲಾ ಸದಸ್ಯರು ಪಾಲ್ಗೊಂಡರು. ಅಧ್ಯಕ್ಷರಾದ ಕೆ. ಆರ್. ಲಕ್ಷ್ಮೀ ನಾರಾಯಣರವರು ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ಗಣೇಶ್ ವಿ. ಕೋಡಿಕಲ್ ರವರು ಗತಸಭೆಯ ವರದಿಯನ್ನು ವಾಚಿಸಿದರು. ದಿನಾಂಕ 28.07.2019ರಂದು ಭಾನುವಾರ ನಡೆಯಲಿರುವ ಬ್ರಹತ್ ವ್ಯೆದ್ಯಕೀಯ ಶಿಬಿರ ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಇದ್ದ ಕಷ್ಟಗಳು, ಮಳೆಯ ತೀವ್ರತೆ, ಭೂಮಿ ತಾಯಿಯ ಮಹತ್ವ, ಆಚಾರ ವಿಚಾರಗಳು ಮತ್ತು ತಿನ್ನುವ ತೆನಸುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಘಟಕದ ಸದಸ್ಯರಾದ, ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ರವಿ ಮುಂಡಾಜೆ ತಿಳಿಸಿದರು. ಸತೀಶ್ ಕುಮಾರ್ ರವರು ತುಳು ರಸಪ್ರಶ್ನೆಗಳು ಮತ್ತು ಕೆಲವು ಆಟೋಟ ಸ್ಪರ್ಧೆಗಳ ಮೂಲಕ ಸಭಿಕರನ್ನು ರಂಜಿಸಿದರು.
ಆಟಿದ ತಮ್ಮನವನ್ನು ಘಟಕದ ಸದಸ್ಯರಾದ ಶ್ರವಣ್ ಕುಮಾರ್ – ನವ್ಯ ಮತ್ತು ಹೆನ್ರಿ – ರಶ್ಮಿ ದಂಪತಿಗಳಿಗೆ ನೀಡಲಾಯಿತು. ಮಹಿಳಾ ಘಟಕದ ಅಧ್ಯಕ್ಷರು ಉಮಾಶ್ರೀಕಾಂತ್ ಮತ್ತು ಸದಸ್ಯರು ದಂಪತಿಗಳಿಗೆ ಆರತಿ ಬೆಳಗಿ, ತಿಲಕವಿಟ್ಟು, ಬಾಗಿನ ಸಮಾರ್ಪಿಸಿದರು. ಅಧ್ಯಕ್ಷರು ಆಟಿದ ತಮ್ಮನ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲ ಸದಸ್ಯರನ್ನು ಗೌರವಿಸಿದರು ಮತ್ತು ಶ್ರೀಕಾಂತ್ ರವರು ಎಲ್ಲಾರಿಗೂ ಧನ್ಯವಾದ ಸಲ್ಲಿಸಿದರು.
ಘಟಕದ ಸದಸ್ಯರು ತಯಾರಿಸಿ ತಂದಿರುವ ಉಪ್ಪಡ್ ಪಚ್ಚೀಲ್, ಚಲ್ಲಂಗಾಯಿ ಚಟ್ನಿ, ಕುಂಜಿದ ಚಟ್ನಿ, ಪುನರ್ ಪುಲಿ ಇರೆ ಬೊಕ್ಕ ತೇವುದ ಇರೆತ ಚಟ್ನಿ, ಸಾರಣೆದಡ್ಡೆದ ಪಾಯಸ, ಗಾರಿಗೆ, ಉರುದ ಕೋರಿದ ಸುಕ್ಕ, ಕಜೆ ಅರಿತ ಗಂಜಿ, ಪತ್ರೋಡೆ, ಪೆಲತ್ತರಿ ತೋಜಂಕ್ ಪಲ್ಯ, ಉಪ್ಪಡ್, ಬಂಗುಡೆ ಮುಟ್ಟೆದ ಗಸಿ, ಕೆರೆಂಗ್, ಪೊಟ್ಟು ಕಾಪೀ, ಕಡ್ಲೆ ಬಲ್ಯಾರ್, ತೋಜಂಕ್ ದ ಚಟ್ಟಂಬಡೆ, ಮರುವಾಯ್ ಪುಂಡಿ, ಪೆಲಕಾಯಿದ ಗಟ್ಟಿ, ಕೊಟ್ಟಿಗೆ, ಚಟ್ನಿ, ಗುಳಿ ಅಪ್ಪ, ಬಿಸಿ ಬಿಸಿ ಹೋಳಿಗೆ, ತೇಟ್ಲ ಅ೦ಬಡೆ ಪದೆ೦ಗಿ ಗಸಿ, ಕನಿಲೆ ಪದೆಂಗಿ ಪಲ್ಯ ಹೀಗೆ ಸುಮಾರು 25 ಬಗೆಯ ತೆನಸುಗಳ ರುಚಿಯನ್ನು ಸವಿದರು.