ವೇಣೂರು : ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣವನ್ನು ಮೈಗೂಡಿಸಿಕೋಂಡು ಸಮಾಜದ ಆಸ್ತಿಯಾಗಬೇಕು ,ಅಪರಾಧ ಮಕ್ತ ,ದುಶ್ಚಟ ಮುಕ್ತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆಯೆಂದು ಅಂಡಿಂಜೆ ಸರಕಾರಿ ಶಾಲೆಯ ಅಧ್ಯಾಪಕರಾದ ಶಶಿಧರ ಕೆ ಅಂಡಿಂಜೆ ನುಡಿದರು, ಅವರು ಯುವವಾಹಿನಿ (ರಿ) ವೇಣೂರು ಘಟಕದ ವಿದ್ಯಾರ್ಥಿ ವಿಭಾಗದ ಉದ್ಘಾಟನೆಯನ್ನು ವೇಣೂರು ಲಯನ್ಸ್ ಭವನದಲ್ಲಿ ನೇರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿರಾಕೇಶ್ ಕುಮಾರ್ ಮಡುಕೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿವೇತನದ ಬಗ್ಗೆ ವಿವರ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ ವಹಿಸಿದ್ದರು . ವೇದಿಕೆಯಲ್ಲಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ನಿತೀಶ್ ಎಚ್ , ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯ ಯೋಗೀಶ್ ಪೂಜಾರಿ ,ವಿದ್ಯಾರ್ಥಿ ವಿಭಾಗದ ಅಧ್ಯಕ್ಷ ಧನುಷ್ ಹಾಗೂ ಕಾರ್ಯದರ್ಶಿ ಸುಜ್ನಾನ್ ಉಪಸ್ಥಿತರಿದ್ದರು . ಘಟಕದ ನಿರ್ದೇಶಕರಾದ ಸತೀಶ್ ಪಿ ಎನ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಘಟಕದ ಕೋಶಧಿಕಾರಿ ಹರೀಶ್ ಪಿ ಎಸ್, ಸಲಹೆಗಾರರಾದ ಹರೀಶ್ ಪೂಜಾರಿ ಪೊಕ್ಕಿ ಭಾಗವಹಿಸದ್ದರು, ಘಟಕದ ಉಪಾಧ್ಯಕ್ಷರಾದ ಅರುಣ್ ಕೋಟ್ಯಾನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಪೂಜಾರಿ ಕರಿಮಣೇಲು ಧನ್ಯವಾದ ಸಲ್ಲಿಸಿದರು.