ಕೂಳೂರು : ಮಾನವನ ದೇಹದಲ್ಲಿ ಸಮತೋಲನ ಎಷ್ಟು ಮುಖ್ಯವೋ ಅದೇ ರೀತಿ ಭೂಮಿಯ ಸಮತೋಲನವೂ ತುಂಬಾ ಮುಖ್ಯ ಎಂದು ಮಂಗಳೂರು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಪ್ರೊಫೆಸರ್ ರಾಧಾಕೃಷ್ಣ ತಿಳಿಸಿದರು
ಇವರು ದಿನಾಂಕ 07.07.19 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ ಗಿಡ ಬೆಳೆಸಿ ಮರ ಉಳಿಸೋಣ-ವನಮಹೋತ್ಸವ ನಾಡಿನ ಜೀವೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್ ರವರು ವಹಿಸಿದ್ದರು. ಕಾರ್ಯಕ್ರಮವನ್ನು ಅತಿಥಿಗಳು ಸೇರಿ ಗಿಡಗಳಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು. ಇನ್ನೋರ್ವ ಮುಖ್ಯ ಅತಿಥಿ ಅರಣ್ಯ ಇಲಾಖೆಯ ರೇಂಜ್ ಆಫೀಸರ್ ಶ್ರೀಧರ್ ಮಾತನಾಡಿ ಅಭಿವೃದ್ಧಿ ಹೆಸರಲ್ಲಿ ಭೂಮಿ ನಾಶವಾಗುತ್ತಿದೆ. ನಮಗೆ ಶುದ್ಧ ಕುಡಿಯುವ ನೀರು ಹಾಗೂ ಶುದ್ಧ ಗಾಳಿ ಬೇಕಾದರೆ ಮರಗಳು ತುಂಬ ಮುಖ್ಯ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ತಾರಾ. ಯು. ರಾವ್ ರವರು ಮಾತನಾಡಿ ನಾವು ಮರಗಳನ್ನು ಬೆಳೆಸಿ, ಕಾಪಾಡಬೇಕು. ಮುಂದಿನ ಪೀಳಿಗೆಗೆ ಮರ ಉಳಿಸಬೇಕು ಎಂದರು. ಯುವವಾಹಿನಿ ಕೂಳೂರು ಘಟಕದ ಸಲಹೆಗಾರರಾದ ನೇಮಿರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ್ – ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕಾವೂರು, ಯುವವಾಹಿನಿ ಕೇಂದ್ರ ಸಮಿತಿ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ, ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಉಪಾಧ್ಯಕ್ಷರಾದ ಪವಿತ್ರ. ಯು. ಅಮೀನ್, ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ನಿಶಿತ್, ಕಾಲೇಜು ಪ್ರಾಂಶುಪಾಲರು, 25 ಮಂದಿ ಯುವವಾಹಿನಿ ಸದಸ್ಯರು ಹಾಗೂ 75 ಮಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳ ವಂದಿಸಿದರು. ಕೊನೆಗೆ ಅತಿಥಿಗಳು, ಯುವವಾಹಿನಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಸೇರಿ ಒಟ್ಟು 70 ಗಿಡಗಳನ್ನು ನೆಟ್ಟರು.