ಉಪ್ಪಿನಂಗಡಿ : ಬೃಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಂತೆ ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುದರ ಜೊತೆಗೆ ಬಿಲ್ಲವ ಯುವಕರು ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಮೂಲ್ಕಿ- ಮೂಡಬಿದಿರೆಯ ಶಾಸಕರಾದ ಉಮನಾಥ ಕೋಟ್ಯಾನ್ ಇವರು ತಿಳಿಸಿದರು.
ಅವರು ದಿನಾಂಕ 29.06.2019 ರಂದು ಉಪ್ಪಿನಂಗಡಿಯ ಸಂಘಮ ಕೃಪಾದಲ್ಲಿ ನಡೆದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಉಪ್ಪಿನಂಗಡಿ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಖ್ಯಾ ಬಲದಲ್ಲಿ ಬಲಿಷ್ಠವಾಗಿರುವ ನಾವು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದೇವೆ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ನಮ್ಮ ಸ್ಥಾನಮಾನ ಪಡೆಯುವಲ್ಲಿ ಯುವವಾಹಿನಿಯಂತ ಶ್ರೇಷ್ಠ ಸಂಘಟನೆಯ ಯುವಕರಿಂದ ಮಾತ್ರ ಸಾಧ್ಯ , ಈ ನಿಟ್ಟಿನಲ್ಲಿ ಕಾರ್ಯ ಪೃವೃತ್ತರಾಗಬೇಕಾದ ಅಗತ್ಯವಿದೆ ಎಂದು ತಿಳಿಸಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಅಜೀತ್ ಕುಮಾರ್ ಪಾಲೇರಿ ವಹಿಸಿದ್ದರು.
ಯುವವಾಹಿನಿ ಉಪ್ಪಿನಂಗಡಿ ಘಟಕದ 2018-19ನೇ ಸಾಲಿನ ಪ್ರಗತಿಯ ಮುನ್ನೋಟ “ಯುವದರ್ಶಿನಿ” ಕಿರು ಹೊತ್ತಿಗೆಯನ್ನು ಮಡಂತ್ಯಾರಿನ ಉದ್ಯಮಿ ಯೋಗೀಶ್ ಕಡ್ತಿಲ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ನೂತನವಾಗಿ ಆಯ್ಕೆಯಾದ ಮೂಲ್ಕಿ – ಮೂಡಬಿದಿರೆಯ ಶಾಸಕರಾದ ಉಮನಾಥ ಕೋಟ್ಯಾನ್ , ನಿವೃತ್ತ ಪೋಲಿಸ್ ನಿರೀಕ್ಷಕರಾದ ಸುದರ್ಶನ್ , ನಿವೃತ್ತ ದೈಹಿಕ ಶಿಕ್ಷರಾದ ಬೊಮ್ಮಯ ಬಂಗೇರ ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು ಇವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಿಸಿ ಅಭಿನಂದಿಸಲಾಯಿತು. 2019-20 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು ನೆರವೇರಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ ಪೋಲಿಸ್ ನಿರೀಕ್ಷಕರಾದ ಸುದರ್ಶನ್, ತುಳು ಮತ್ತು ಕನ್ನಡ ಚಲನ ಚಿತ್ರ ನಟಿ ಅಂಕಿತಾ ಪಟ್ಲ , ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಡಾ. ರಾಜರಾಮ್ ಕೆ.ಬಿ ಘಟಕದ ಗೌರವ ಸಲಹೆಗಾರರಾದ ಗೋಪಾಲ ಸುವರ್ಣ, ವರದ್ರಾಜ್ ಎಂ, ನೂತನ ಅಧ್ಯಕ್ಷರಾದ ಡಾ.ಆಶಿತ್ ಎಂ ವಿ ಕಾರ್ಯದರ್ಶಿ ಅನಿಲ್ ಕುಮಾರ್ ದಡ್ಡು, ನೂತನ ಕಾರ್ಯದರ್ಶಿ ಪುನೀತ್ ದಾಸರಮೂಲೆ ಉಪಸ್ಥಿತರಿದ್ದರು.
2018-19ನೇ ಸಾಲಿನ ಶ್ರೇಷ್ಠ ಸಾಧನೆಗಾಗಿ ಅಜೀತ್ ಕುಮಾರ್ ಪ್ರಜ್ನಾ ದಂಪತಿಗಳನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.
ಡಾ.ಸದಾನಂದ ಕುಂದರ್ ಪ್ರಸ್ತಾವನೆಗೈದರು. ನೂತನ ಪದಾಧಿಕಾರಿಗಳ ಪರಿಚಯವನ್ನು ಚುನಾವಣಾಧಿಕಾರಿಯಾದ ಅಶೋಕ್ ಕುಮಾರ್ ಪಡ್ಪು ವಾಚಿಸಿದರು. ಡೀಕಯ್ಯ ಗೌಂಡತ್ತಿಗೆ ಸ್ವಾಗತಿಸಿ , ಪುನೀತ್ ದಾಸರಮೂಲೆ ಧನ್ಯವಾದಗೈದು, ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಮೊದಲು ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.