ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಘಟಕದ ವತಿಯಿಂದ ವಿನೂತನ ವಾಗಿ ಜರಗಿದ ಮಾತೆಯರ ದಿನಾಚರಣೆಯ ಬಗ್ಗೆ ವಿಶೇಷ ಉಪನ್ಯಾಸ ವನ್ನು ಭಗವತಿ ಆರಾಧನೆಯ ಬಗ್ಗೆ ಪಿ.ಎಚ್.ಡಿ. ಮಾಡುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ್ ನೀಡಿದರು. ಹೆಣ್ಣು ಕ್ರಿಯಾಶೀಲ ಶಕ್ತಿ, ಪ್ರಕೃತಿ ಪುರುಷ ಜೊತೆ ಜೊತೆ ಯಾಗಿರುವ ದ್ರಾವಿಡ ಸಂಸ್ಕೃತಿಯಲ್ಲಿ ಪ್ರಾಚೀನ ಸಿಂಧೂ ಬಯಲಿನ ನಾಗರಿಕತೆಯ ಕಾಲದಿಂದಲೂ ಹೆಣ್ಣಿಗೆ ವಿಶೇಷ ಪ್ರಾಮುಖ್ಯತೆ ಯನ್ನು ನೀಡುತ್ತಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಸಂಧರ್ಭದಲ್ಲಿ ಪ್ರತಿಷ್ಠಾಪಿಸಲ್ಪಡುವ ನವದುರ್ಗೆಯರು ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ ಸಂಪೂರ್ಣ ಬಾಳ್ವೆಯ ವಿವಿಧ ಹಂತಗಳನ್ನು ತಿಳಿಸುತ್ತದೆ ಎಂದರು. ಶ್ರೀ ನಾರಾಯಣ ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಗೋಕರ್ಣನಾಥ ಕ್ಷೇತ್ರದಲ್ಲಿ ಸ್ತ್ರೀಯರಿಗೆ ಸಿಗುವ ವಿಶೇಷ ಗೌರವದ ಬಗ್ಗೆ ವಿವರಿಸಿದರು. ಸದಸ್ಯರ ತಾಯಂದಿರು, ಮಹಿಳಾ ಘಟಕದ ಸದಸ್ಯರು, ಯುವವಾಹಿನಿಯ ಮಂಗಳೂರು ಘಟಕದ ಮಾತೆಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಂಗಳೂರು ಘಟಕದ ಅಧ್ಯಕ್ಷ ರಾದ ಲಕ್ಷ್ಮೀನಾರಾಯಣ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.