ಪಣಂಬೂರು : ನಾಳಿನ ಸುಂದರ ಭವಿಷ್ಯಕ್ಕಾಗಿ ವಿದ್ಯೆಗೆ ಪ್ರೊತ್ಸಾಹ ಅಗತ್ಯ. ಈ ಮೂಲಕ ಯುವವಾಹಿನಿ ಬ್ರಹತ್ ಶಕ್ತಿಯಾಗಿ ರೂಪುಗೊಂಡಿದೆ. ಯುವವಾಹಿನಿ (ರಿ) ಪಣಂಬೂರು- ಕುಳಾಯಿ ಘಟಕವು ಈ ನಿಟ್ಟಿನಲ್ಲಿ ಚೆನ್ನಾಗಿ ಕೆಲಸ ಮಾಡಿದೆ ಎಂದು ಮಂಗಳೂರು ವಿಶ್ವವಿಧ್ಯಾನಿಲಯದ ನಿವೃತ್ತ ಉಪಕುಲಸಚಿವ ಪ್ರಭಾಕರ ನೀರುಮಾರ್ಗ ಹೇಳಿದರು.
ದಿನಾಂಕ 12.05.2019ರಂದು ನವ ಮಂಗಳೂರು ಬಂದರು ಮಂಡಳಿ, ಪಣಂಬೂರು ಇದರ ಸಭಾಂಗಣದಲ್ಲಿ ಯುವವಾಹಿನಿ (ರಿ) ಪಣಂಬೂರು – ಕುಳಾಯಿ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೆ. ಸಾದು ಪೂಜಾರಿ “ವಜ್ರದುಂಬಿ” ಕುಳಾಯಿ ಸಭಾಕಾರ್ಯಕ್ರಮವನ್ನು ನಾರಾಯಣಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಚುಣಾವಣಾಧಿಕಾರಿಯಾದ ಉದಯ ಆರ್ ರವರು ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ ಬ್ರಹ್ಮಶ್ರೀನಾರಾಯಣಗುರುಗಳ ತತ್ವ ಸಂದೇಶದ ಅಡಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಕರಲ್ಲಿ ಜಾಗೃತಿಯನ್ನು ಮೂಡಿಸಿ ಮುಖ್ಯ ವಾಹಿನಿಗೆ ತರುವಲ್ಲಿ ಯುವವಾಹಿನಿಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ನಿಟ್ಟಿನಲ್ಲಿ ಗುರುಗಳ ಸಂದೇಶವನ್ನು ಸಮಾಜದ ಮನೆ ಮನೆಗೆ ತಲುಪಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಂತಹ ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಕಾರ್ಯಕ್ರಮವು ಶ್ಲಾಘನೀಯವಾದದ್ದು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಪಡುಬಿದ್ರಿ ಆಯುರ್ವೇದ ಇಂಡಸ್ಟ್ರಿಯ ಮಾಲಕ ಡಾ ಎನ್ ಟಿ ಅಂಚನ್ ಮಾರ್ಗದರ್ಶನವಿತ್ತರು.
ಎಸ್ ಎಸ್ ಎಲ್ ಸಿಯ ಪ್ರತಿಭಾವಂತ ವಿದ್ಯಾರ್ಥಿಗಳಾದ ನಿಶಾ, ದೀಕ್ಷಿತಾ, ಪ್ರಥಮ್, ದರ್ಶಿತ್ ಪೂಜಾರಿ ,ದ್ವಿತೀಯ ಪಿಯುಸಿಯ ಸಿಂಚನಾ ಎಲ್ ಬಂಗೇರ, ರಶ್ಮಿ ಜೆ ಅಂಚನ್, ಸುಕ್ಷೀತಾ, ಧನ್ಯಶ್ರೀ, ಜಾಗ್ರತಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಸದಸ್ಯರು, 3 ಮಂದಿ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಜಯಂತ್ ನಡುಬೈಲು ದಂಪತಿಗಳನ್ನು ಮತ್ತು ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಅಧ್ಯಕ್ಷ ಜಗದೀಶ್ ಸುವರ್ಣ ದಂಪತಿಗಳನ್ನು ಸನ್ಮಾನಿಸಲಾಯುತು.
ನೂತನ ಅಧ್ಯಕ್ಷರು ತಮ್ಮ ಪ್ರಥಮ ಭಾಷಣದಲ್ಲಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದುದಕ್ಕೆ ಕೃತಜ್ಞತೆ ತಿಳಿಸುತ್ತಾ ಅವರ ಅಧಿಕಾರದ ಅವಧಿಯಲ್ಲಿ ಸರ್ವರ ಸಹಕಾರ ಕೋರಿದರು.
ಘಟಕದ ಅಧ್ಯಕ್ಷರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ತನ್ನ ಅಧಿಕಾರದ ಅವಧಿಯಲ್ಲಿ ತನಗೆ ಸಲಹೆ, ಸಹಕಾರವಿತ್ತ ಎಲ್ಲರಿಗೂ ಕೃತಜ್ಞತೆ ಅರ್ಪಿಸಿ ಮುಂದಿನ ಸಾಲಿನ ಅಧ್ಯಕ್ಷರಿಗೆ ಮತ್ತು ಸರ್ವ ಸದಸ್ಯರಿಗೆ ತನ್ನ ಸಹಕಾರದ ಭರವಸೆ ನೀಡಿದರು.
ಸುಜಾತ ಕುಳಾಯಿ ಪ್ರಸ್ತಾವಿಸಿದರು. ಅಧ್ಯಕ್ಷ ಜಗದೀಶ್ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಆರ್ ವರದಿ ವಾಚಿಸಿದರು. ನೂತನ ಅಧ್ಯಕ್ಷ ಸುರೇಶ್ ಪೂಜಾರಿ, ನಿಯೋಜಿತ ಕಾರ್ಯದರ್ಶಿ ರಂಜನ್ ಕೋಟ್ಯಾನ್ ಕುಳಾಯಿ ಹಾಗೂ 16 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪದಪ್ರದಾನ ನೀಡಲಾಯಿತು. ಕಾರ್ಯದರ್ಶಿ ರಂಜನ್ ಕೋಟ್ಯಾನ್ ಕುಳಾಯಿ ಧನ್ಯವಾದ ಅರ್ಪಿಸಿದರು. ಸಂಜೀವ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.