ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 14-1-2017 ರಂದು ಕೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಸುವರ್ಣ ಆರೋಗ್ಯಕ್ಕೆ ಸುರಕ್ಷಾ ಯೋಜನೆಗಳು ಎಂಬ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಂಯೋಜಕರಾದ ಜಗನ್ನಾಥ್ ಶಿರ್ಲಾಲ್‌ರವರು ಆರೋಗ್ಯ ಸುರಕ್ಷಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಸರಕಾರದಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸುರಕ್ಷಾ ಯೋಜನೆಗಳಿದ್ದು, ಆಯೋಜನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಜನರು ಪಡೆದುಕೊಂಡು ಅದರ ಸದುಪಯೋಗ ಮಾಡಬೇಕೆಂದು ತಿಳಿಸಿದರು. ಮೊದಲನೆಯದಾಗಿ:
ವಾಜಪೇಯಿ ಸುರಕ್ಷಾ ಯೋಜನೆ: ಇದು ಬಿಪಿಎಲ್ ಕಾರ್ಡ್ ಸದಸ್ಯರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ತೃತೀಯ ಹಂತದ ಕಾಯಿಲೆಯಾದ ಹೃದಯ ರೋಗ, ಕ್ಯಾನ್ಸರ್, ಬ್ರೈನ್ ಟ್ಯೂಮರ್, ಸುಟ್ಟ ಗಾಯ ಕಿಡ್ನಿ, ಸ್ಟೋನ್ ಮುಂತಾದ ಅನಾರೋಗ್ಯಕ್ಕೆ ಒಳಪಟ್ಟವರು ಇದರ ಉಪಯೋಗ ಪಡೆಯಬಹುದೆಂಬ ಮಾಹಿತಿಯನ್ನು ತಿಳಿಸಿದರು.
ರಾಜೀವ್ ಆರೋಗ್ಯ ಭಾಗ್ಯ: ಇದು ಎಪಿಎಲ್ ಕಾರ್ಡು ಇರುವವರಿಗೂ ಕೂಡ ಅನ್ವಯಿಸುತ್ತದೆ. ಇದರ ಪ್ರಕಾರ 70% ಸರಕಾರವು ಪಾವತಿಸುತ್ತದೆ ಹಾಗೂ 30% ಮನೆಯವರು ಪಾವತಿಸಬೇಕಾಗುತ್ತದೆ.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ: ಇದು 0-18 ವರ್ಷದ ಒಳಗಿನ ಮಕ್ಕಳಿಗೆ ಈ ಯೋಜನೆಯು ಉಪಯೋಗವಾಗುತ್ತದೆ.
ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ: ಅಪಘಾತಕ್ಕೆ ಒಳಪಟ್ಟವರಿಗೆ 25,000/- ರೂಪಾಯಿಯವರೆಗೆ ಉಚಿತ ಚಿಕಿತ್ಸೆ.
ಇಂದಿರಾ ಸುರಕ್ಷಾ ಯೋಜನೆ: ರೈತರಿಗೆ ಅನ್ವಯಿಸುತ್ತದೆ.
ರಾಷ್ಟ್ರೀಯ ಸೇವಾಭೀಮಾ ಯೋಜನೆ (RSBY): ಅಸಂಘಟಿತ ಕಾರ್ಮಿಕರಿಗೆ ರೂ. 30,000/- ವರೆಗೆ ಇದರ ಉಪಯೋಗ.
ಹಿರಿಯ ನಾಗರಿಕ ರಾಷ್ಟ್ರೀಯ ಸೇವಾ ಭೀಮಾ ಯೋಜನೆ: 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಈ ಸುರಕ್ಷಾ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು.
ಜ್ಯೋತಿ ಸಂಜೀವಿನಿ ಭಾಗ್ಯ.
ಯಶಸ್ವಿನಿ ಯೋಜನೆ: ಹಾಲು ಉತ್ಪಾದಕ ಸಂಘ ಹಾಗೂ ಸಹಕಾರಿ ಸೇವಾ ಸಂಘದ ಸದಸ್ಯರಿಗೆ
ಟಾಕ್ ಕ್ಲಿಯರ್ ಸುರಕ್ಷಾ ಯೋಜನೆ: 6 ತಿಂಗಳಿನಿಂದ 8 ವರ್ಷದ ಒಳಗಿನ ಕಿವುಡ ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ.
ಹೀಗೆ ಒಟ್ಟು 10 ಸುರಕ್ಷಾ ಯೋಜನೆಗಳ ಬಗ್ಗೆ ತಿಳಿಸಿ ಇದು ಮಂಗಳೂರಿನ ಯಾವೆಲ್ಲಾ ಆಸ್ಪತ್ರೆಗೆ ಅನ್ವಯಿಸುತ್ತದೆ ಎಂಬ ಮಾಹಿತಿಯನ್ನು ಸಭೆಗೆ ತಿಳಿಸಿದರು. ಅಧ್ಯಕ್ಷ ಸುಜಿತ್‌ರಾಜ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಶ್ರೀಮತಿ ಪವಿತ್ರ ಅಂಚನ್‌ರವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.