ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಸಮ ಸಮಾಜದ ಸರ್ವ ಸಮಾನತೆಯ ಜ್ಞಾನ ಜ್ಯೋತಿ ಬಸವಣ್ಣ ಜಯಂತಿ ಯುವವಾಹಿನಿಯ ಸಭಾಂಗಣ ದಲ್ಲಿ ಆಚರಿಸಲಾಯಿತು. ಸಾಹಿತಿ ಚಿಂತಕಿ ಶ್ರೀಮತಿ ಜ್ಯೋತಿ ಇರ್ವತ್ತೂರು ಇವರು ಬಸವಣ್ಣ ಜಯಂತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿ
ಯುವವಾಹಿನಿಯಂತಹ ಬಿಲ್ಲವ ಸಂಘಟನೆ ಯೊಂದು ಬಸವಣ್ಣ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ. ಸಮ ಸಮಾಜದ ಸಮಾನತೆಯ ತಳಹದಿಯಲ್ಲಿ ಕೆಲಸಮಾಡಿದ ನಾರಾಯಣ ಗುರು, ಬಸವಣ್ಣ, ಪೆರಿಯಾರ್, ಕಾರ್ಲ್ ಮಾರ್ಕ್ಸ್ ಮುಂತಾದವರು ನಮಗೆಲ್ಲ ಆದರ್ಶ ಎಂದರು.
12 ನೇ ಶತಮಾನದ ಬಸವಣ್ಣವರು ಆಧ್ಯಾತ್ಮವನ್ನು ವಚನಗಳ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸಿದರು. ಮೌಖಿಕ ವಾಗಿ ಒಬ್ಬರಿಂದ ಒಬ್ಬರಿಗೆ ಹೇಳುತ್ತಾ ಮನನ ಮಾಡುವ ವಚನಗಳ ಮೂಲಕ ಮೇಲು ಕೀಳು ಜಾತಿ ಮತ ಲಿಂಗ ಬೇಧವಿಲ್ಲದ ಸರ್ವ ಸಮಾನತೆ ಯ ಧರ್ಮದ ಮೂಲಕ ಶ್ರಮಜೀವಿಗಳೆಲ್ಲರಲ್ಲಿ ಜಾಗ್ರತಿಯನ್ನು ಮೂಡಿಸುತ್ತಾ ಜನರಿಗೆ ಆಧ್ಯಾತ್ಮಿಕ ಜ್ಞಾನವನ್ನು ನೀಡಿದರು. ದೇವರನ್ನು ಹೊರಗಡೆ ಹುಡುಕಿಕೊಂಡು ಅಲೆದಾಡಿ ಏನು ಪ್ರಯೋಜನವಿಲ್ಲ ನಮ್ಮೊಳಗೆ ದೇವರನ್ನು ಕಾಣಬೇಕು, ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ, ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೆನ್ನ ಹೊನ್ನ ಕಲಶವಯ್ಯ ಎನ್ನುವ ನಮ್ಮೊಳಗೆ ದೇವರನ್ನು ಕಾಣುವ ಜ್ಞಾನದ ಮಾರ್ಗವನ್ನು ತೋರಿಸಿದರು. ನಾರಾಯಣ ಗುರುಗಳ ತತ್ವಾಧರ್ಶಗಳು ಮತ್ತು ಬಸವಣ್ಣ ರವರ ತತ್ವಾಧರ್ಶಗಳನ್ನು ಒಂದೇ ಉದ್ಧೇಶವನ್ನು ಹೊಂದಿದೆ ಎಂದರು. ಯುವವಾಹಿನಿ(ರಿ) ಮಂಗಳೂರು ಘಟಕದ ಅಧ್ಯಕ್ಷ ರಾದ ಲಕ್ಷ್ಮೀನಾರಾಯಣ ರವರು ಸಭೆಯ ಅಧ್ಯಕ್ಷತೆ ಯನ್ನು ವಹಿಸಿದ್ದರು.